ಹೆಬ್ಬಾಳ ಮೇಲ್ಸೇತುವೆ: ಬೈಕ್ ಬಿಟ್ಟು ಉಳಿದೆಲ್ಲ ವಾಹನ ನಿಷೇಧ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಮೇಲ್ಸೇತುವೆಯಲ್ಲಿ ಎರಡು ಪ್ರತ್ಯೇಕ ಭಾಗಗಳನ್ನು ನಿರ್ಮಿಸಿರುವುದು ಇದಕ್ಕೆ ಕಾರಣ.;
ಬೆಂಗಳೂರು ನಗರದ ನಾಗವಾರ ಮತ್ತು ಕೆಆರ್ ಪುರದಿಂದ ಹೆಬ್ಬಾಳ ಮತ್ತು ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದ ಮೇಲ್ಸೇತುವೆ ಪ್ರವೇಶಕ್ಕೆ ( ಏಪ್ರಿಲ್ 17) ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದೆಲ್ಲ ವಾಹನಗಳನ್ನು ನಿಷೇಧಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಮೇಲ್ಸೇತುವೆಯಲ್ಲಿ ಎರಡು ಪ್ರತ್ಯೇಕ ಭಾಗಗಳನ್ನು ನಿರ್ಮಿಸಲು ಬಿಡಿಎ ಕಾಮಗಾರಿ ನಡೆಸಲಿದೆ. ಈಗಿರುವ ಫ್ಲೈಓವರ್ ನ ಎರಡು ಭಾಗಗಳನ್ನು ತೆರವು ಮಾಡಲು ತಯಾರಿ ನಡೆಸುತ್ತಿದ್ದು, ಕೆ. ಆರ್ ಪುರಂ ಮೇಲ್ಸೇತುವೆ ಮುಖ್ಯ ಫ್ಲೈಓವರ್‌ನ ಮಾರ್ಗಗಳಿಗೆ ಸೇರುವ ಜಂಕ್ಷನ್ ಬಳಿ ಸ್ಟಲ್ಪ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ.
ಬಿಡಿಎ ಈಗಾಗಲೇ ಫ್ಲೈಓವರ್‌ನಲ್ಲಿ ಹೊಸ ಅಡೆತಡೆಗಳನ್ನು (ಕ್ರ್ಯಾಶ್ ಬ್ಯಾರಿಯರ್) ಸ್ಥಾಪಿಸಲು ಅಳವಡಿಕೆ ಆರಂಭವಾಗಿದೆ. ಇದರಿಂದಾಗಿ ಹೊಸ ಟ್ರ್ಯಾಕ್‌ಗಳನ್ನು ನಿರ್ಮಿಸಬಹುದು. ನಾಗವಾರದಿಂದ ಮೇಖ್ರಿ ವೃತ್ತದ ಕಡೆಗೆ ಬರುವ ವಾಹನಗಳು ಮೇಲ್ಸೇತುವೆಯಿಂದ ಕೆಳಗೆ ಹೋಗಿ, ಹೆಬ್ಬಾಳ ವೃತ್ತದಲ್ಲಿ ಬಲಕ್ಕೆ ತಿರುಗಿ ಉತ್ತರಕ್ಕೆ ಒಂದು ಕಿಲೋಮೀಟರ್‌ಗಿಂತ ಸ್ವಲ್ಪ ಹೆಚ್ಚು ಚಲಿಸುವಂತೆ ಮತ್ತು ನಗರದ ಕಡೆಗೆ ಸರ್ವಿಸ್ ರಸ್ತೆ ಮತ್ತು ಹೆಬ್ಬಾಳ ಫ್ಲೈಓವರ್ ಲೂಪ್ ಸೇರಲು ಕೊಡಿಗೇಹಳ್ಳಿ ಸಿಗ್ನಲ್ ಮೊದಲು ಯು-ಟರ್ನ್ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ ಎನ್ ಅನುಚೇತ್ ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು
ಕೆಆರ್ ಪುರದಿಂದ ನಗರಕ್ಕೆ: ಐಒಸಿ-ಮುಕುಂದ ಥಿಯೇಟರ್ ರಸ್ತೆ ಮೂಲಕ ಸಾಗಬೇಕು.
