ಸ್ಪೀಕರ್ ಹಕ್ಕು 'ಕಿತ್ತುಕೊಳ್ಳಲಾಗಿದೆ': ಅಖಿಲೇಶ್‌

Update: 2024-08-08 13:37 GMT

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಪ್ರತಿಪಕ್ಷಗಳು ಅವರಿಗಾಗಿ ಹೋರಾಡಬೇಕಾಗುತ್ತದೆ ಎಂದು

ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಅವರು ಗುರುವಾರ (ಆಗಸ್ಟ್ 8) ಎಂದು ಹೇಳಿದರು. ಅಖಿಲೇಶ್ ಅವರ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. 

ಅಖಿಲೇಶ್‌ ಅವರು ವಕ್ಫ್ (ತಿದ್ದುಪಡಿ) ಮಸೂದೆ 2024 ರ ಚರ್ಚೆ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್ ಹಕ್ಕುಗಳ ಕುರಿತು ಮಾತನಾಡಿ, ʻ ನಿಮ್ಮ ಮತ್ತು ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ನೀವು ಪ್ರಜಾಪ್ರಭುತ್ವದ ನ್ಯಾಯಾಧೀಶರು ಎಂದು ನಾನು ಹೇಳಿದ್ದೆ. ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಮಾತುಗಳನ್ನು ಲಾಬಿಯಲ್ಲಿ ಕೇಳಿದ್ದೇನೆ. ನಾವು ನಿಮಗಾಗಿ ಹೋರಾಡಬೇಕಾಗುತ್ತದೆ,ʼ ಎಂದು ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಶಾ, ʻಇದು ಸಭಾಪತಿಗೆ ಮಾಡಿದ ಅವಮಾನ. ಸಭಾಧ್ಯಕ್ಷರ ಹಕ್ಕುಗಳು ಪ್ರತಿಪಕ್ಷಗಳಿಗೆ ಸೇರಿಲ್ಲ.ಇಡೀ ಸದನಕ್ಕೆ ಸೇರುತ್ತದೆ. ದುಂಡಾವರ್ತಿ ಮಾತನಾಡಬೇಡಿ. ನೀವು ಸ್ಪೀಕರ್ ಹಕ್ಕುಗಳ ರಕ್ಷಕರಲ್ಲ,ʼ ಎಂದು ಹೇಳಿದರು.

ʻಸದಸ್ಯರು ಅಧ್ಯಕ್ಷರ ಬಗ್ಗೆ ವೈಯಕ್ತಿಕ ಟೀಕೆ ಮಾಡಬಾರದು. ಇದು ನನ್ನ ನಿರೀಕ್ಷೆ,ʼ ಎಂದು ಬಿರ್ಲಾ ಹೇಳಿದರು.

ವಕ್ಫ್ (ತಿದ್ದುಪಡಿ) ಮಸೂದೆ ಕುರಿತು ಮಾತನಾಡಿದ ಅಖಿಲೇಶ್, ʻಇತರ ಧಾರ್ಮಿಕ ಸಂಸ್ಥೆಗಳಲ್ಲಿ ಇದನ್ನು ಮಾಡದಿರುವಾಗ ಮುಸ್ಲಿಮೇತರ ರನ್ನು ವಕ್ಫ್ ಮಂಡಳಿಗಳಲ್ಲಿ ಸೇರಿಸುವುದರಲ್ಲಿ ಏನು ಅರ್ಥವಿದೆ? ಬಿಜೆಪಿ ತನ್ನ ಬೆಂಬಲಿಗರನ್ನು ಸಮಾಧಾನಪಡಿಸಲು ಈ ಮಸೂದೆ ತಂದಿದೆ,ʼ ಎಂದು ಹೇಳಿದರು.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. ವಿರೋಧ ಪಕ್ಷಗಳು ವಿರೋಧದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಪ್ರಸ್ತಾಪಿಸಲಾಯಿತು.

Tags:    

Similar News