‘ಕಾಂತಾರ’ ಸಿನಿತಂಡಕ್ಕೆ ಅಭಿನಂದಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಕಾಂತಾರ: ಚಾಪ್ಟರ್ 1ವಿಶ್ವದಾದ್ಯಂತ 700 ಕೋಟಿ ರೂ. ಗಳಿಸಿದೆ. ಚಿತ್ರಕ್ಕೆ ರಿಷಬ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಹೊರತಂದಿದೆ.
ಹೆಚ್ ಡಿ ದೇವೇಗೌಡ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʻಕಾಂತಾರ: ಚಾಪ್ಟರ್ 1ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸುತ್ತಾ ದೇಶಾದ್ಯಂತ ಸಿನಿ ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ಇದೀಗ ಈ ಸಿನಿಮಾಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಟ ರಿಷಬ್ ಶೆಟ್ಟಿ ಅವರು ದೇವೇಗೌಡರನ್ನು ಭೇಟಿಯಾದ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. “ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಆತ್ಮೀಯ ಸ್ವಾಗತ ಮತ್ತು ಸೌಜನ್ಯಪೂರ್ಣ ಪ್ರಶಂಸೆಗೆ ನಾವು ವಿನಮ್ರವಾಗಿ ಧನ್ಯವಾದ ತಿಳಿಸುತ್ತೇವೆ. ನಮ್ಮ ಸಾಂಸ್ಕೃತಿಕ ಸಾರ ಮತ್ತು ಪರಂಪರೆಯ ಉತ್ಸವವನ್ನು ಚಿತ್ರವು ಹೇಗೆ ಅಳವಡಿಸಿಕೊಂಡಿದೆ ಎಂಬುದರ ಕುರಿತು ದೇವೇಗೌಡರ ಹೃದಯಂಗಮವಾದ ಮಾತುಗಳನ್ನು ಕೇಳುವುದು ನಿಜವಾಗಿಯೂ ಒಂದು ಗೌರವ. ದೈವಿಕ ದೃಶ್ಯಾವಳಿ ‘#BlockbusterKantara’ ಈಗ ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ ಎಂದು ಹೇಳಿದೆ.
ದೇಶದಾದ್ಯಂತ ಅಭಿಮಾನಿಗಳು ಕಾಂತಾರ ಕ್ರೇಜ್ ನಲ್ಲಿ ಮುಂದುವರೆಯುತ್ತಿದ್ದು, ಕಥನಶೈಲಿಯ ವೈಶಿಷ್ಟ್ಯತೆ, ಸಾಂಸ್ಕೃತಿಕ ಆಳತೆ ಹಾಗೂ ರಿಷಬ್ ಶೆಟ್ಟಿ ಅವರ ನೈಜ ಚಲನಚಿತ್ರ ನಿರ್ಮಾಣದ ನಿಷ್ಠೆಗೆ ಭಾರೀ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಬರೆದುಕೊಂಡಿದೆ.
ಕಾಂತಾರ: ಚಾಪ್ಟರ್ 1ವಿಶ್ವದಾದ್ಯಂತ 700 ಕೋಟಿ ರೂ. ಗಳಿಸಿದೆ. ಚಿತ್ರಕ್ಕೆ ರಿಷಬ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿದ್ದಾರೆ. ವಿಜಯ್ ಕಿರಗಂದೂರು ಅವರ ಹೋಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ಹೊರತಂದಿದೆ. ಅ.2ರಂದು ಬಿಡುಗಡೆಯಾದ ಈ ಚಿತ್ರವು ಪ್ರೇಕ್ಷಕರನ್ನು ಕ್ರಿಸ್ತಶಕದ 4ನೇ ಶತಮಾನಕ್ಕೆ ಕೊಂಡೊಯ್ದಿತ್ತು. ಒಂದು ಪವಿತ್ರ ನೆಲದ ಪುರಾತನ ಇತಿಹಾಸವನ್ನು ಅನಾವರಣಗೊಳಿಸಿದೆ. ಈ ಚಿತ್ರವು ಶತಮಾನಗಳ ಹೋರಾಟ, ದೈವೀ ಹಸ್ತಕ್ಷೇಪ ಮತ್ತು ಜನಪದ ಕತೆಗಳ ಸಂಯೋಜನೆಯಾಗಿದ್ದು, ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್ ಹಾಗೂ ಇತರರು ಈ ಅದ್ಭುತ ಕಥೆಯನ್ನು ಜೀವಂತಗೊಳಿಸಿದ್ದಾರೆ.