ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ: 1,000 ಜನರ... ... Wayanad Landslide LIVE | ಸಾವಿನ ಸಂಖ್ಯೆ 243ಕ್ಕೆ ಏರಿಕೆ; ಅಮಿತ್ ಶಾ ಮುನ್ಸೂಚನೆ ಹೇಳಿಕೆಗೆ ಕೇರಳ ಸಿಎಂ ತಿರುಗೇಟು

ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ: 1,000 ಜನರ ರಕ್ಷಣೆ

ವಯನಾಡ್‌ನಲ್ಲಿ ಭೂಕುಸಿತದಿಂದ 200 ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.  ಸೇನಾ ಸಿಬ್ಬಂದಿ ಬುಧವಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವುಗೊಳಿಸಿದ್ದಾರೆ, ಸೇನೆಯು ಸುಮಾರು 70 ಶವಗಳನ್ನು ಹೊರತೆಗೆದಿದೆ ಮತ್ತು ಇದುವರೆಗೆ ಸುಮಾರು 1,000 ಜನರನ್ನು ರಕ್ಷಿಸಿದೆ ಎಂದು ಹೇಳಿದೆ.

ಡಿಫೆನ್ಸ್ ಸಕ್ಯುರಿಟಿ ಕಾರ್ಪ್ಸ್ (ಡಿಎಸ್‌ಸಿ) ಕೇಂದ್ರ, ಕಣ್ಣೂರು ಮತ್ತು 122 ಟಿಎ ಬೆಟಾಲಿಯನ್‌ನ ನಾಲ್ಕು ಕಾಲಂಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ರಕ್ಷಣಾ ತಂಡಗಳೊಂದಿಗೆ ಸಂಯೋಜಿತ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದುವರೆಗೆ ಸೇನೆಯು ಸುಮಾರು 70 ಶವಗಳನ್ನು ಹೊರತೆಗೆದಿದೆ ಮತ್ತು  ಸುಮಾರು 1,000 ಜನರನ್ನು ರಕ್ಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Update: 2024-07-31 10:30 GMT

Linked news