Wayanad Landslide LIVE | ಸಾವಿನ ಸಂಖ್ಯೆ 243ಕ್ಕೆ ಏರಿಕೆ; ಅಮಿತ್ ಶಾ ಮುನ್ಸೂಚನೆ ಹೇಳಿಕೆಗೆ ಕೇರಳ ಸಿಎಂ ತಿರುಗೇಟು

Update: 2024-07-31 04:45 GMT
ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ | ಪಿಟಿಐ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಸ್ಥಳಗಳಲ್ಲಿ ಎರಡನೇ ದಿನವೂ ಕಣ್ಮರೆಯಾದ ಜನರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು, ಬದುಕುಳಿದವರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಮುಂದಾಗಿವೆ.

ಮಂಗಳವಾರ (ಜುಲೈ 30) ಮುಂಜಾವ ಭಾರೀ ಮಳೆಯ ನಡುವೆ ಕೇರಳದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಬಳಿ ಭಾರೀ ಭೂ ಕುಸಿತದಿಂದ ಈವರೆಗೆ, 243 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. 

ನೂರಾರು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿದ್ದು, ಸಾವು-ನೋವು ಸಂಭವಿಸುವ ಭೀತಿ ಎದುರಾಗಿದೆ.

ಸೇನೆ, ನೌಕಾಪಡೆ ಮತ್ತು NDRF ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬದುಕುಳಿದವರನ್ನು ಹೊರತೆಗೆಯಲು ಪ್ರಯತ್ನ ನಡೆಸಿವೆ. ಸಂತ್ರಸ್ತರಿಗೆ ನೆರವು ನೀಡಲು ಅನೇಕರು ಮುಂದಾಗಿದ್ದಾರೆ.

ಸರ್ಕಾರದ ಮೂಲಗಳ ಪ್ರಕಾರ, ವಯನಾಡ್ ಜಿಲ್ಲೆಯ ಮೆಪ್ಪಾಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿವೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾಳಾಗಿವೆ ಹಾಗಾಗಿ ಸಂಪರ್ಕವೂ ಕಡಿದುಕೊಂಡಿವೆ.

ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮೃತರ ದೇಹಗಳನ್ನು ಗುರುತಿಸಲು ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳ ಶವಾಗಾರಗಳಿಗೆ ಕೊಂಡೊಯ್ಯಲಾಗುತ್ತಿದೆ.

ಬದುಕುಳಿದವರನ್ನು ತ್ವರಿತವಾಗಿ ಸ್ಥಳಾಂತರಿಸಲು, ಸೂಲೂರಿನಿಂದ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ

ಹೆಚ್ಚಿನ ಲೈವ್ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://thefederal.com/category/live/wayanad-landslides-live-rescue-ops-continue-on-second-day-toll-143-136259?infinitescroll=1

Live Updates
2024-07-31 13:22 GMT

ಭೂ ಕುಸಿತದ ಬಗ್ಗೆ ಕಳೆದ 1800 ದಿನಗಳಲ್ಲಿ ಚಕಾರ ಎತ್ತದ ರಾಹುಲ್: ತೇಜಸ್ವಿ ಸೂರ್ಯ ಟೀಕಾಸ್ತ್ರ

ಲೋಕಸಭಾ ಕಲಾಪದ ವೇಳೆ ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಹಾಗೂ ನೆರೆಯಿಂದ ಜೀವ ಮತ್ತು ಸ್ವತ್ತು ಹಾನಿಯ ಬಗ್ಗೆ ನಡೆದ ಗಮನಸೆಳೆಯುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿ ಸೂರ್ಯ ವಯನಾಡ್ ಭೂ ಕುಸಿತದ ಬಗ್ಗೆ ಪ್ರಸ್ತಾಪಿಸಿದರು.  ವಯಾನಾಡ್‌ನ ಮಾಜಿ ಸಂಸದ ರಾಹುಲ್ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆಗೈದರು. 

ʻರಾಹುಲ್ ಗಾಂಧಿ ಅವರು ಕಳೆದ 1800 ದಿನಗಳಲ್ಲಿ ಭೂ ಕುಸಿತದ ಬಗ್ಗೆ ಚಕಾರ ಎತ್ತಲಿಲ್ಲ. ವಯಾನಾಡ್ ಪ್ರವಾಹದ ಬಗ್ಗೆಯೂ ರಾಹುಲ್ ಸೈಲೆಂಟ್ ಆಗಿದ್ದಾರೆ. 2020 ರಲ್ಲಿಯೇ ಮನೆಗಳನ್ನು ಸ್ಥಳಾಂತರ ಮಾಡಲು ಹೇಳಿತ್ತು, ಆದರೆ ಇಲ್ಲಿವರೆಗೂ ಈ ವಿಚಾರ ಮಾತನಾಡದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌  ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. 

