ಬಾಂಗ್ಲಾ: ಕಟ್ಟಡದಲ್ಲಿ ಬೆಂಕಿ, 43 ಮಂದಿ ಸಾವು
ಏಳು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 43 ಜನರು ಸಾವಿಗೀಡಾದ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದೆ.;
ಢಾಕಾ, ಮಾ 1: ಏಳು ಅಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 43 ಜನರು ಸಾವಿಗೀಡಾದ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದೆ.
ಬಾಂಗ್ಲಾ ದೇಶದ ಆರೋಗ್ಯ ಸಚಿವ ಡಾ.ಸಮಂತ ಲಾಲ್ ಸೇನ್ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಶುಕ್ರವಾರ ಮುಂಜಾನೆ 2 ಗಂಟೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಟ್ಟಡದ ಮೊದಲ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಗುರುವಾರ ರಾತ್ರಿ 9:50 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ರೆಸ್ಟೋರೆಂಟ್‌ಗಳು ಮತ್ತು ಗಾರ್ಮೆಂಟ್ಸ್ ಅಂಗಡಿ ಇರುವ ಮೇಲಿನ ಮಹಡಿಗಳಿಗೆ ಬೆಂಕಿ ತ್ವರಿತವಾಗಿ ಹಬ್ಬಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ 75 ಮಂದಿಯನ್ನು ಏಳು ಅಂತಸ್ತಿನ ಕಟ್ಟಡದಿಂದ ಹೊರತೆಗೆಯಲಾಗಿದೆ. 13 ಅಗ್ನಿಶಾಮಕ ಸೇವಾ ಘಟಕಗಳು ಕಾರ್ಯ ನಿರ್ವಹಿಸಿವೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದ ಪಾರಾಗಲು ಜನರು ಮೇಲಿನ ಮಹಡಿಗೆ ಧಾವಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಏಣಿಗಳನ್ನು ಬಳಸಿ ಹಲವರನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.
ಪಿಟಿಐ
(ಶೀರ್ಷಿಕೆಯನ್ನು ಹೊರತುಪಡಿಸಿ, ಈ ಕಥೆಯನ್ನು ಫೆಡರಲ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಸ್ವಯಂ-ಪ್ರಕಟಿಸಲಾಗಿದೆ.)