ಕೇರಳ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ತಿರುವು
ಆನಂದ್ ಹೆನ್ರಿ ತಮ್ಮ ಪತ್ನಿ ಮತ್ತು ಮಕ್ಕಳನ್ನು ಕೊಂದು, ತಾವು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.;
By : The Federal
Update: 2024-02-16 13:54 GMT
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕುಟುಂಬದ ನಾಲ್ವರು ಸದಸ್ಯರ ಸಾವು ಪ್ರಕರಣ ತಿರುವು ಪಡೆದುಕೊಂಡಿದೆ.
ಕಳೆದ ಸೋಮವಾರ ( ಫೆ.12) ರಂದು ಹೆನ್ರಿ (37) ಮತ್ತು ಅವರ ಪತ್ನಿ ಆಲಿಸ್ ಬೆಂಜಿಗರ್( 36) ಮನೆಯ ಸ್ನಾನಗೃಹದಲ್ಲಿ ಹಾಗೂ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದರು.
ಹೆನ್ರಿ ಹೆಸರಿನಲ್ಲಿ ನೋಂದಣಿಯಾದ 9 ಎಂಎಂ ಬಂದೂಕು ಸ್ಥಳದಲ್ಲಿ ಕಂಡುಬಂದಿತ್ತು. ಈ ಸಾವುಗಳಿಗೆ ಹೆನ್ರಿ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಹೆನ್ರಿ ತಮ್ಮ ಪತ್ನಿ ಮತ್ತು ಮಕ್ಕಳನ್ನು ಕೊಂದು, ತಾವು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಮೂಲದ ದಂಪತಿ ಹೆನ್ರಿ, ಮೆಟಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಆನಂತರ ತಮ್ಮದೇ ಎಐ ಕಂಪನಿ ಸ್ಥಾಪಿಸಿದ್ದರು. ಬೆಂಜಿಗರ್ ದತ್ತಾಂಶ ವಿಜ್ಞಾನಿ. ಪ್ರಕರಣ ಶನಿವಾರ ಮಧ್ಯಾಹ್ನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.