ʻʻಅನಧಿಕೃತ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಕೇರಳ ವಿಪತ್ತು ನಿರ್ವಹಣಾ ಸಂಸ್ಥೆ ಶಿಫಾರಸು ಮಾಡಿತ್ತು. ಆದರೆ ಧಾರ್ಮಿಕ ಸಂಸ್ಥೆಗಳ ಒತ್ತಡದಿಂದಾಗಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿಲ್ಲ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಧಾರ್ಮಿಕ ಸಂಸ್ಥೆಗಳ ವಿರೋಧ ಇದೆ ಎಂದು ಕೇರಳ ಅರಣ್ಯ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದರುʼʼ ಎಂದು ಸೂರ್ಯ ಹೇಳಿದರು.

2024-07-31 12:19 GMT

ರಾಹುಲ್, ಪ್ರಿಯಾಂಕಾ ಗುರುವಾರ ವಯನಾಡಿಗೆ ಭೇಟಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಪುಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ವಯನಾಡ್‌ಗೆ ಭೇಟಿ ನೀಡಲಿದ್ದು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಹಲವಾರು ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಬುಧವಾರ ಬೆಳಿಗೆ, ವಯನಾಡ್‌ಗೆ ಭೇಟಿ ನೀಡಬೇಕಿತ್ತು. ಆದರೆ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನವಿದೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಅವರು ಭೇಟಿಯನ್ನು ಮುಂದೂಡಿದ್ದಾರೆ.

ಉಭಯ ನಾಯಕರು ಸರ್ಕಾರಿ ಹೈಯರ್ ಸೆಕಂಡರಿ ಶಾಲೆ ಮತ್ತು ಮೆಪ್ಪಾಡಿಯ ಸೇಂಟ್ ಜೋಸೆಫ್ ಯುಪಿ ಶಾಲೆಯಲ್ಲಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಮೆಪ್ಪಾಡಿಯ ಡಾ ಮೂಪನ್ ಮೆಡಿಕಲ್‌ ಕಾಲೇಜಿಗೂ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

2024-07-31 12:15 GMT

ಅಮಿತ್ ಶಾಗೆ ಕೇರಳ ಸಿಎಂ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ. ಅಮಿತ್‌ ಶಾ ಅವರು ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಹವಾಮಾನ ಇಲಾಖೆಯು ಕೇವಲ ಯಲ್ಲೋ ಮತ್ತು ಆರಂಜ್ ಅಲರ್ಟ್‌ ನೀಡುತ್ತವೆ.  ಭೂಕುಸಿದದ ಎಚ್ಚರಿಕೆಯನ್ನು ನೀಡುವುದಿಲ್ಲ ಎಂದಿದ್ದಾರೆ.

ಕೇಂದ್ರದಿಂದ ಭೂಕುಸಿತದ ಬಗ್ಗೆ ನಮಗೆ ದೊರೆತ ಮುನ್ಸೂಚನೆಯು 'ಭೂ ಕುಸಿತದ ಸಾಧ್ಯತೆ ಕಡಿಮೆ' ಎಂದು ವಿಜಯನ್ ಹೇಳಿದರು.

ಬುಧವಾರ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು,  ಪ್ರವಾಹ ಮತ್ತು ಭೂಕುಸಿತದ ಬಗ್ಗೆ ಮುನ್ಸೂಚನೆ ನೀಡಲಾಗಿತ್ತು ಮತ್ತು ಕೇರಳ ಸರ್ಕಾರಕ್ಕೆ ಜುಲೈ, 23 ರಿಂದ ಕೇಂದ್ರವು ಅನೇಕ ಮುನ್ಸೂಚನೆಯ ಎಚ್ಚರಿಕೆಗಳನ್ನು ನೀಡಿತ್ತು. ಒಂಬತ್ತು ಎನ್‌ಡಿಆರ್‌ಎಫ್‌ ತಂಡಗಳನ್ನೂ ಕೂಡ ಕೇರಳಕ್ಕೆ ಕಳುಹಿಸಲಾಗಿತ್ತುʼʼ ಎಂದು ಹೇಳಿದ್ದಾರೆ.

2024-07-31 10:30 GMT

ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ: 1,000 ಜನರ ರಕ್ಷಣೆ

ವಯನಾಡ್‌ನಲ್ಲಿ ಭೂಕುಸಿತದಿಂದ 200 ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.  ಸೇನಾ ಸಿಬ್ಬಂದಿ ಬುಧವಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವುಗೊಳಿಸಿದ್ದಾರೆ, ಸೇನೆಯು ಸುಮಾರು 70 ಶವಗಳನ್ನು ಹೊರತೆಗೆದಿದೆ ಮತ್ತು ಇದುವರೆಗೆ ಸುಮಾರು 1,000 ಜನರನ್ನು ರಕ್ಷಿಸಿದೆ ಎಂದು ಹೇಳಿದೆ.