ಲಿಂಗರಾಜಪುರಂ ಮೇಲ್ಸೇತುವೆ, ಮತ್ತು ನಾಗವಾರ-ಟ್ಯಾನರಿ ರಸ್ತೆ ಮೂಲಕ ಚಲಿಸಬೇಕು.
ಹೆಗ್ಡೆನಗರ ಮತ್ತು ಥಣಿಸಂದ್ರ: ಜಿಕೆವಿಕೆ-ಜಕ್ಕೂರು ರಸ್ತೆ ಹೆಬ್ಬಾಳ ಮೇಲ್ಸೇತುವೆಗೆ ಸೇರಲಿದೆ.
ಕೆಆರ್ ಪುರಂನಿಂದ ಯಶವಂತಪುರ: ಮೇಲ್ಸೇತುವೆಯ ಕೆಳಗೆ ಪ್ರಯಾಣಿಸಿ ಮತ್ತು ಬಿಇಎಲ್ ವೃತ್ತ ಮತ್ತು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಮೂಲಕ ಹೋಗಬೇಕು.
ಹೆಣ್ಣೂರು, ಎಚ್‌ಆರ್‌ಬಿಆರ್ ಲೇಔಟ್, ಬಾಣಸವಾಡಿ, ಕೆಆರ್ ಪುರಂ ಮತ್ತು ಕೆ.ಜಿ.ಹಳ್ಳಿಯಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು: ಹೆಣ್ಣೂರು-ಬಾಗಲೂರು ರಸ್ತೆ ಮೂಲಕ ಚಲಿಸಬೇಕು.
ಬದಲಾವಣೆ ಏಕೆ
ಮಂಗಳವಾರ ( ಏಪ್ರಿಲ್ 16) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ ಎನ್ ಅನುಚೇತ್, ‘’ಬೆಂಗಳೂರು ನಗರದಲ್ಲಿ ಸುಮಾರು 1.16 ಕೋಟಿ ನೋಂದಾಯಿತ ವಾಹನಗಳಿದ್ದು, ಪ್ರತಿ ದಿನ ಪೀಕ್ ಅವರ್‌ನಲ್ಲಿ ನಗರದ ರಸ್ತೆಗಳಲ್ಲಿ 50 ಲಕ್ಷದಿಂದ 60 ಲಕ್ಷ ವಾಹನಗಳು ಸಂಚರಿಸುತ್ತವೆ. ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ಖಾಸಗಿ ವಾಹನಗಳನ್ನು ಹೊಂದಿದೆ. ಇದು ನಮ್ಮ ಟ್ರಾಫಿಕ್‌ನ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಾಹನ ದಟ್ಟಣೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ನಮ್ಮಉದ್ದೇಶ ಸಂಚಾರ ನಿರ್ವಹಣೆಯೇ ಹೊರತು ಬಲವಂತದ ಕ್ರಮಗಳಲ್ಲ’’ ಎಂದು ಅವರು ಹೇಳಿದರು.
ʼʼನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಅನುಷ್ಠಾನಗೊಳಿಸುತ್ತಿರುವ 28 ಅಡಾಪ್ಟಿವ್ ಸಿಗ್ನಲ್‌ಗಳಲ್ಲದೆ, ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಅಭಿವೃದ್ಧಿಪಡಿಸಿದ 165 COSICOST AI ಸಿಗ್ನಲ್‌ಗಳನ್ನು ಬೆಂಗಳೂರು ಸಂಚಾರ ಪೊಲೀಸರು ಜಾರಿಗೆ ತರಲಿದ್ದಾರೆ. ಈ ಯೋಜನೆಯು ಮುಂದಿನ ಆರರಿಂದ ಎಂಟು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು ಸಿಗ್ನಲ್ ಸಮಯವನ್ನು ಉತ್ತಮಗೊಳಿಸುತ್ತದೆ" ಎಂದು ಅವರು ಹೇಳಿದರು.