Wayanad Landslide LIVE | ಸಾವಿನ ಸಂಖ್ಯೆ 243ಕ್ಕೆ ಏರಿಕೆ; ಅಮಿತ್ ಶಾ ಮುನ್ಸೂಚನೆ ಹೇಳಿಕೆಗೆ ಕೇರಳ ಸಿಎಂ ತಿರುಗೇಟು

Update: 2024-07-31 04:45 GMT
Live Updates - Page 3
2024-07-31 06:21 GMT

ಅಗತ್ಯ ನೆರವು ಒದಗಿಸಲು ಸಿದ್ಧ: ಸಿಎಂ ಸಿದ್ದರಾಮಯ್ಯ

ಭೂ ಕುಸಿತದಿಂತ ತತ್ತರಿಸಿರುವ ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ದೂರವಾಣಿ ಮೂಲಕ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದರು. ಪರಿಹಾರ ಕಾರ್ಯದಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈ ಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ. ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

2024-07-31 06:11 GMT

ಕೇಂದ್ರ ಸಚಿವ ಕುರಿಯನ್ ಸಂತ್ರಸ್ತರನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದರು

2024-07-31 06:10 GMT

ರಕ್ಷಣಾ ಕಾರ್ಯಗಳನ್ನು ಪರಿಶೀಲಿಸುತ್ತಿರುವ ಕೇರಳದ ಸಚಿವರು

2024-07-31 06:01 GMT

ಕೇರಳ ಸಂತ್ರಸ್ತರಿಗಾಗಿ ದೇಣಿಗೆ ನೀಡುವಂತೆ ಕಾರ್ಪೊರೇಟ್ ಸಂಸ್ಥೆಗಳಿಗೆ ಸಿಎಂ ಸಿದ್ದರಾಮಯ್ಯ ಮನವಿ 

ನೆರೆಯ ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತದಿಂದ ಹಾನಿಗೊಳಗಾದ ಜನರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸಲು ದೇಣಿಗೆ ನೀಡುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಮೇರೆಗೆ ಸಂತ್ರಸ್ತರ ಮನೆಗಳನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುವಂತೆ ಸಿದ್ಧರಾಮಯ್ಯ ಅವರು ಕಾರ್ಪೊರೇಟ್‌ ಸಂಸ್ಥೆಗಳಿಗೆ ಸಂದೇಶದಲ್ಲಿ ಎಚ್ಚರಿಸಿದ್ದಾರೆ.

ದೇಣಿಗೆ ನೀಡಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಕ.ಬಿ.ಶಿವಕುಮಾರ್ ಅವರನ್ನು 9482575918 ಸಂಪರ್ಕಿಸಬಹುದು.

2024-07-31 05:39 GMT

ರಕ್ಷಣಾ ಕಾರ್ಯಾಚರಣೆಗಳಿಗೆ ಇಂದು ಹವಾಮಾನ ಉತ್ತಮವಾಗಿದೆ: ಬ್ರಿಗೇಡಿಯರ್ ಅರ್ಜುನ್ ಸೆಗನ್‌


2024-07-31 05:36 GMT

ರಕ್ಷಣಾ ಕಾರ್ಯಾಚರಣೆಯಲ್ಲಿ ನೌಕಾಪಡೆಯ ತಂಡಗಳು ಭಾಗಿ

2024-07-31 05:32 GMT

ಸಂಸತ್‌ನಲ್ಲಿ ಮೌನಾಚರಣೆ


ಸಂಸತ್ತಿನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಮಹಾಸಭೆಯಲ್ಲಿ ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ಮೌನಾಚರಣೆ

2024-07-31 05:30 GMT

ವಯನಾಡು ದುರಂತದ ಕುರಿತು ಖರ್ಗೆ ಮಾತನಾಡಿರುವುದು:

2024-07-31 05:19 GMT

ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಸಿಪಿಐ

2024-07-31 05:16 GMT

ಹುಡುಕಾಟ ಮತ್ತು ರಕ್ಷಣಾ ಕಾರ್ಯದ ದೃಶ್ಯಗಳು

Tags:    

Similar News