ಬಿಜೆಪಿ ಜತೆ ಯಾವುದೇ ಸಂಬಂಧವಿಲ್ಲ: ಪಳನಿಸ್ವಾಮಿ

Update: 2024-02-12 06:34 GMT

ಕೃಷ್ಣಗಿರಿ (ತಮಿಳುನಾಡು), ಫೆ 11: ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷದೊಂದಿಗೆ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಹೇಳಿದೆ. ಇತರ ರಾಜಕೀಯ ಪಕ್ಷಗಳು ʻಸುಳ್ಳು ಸಂದೇಶಗಳನ್ನು ಹರಡುತ್ತಿವೆʼ ಎಂದು ಆರೋಪಿಸಿದೆ.

ಕಳೆದ ವರ್ಷ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವ ದೃಢ ನಿಲುವು ತೆಗೆದುಕೊಂಡಿದ್ದು, ಇನ್ನು ಮುಂದೆ ಈ ಬಗ್ಗೆ ಪ್ರಶ್ನೆಗಳ ನ್ನು ಎತ್ತಬಾರದೆಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾಧ್ಯಮಗಳಿಗೆ ಮನವಿ ಮಾಡಿದರು. ʻಎಐಎಡಿಎಂಕೆಯು ಬಿಜೆಪಿಯೊಂದಿಗೆ ಮೈತ್ರಿ ಹೊಂದಿದೆ ಎಂದು ಕೆಲವು ರಾಜಕೀಯ ಪಕ್ಷಗಳು ಈಗಲೂ ಹೇಳುತ್ತಿವೆ. ನಾನು ಮತ್ತು ಪಕ್ಷದ ಹಿರಿಯ ನಾಯಕರು ಅನೇಕ ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದಾರೆ; ನಾವು ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಹೊಂದಿಲ್ಲ,ʼ ಎಂದು ಪಳನಿಸ್ವಾಮಿ ಹೇಳಿದರು. 

ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಳ್ಳಲು 2023 ರ ಸೆಪ್ಟೆಂಬರ್ 25 ರಂದು ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ʻಅವಿರೋಧʼ ನಿರ್ಣಯ ಅಂಗೀಕರಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಪಕ್ಷ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ ಎಂದು ಹೇಳಿದರು. 

ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಬಗ್ಗೆ ವ್ಯಂಗ್ಯವಾಡಿ, ʻಆಡಳಿತ ಪಕ್ಷ ತಮಿಳುನಾಡಿನ ಜನರನ್ನು ನಂಬುವ ಬದಲು ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ನಂಬುತ್ತದೆ. ನಮ್ಮದು ಜನರನ್ನು ನಂಬಿರುವ ಪಕ್ಷʼ ಎಂದು ಹೇಳಿದರು. 

Tags:    

Similar News