Naxals Surrender Live | ನಕ್ಸಲ್‌ಮುಕ್ತ ಕರ್ನಾಟಕ: ಶರಣಾಗಿರುವ ನಕ್ಸಲರು ಮತ್ತೆ ಚಿಕ್ಕಮಗಳೂರಿಗೆ?
ಶರಣಾಗತಿ ಬಳಿಕ ನಕ್ಸಲರು ಚಿಕ್ಕಮಗಳೂರಿಗೆ ವಾಪಸ್?
ಶರಣಾಗತಿ ಪ್ರಕ್ರಿಯೆ ಮುಗಿದ ಬಳಿಕ ಇಂದು ರಾತ್ರಿಯೇ ನಕ್ಸಲರನ್ನು ಚಿಕ್ಕಮಗಳೂರಿಗೆ ರವಾನಿಸಲಿದ್ದಾರೆ. ನಕ್ಸಲರ ವಿರುದ್ಧ ಬೆಂಗಳೂರಿನಲ್ಲಿ ಯಾವುದೇ ಪ್ರಕರಣಗಳಿಲ್ಲ. ಚಿಕ್ಕಮಗಳೂರಿನಲ್ಲೇ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಾಪಸ್ ಕರೆದುಕೊಂಡು ಹೋಗಲಿದ್ದಾರೆ.
ಸಿಎಂ ಭೇಟಿ ಬಳಿಕ ಅಡುಗೋಡಿ ಮೈದಾನಕ್ಕೆ ನಕ್ಸಲರು
ಸಿಎಂ ಭೇಟಿ ಬಳಿಕ ನಕ್ಸಲರನ್ನು ಅಡುಗೋಡಿ ಪೊಲೀಸ್ ಗ್ರೌಂಡ್‌ಗೆ ಕರೆದೋಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಆ ಬಳಿಕ ನಕ್ಸಲರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅಧಿಕೃತವಾಗಿ ಬಂಧಿಸಲಿದ್ದಾರೆ.
ಸಿಎಂ, ಡಿಸಿಎಂ, ಗೃಹಸಚಿವರ ಎದುರು ನಕ್ಸಲರ ಶರಣಾಗತಿ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವಡಾ.ಜಿ.ಪರಮೇಶ್ವರ್ ಎದುರು ಶರಣಾದ ಆರು ಮಂದಿ ನಕ್ಸಲರು
ಸಿಎಂ ಅಧಿಕೃತ ನಿವಾಸಕ್ಕೆ ನಕ್ಸಲರಿಗಿಲ್ಲ ಎಂಟ್ರಿ
ಸಿಎಂ ಗೃಹ ಕಚೇರಿ ಕೃಷ್ಣಾದೊಳಗೆ ನಕ್ಸಲರಿಗೆ ಪ್ರವೇಶ ಅವಕಾಶ ನೀಡಿಲ್ಲ. ಸಿಎಂ ಅವರೇ ಹೊರಗೆ ಬಂದು ನಕ್ಸಲರನ್ನು ಭೇಟಿ ಮಾಡಲಿದ್ದಾರೆ. ಪ್ರೊಟೋಕಾಲ್ ಪ್ರಕಾರ ನಕ್ಸಲರ ಭೇಟಿಗೆ ಅವಕಾಶ ಮಾಡಿಕೊಟ್ಟಿರುವ ಗೃಹ ಇಲಾಖೆ, ಹೀಗಾಗಿ ಕಚೇರಿ ಆವರಣದಲ್ಲಿಯೇ ಸಿಎಂ ಎದುರು ಶರಣಾಗತಿ ಪ್ರಕ್ರಿಯೆ ಶುರು
ಶರಣಾಗತಿ ಬೆಂಗಳೂರಿಗೆ ಶಿಫ್ಟ್ ಆಗಿದ್ದೇಕೆ?
ಕರ್ನಾಟಕವನ್ನು ನಕ್ಸಲ್ ಮುಕ್ತ ಮಾಡುವ ಮತ್ತು ದೇಶ ಮಟ್ಟದಲ್ಲಿ ಇದೊಂದು ಪ್ರಮುಖ ಬೆಳವಣಿಗೆಯಾಗಿರುವ ಕಾರಣ ಮೈಲೇಜ್‌ಗಾಗಿಯೇ ಈ ಕಾರ್ಯಕ್ರಮವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.
ವಿವರ:
ಸಿಎಂ ಗೃಹ ಕಚೇರಿಗೆ ಆಗಮಿಸಿದ ನಕ್ಸಲರು
ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಶರಣಾಗಲಿರುವ ನಕ್ಸಲರ ಸಂಬಂಧಿಕರು