ಭೂ ಕುಸಿತದ ಬಗ್ಗೆ ಕಳೆದ 1800 ದಿನಗಳಲ್ಲಿ ಚಕಾರ ಎತ್ತದ... ... Wayanad Landslide LIVE | ಸಾವಿನ ಸಂಖ್ಯೆ 243ಕ್ಕೆ ಏರಿಕೆ; ಅಮಿತ್ ಶಾ ಮುನ್ಸೂಚನೆ ಹೇಳಿಕೆಗೆ ಕೇರಳ ಸಿಎಂ ತಿರುಗೇಟು
ಭೂ ಕುಸಿತದ ಬಗ್ಗೆ ಕಳೆದ 1800 ದಿನಗಳಲ್ಲಿ ಚಕಾರ ಎತ್ತದ ರಾಹುಲ್: ತೇಜಸ್ವಿ ಸೂರ್ಯ ಟೀಕಾಸ್ತ್ರ
ಲೋಕಸಭಾ ಕಲಾಪದ ವೇಳೆ ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಹಾಗೂ ನೆರೆಯಿಂದ ಜೀವ ಮತ್ತು ಸ್ವತ್ತು ಹಾನಿಯ ಬಗ್ಗೆ ನಡೆದ ಗಮನಸೆಳೆಯುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿ ಸೂರ್ಯ ವಯನಾಡ್ ಭೂ ಕುಸಿತದ ಬಗ್ಗೆ ಪ್ರಸ್ತಾಪಿಸಿದರು. ವಯಾನಾಡ್‌ನ ಮಾಜಿ ಸಂಸದ ರಾಹುಲ್ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆಗೈದರು.
ʻರಾಹುಲ್ ಗಾಂಧಿ ಅವರು ಕಳೆದ 1800 ದಿನಗಳಲ್ಲಿ ಭೂ ಕುಸಿತದ ಬಗ್ಗೆ ಚಕಾರ ಎತ್ತಲಿಲ್ಲ. ವಯಾನಾಡ್ ಪ್ರವಾಹದ ಬಗ್ಗೆಯೂ ರಾಹುಲ್ ಸೈಲೆಂಟ್ ಆಗಿದ್ದಾರೆ. 2020 ರಲ್ಲಿಯೇ ಮನೆಗಳನ್ನು ಸ್ಥಳಾಂತರ ಮಾಡಲು ಹೇಳಿತ್ತು, ಆದರೆ ಇಲ್ಲಿವರೆಗೂ ಈ ವಿಚಾರ ಮಾತನಾಡದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ʻʻಅನಧಿಕೃತ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಕೇರಳ ವಿಪತ್ತು ನಿರ್ವಹಣಾ ಸಂಸ್ಥೆ ಶಿಫಾರಸು ಮಾಡಿತ್ತು. ಆದರೆ ಧಾರ್ಮಿಕ ಸಂಸ್ಥೆಗಳ ಒತ್ತಡದಿಂದಾಗಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿಲ್ಲ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಧಾರ್ಮಿಕ ಸಂಸ್ಥೆಗಳ ವಿರೋಧ ಇದೆ ಎಂದು ಕೇರಳ ಅರಣ್ಯ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದರುʼʼ ಎಂದು ಸೂರ್ಯ ಹೇಳಿದರು.