ಡಿಫೆನ್ಸ್ ಸಕ್ಯುರಿಟಿ ಕಾರ್ಪ್ಸ್ (ಡಿಎಸ್‌ಸಿ) ಕೇಂದ್ರ, ಕಣ್ಣೂರು ಮತ್ತು 122 ಟಿಎ ಬೆಟಾಲಿಯನ್‌ನ ನಾಲ್ಕು ಕಾಲಂಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ರಕ್ಷಣಾ ತಂಡಗಳೊಂದಿಗೆ ಸಂಯೋಜಿತ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದುವರೆಗೆ ಸೇನೆಯು ಸುಮಾರು 70 ಶವಗಳನ್ನು ಹೊರತೆಗೆದಿದೆ ಮತ್ತು  ಸುಮಾರು 1,000 ಜನರನ್ನು ರಕ್ಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

2024-07-31 09:51 GMT

ಭೂಕುಸಿತದಲ್ಲಿ ಸಾವನ್ನಪ್ಪಿದ ಕನ್ನಡಿಗರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ: ಸಿಎಂ ಸಿದ್ದರಾಮಯ್ಯ

ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻʻಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದಿದ್ದಾರೆ.

ʻʻಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆʼʼ ಎಂದು ತಿಳಿಸಿದ್ದಾರೆ.

2024-07-31 09:23 GMT

2024-07-31 09:22 GMT

ಎನ್‌ಡಿಆರ್‌ಎಫ್‌ನ 9 ಬೆಟಾಲಿಯನ್‌ಗಳನ್ನು ಜುಲೈ 23 ರಂದು ಕೇರಳಕ್ಕೆ ಕಳುಹಿಸಲಾಗಿದೆ: ಶಾ 

2024-07-31 09:22 GMT

ವಯನಾಡ್‌ ಭೂಕುಸಿತ ಬಿಕ್ಕಟ್ಟಿನ ಮೇಲೆ ಪ್ರಧಾನಿ ಮೋದಿ ನಿಗಾ: ಕೇಂದ್ರ ಸಚಿವ ಕುರಿಯನ್

ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತದ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜಾರ್ಜ್‌ ಕುರಿಯನ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದ ಜನರನ್ನು ಭೇಟಿ ಮಾಡಿದ ಕುರಿಯನ್, ದುರಂತದಲ್ಲಿ ಸಂತ್ರಸ್ತರ ರಕ್ಷಣಾ ಪುಯತ್ನಗಳಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದರು.

"ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುತ್ತಿದೆ. ಪ್ರಧಾನ ಮಂತ್ರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಘಟನಶ ಸ್ಥಳಗಳಿಗೆ ಭೇಟಿ ನೀಡಲು ನನ್ನನ್ನು ನಿಯೋಜಿಸಿದ್ದಾರ "ಗೃಹ ಸಚಿವಾಲಯದ ಎರಡೂ ನಿಯಂತ್ರಣ ಕೊಠಡಿಗಳು 24X7 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿವೆ" ಎಂದು ಅವರು ಹೇಳಿದರು.

2024-07-31 09:18 GMT

ಕೇಂದ್ರ ನೀಡಿದ ಎಚ್ಚರಿಕೆಗಳ ಬಗ್ಗೆ ಕೇರಳ ಸರ್ಕಾರ ಗಮನಹರಿಸಿಲ್ಲ: ಅಮಿತ್ ಶಾ

ವಯನಾಡ್ ಭೂಕುಸಿತ ಘಟನೆಯಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆಯ ವೈಫಲ್ಯದ ಎಲ್ಲಾ ಆರೋಪಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಕೇಂದ್ರವು ಜುಲೈ 23 ರಂದು ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆಯನ್ನು ರವಾನಿಸಿತ್ತು ಮತ್ತು ನಂತರ ಪ್ರತಿದಿನ ಎಚ್ಚರಿಕೆಯನ್ನು ನೀಡಲಾಗಿತ್ತು, ಆದರೆ ಕೇರಳ ಸರ್ಕಾರ ಗಮನಿಸಲಿಲ್ಲ ಎಂದು ಶಾ ಹೇಳಿದ್ದಾರೆ.

ಮುನ್ನೆಚ್ಚರಿಕೆಗಳ ಹೊರತಾಗಿಯೂ ಕೇರಳ ಸರ್ಕಾರವು ಯಾವುದೇ ಸ್ಥಳಾಂತರಿಸುವ ಕ್ರಮಗಳನ್ನು ಅನುಸರಿಸಲಿಲ್ಲ ಎಂದು ಶಾ ಹೇಳಿದರು.

2024-07-31 08:03 GMT

ಆರೆಂಜ್ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

Tags:    

Similar News