ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಪಾಲ್ಗೊಳ್ಳುವಿಕೆ ಮೇಲಿನ 'ನಿಷೇಧ' ತೆರವು

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಆದೇಶದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ: 58 ವರ್ಷಗಳ ಹಿಂದಿನ ʻಅಸಂವಿಧಾನಿಕʼ ಆದೇಶವನ್ನು ಮೋದಿ ಸರ್ಕಾರ ಹಿಂಪಡೆದಿದೆ ಎಂದು ಹೇಳಿದ್ದಾರೆ.

Update: 2024-07-22 06:53 GMT

ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ ಮೇಲಿನ ʻನಿಷೇಧʼವನ್ನು ತೆಗೆದುಹಾಕಲಾಗಿದೆ ಎಂದು ಕಳೆದ ವಾರ ಹೊರಡಿಸಿದ್ದ ಸರ್ಕಾರಿ ಆದೇಶವನ್ನು ಕಾಂಗ್ರೆಸ್ ಭಾನುವಾರ (ಜುಲೈ 21) ಆಕ್ಷೇಪಿಸಿದೆ.

ಕಾಂಗ್ರೆಸ್ ನಾಯಕರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸರ್ಕಾರಿ ಆದೇಶದ ಸತ್ಯಾಸತ್ಯತೆಯನ್ನು ತಕ್ಷಣವೇ ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ, ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಆದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಮೋದಿ ಸರ್ಕಾರವು 58 ವರ್ಷಗಳ ಹಿಂದೆ ಹೊರಡಿಸಿದ್ದ ಅಸಾಂವಿಧಾನಿಕ ನಿರ್ದೇಶನವನ್ನು ಹಿಂಪಡೆದಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ವಾಗ್ದಾಳಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಜುಲೈ 9 ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ (ಡಿಒಪಿಟಿ) ಹೊರಡಿಸಿದ್ದಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆಗೆ ಸಂಬಂಧಿಸಿದ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. 

ʻ30.11.1966, 25.07.1970 ಮತ್ತು 28.10.1980 ರ ಕಚೇರಿ ಟಿಪ್ಪಣಿಗಳನ್ನು ಪರಿಶೀಲಿಸಲಾಗಿದೆ. ಮೇಲಿನ ಆದೇಶಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರು ತೆಗೆದುಹಾಕಲು ನಿರ್ಧರಿಸಲಾಗಿದೆ,ʼ ಎಂದು ಆದೇಶ ಹೇಳಿದೆ. 

ʻಗಾಂಧೀಜಿಯವರ ಹತ್ಯೆ ನಂತರ ಫೆಬ್ರವರಿ 1948 ರಲ್ಲಿ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್ ನ್ನು ನಿಷೇಧಿಸಿದ್ದರು. ಆನಂತರ, ಉತ್ತಮ ನಡವಳಿಕೆಯ ಆಶ್ವಾಸನೆ ಮೇರೆಗೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಇದಾದ ನಂತರವೂ ನಾಗಪುರದಲ್ಲಿ ಆರ್‌ಎಸ್‌ಎಸ್ ಎಂದಿಗೂ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ. 1966 ರಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ ಮೇಲೆ ನಿಷೇಧ ಹೇರಲಾಯಿತು,ʼ ಎಂದು ರಮೇಶ್ ಹೇಳಿದರು. 

ʻಜೂನ್ 4, 2024 ರ ನಂತರ ಸ್ವಯಂ ಅಭಿಷಿಕ್ತ ಅಜೈವಿಕ ಪ್ರಧಾನ ಮಂತ್ರಿ ಮತ್ತು ಆರ್‌ಎಸ್‌ಎಸ್‌ ನಡುವಿನ ಸಂಬಂಧ ವಿಷಮಿಸಿ ದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ಜುಲೈ 9, 2024 ರಂದು ತೆಗೆದುಹಾಕಲಾಯಿತು,ʼ ಎಂದರು. 

ʻಅಧಿಕಾರಶಾಹಿ ಈಗ ಚಡ್ಡಿಗಳಲ್ಲಿ ಬರಬಹುದು ಎಂದುಕೊಂಡಿದ್ದೇನೆʼ ಎಂದು ರಮೇಶ್ ಹೇಳಿದರು. ಆರ್‌ಎಸ್‌ಎಸ್‌ ಸಮವಸ್ತ್ರವನ್ನು 2016 ರಲ್ಲಿ ಖಾಕಿ ಚಡ್ಡಿಯಿಂದ ಖಾಕಿ ಪ್ಯಾಂಟಿಗೆ ಬದಲಿಸಲಾಯಿತು.

ಆರೆಸ್ಸೆಸ್ ಮತ್ತು ಜಮಾತ್-ಎ-ಇಸ್ಲಾಮಿ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಿದ್ದ ನವೆಂಬರ್ 30, 1966 ರ ಆದೇಶದ ಸ್ಕ್ರೀನ್‌ಶಾಟ್ ನ್ನು ರಮೇಶ್‌ ಅವರು ಹಂಚಿಕೊಂಡಿದ್ದಾರೆ.

ಅಸಂವಿಧಾನಿಕ ಆದೇಶ: ಬಿಜೆಪಿ

ಬಿಜೆಪಿಯ ಅಮಿತ್ ಮಾಳವೀಯ, ʻ58 ವರ್ಷಗಳ ಹಿಂದೆ 1966 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ ಮೇಲಿನ ನಿಷೇಧ ಹೇರಿದ್ದ ಅಸಂವಿಧಾನಿಕ ಆದೇಶವನ್ನು ಮೋದಿ ಸರ್ಕಾರ ಹಿಂಪಡೆದಿದೆ,ʼ ಎಂದು ಹೇಳಿದ್ದಾರೆ. ಮೂಲ ಆದೇಶವನ್ನು ಜಾರಿಗೊಳಿಸಲೇ ಬಾರದಿತ್ತು ಎಂದು ಅವರು ಹೇಳಿದರು.

ಆದೇಶದ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, 58 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿತ್ತು. ಮೋದಿ ಸರಕಾರ ಈ ಆದೇಶವನ್ನು ಹಿಂಪಡೆದಿದೆ ಎಂದರು.

Tags:    

Similar News