Indo-Pak Conflict | ಕರ್ನಲ್‌ ಖುರೇಶಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ; ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ಆದೇಶ

Update: 2025-05-14 05:30 GMT
Live Updates - Page 2
2025-05-14 06:00 GMT

ಮೆಕ್ಕಾಗೆ ಹೊರಟ ಹಜ್ ಯಾತ್ರಿಕರ ಎರಡನೇ ತಂಡ

ಹಜ್ ಯಾತ್ರಿಕರ ಎರಡನೇ ತಂಡ  ಶ್ರೀನಗರದ ಹಜ್ ಹೌಸ್‌ನಿಂದ ವಿಮಾನ ನಿಲ್ದಾಣಕ್ಕೆ ಹೊರಡಿತು.  ಭಾರತ-ಪಾಕಿಸ್ತಾನ ಒಪ್ಪಂದದ ಬಳಿಕ ಅವರು ಸೌದಿ ಅರೇಬಿಯಾದ ಮೆಕ್ಕಾಗೆ ತೆರಳುತ್ತಿದ್ದಾರೆ. ಶ್ರೀನಗರದಿಂದ ಹಜ್ ಯಾತ್ರಿಕರ ಮೊದಲ ತಂಡವು ಮೇ 4ರಂದು ಹೊರಟಿತ್ತು. 

2025-05-14 05:42 GMT

ಕದನ ವಿರಾಮದಿಂದ ಪಕ್ಷಗಳು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲಿ; ವಿಶ್ವಸಂಸ್ಥೆಯ ವಕ್ತಾರರು

ಭಾರತ ಮತ್ತು ಪಾಕಿಸ್ತಾನಗಳು ಯುದ್ಧವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದಿರುವುದರಿಂದ "ನಾವು ಉತ್ತಮ ಸ್ಥಳದಲ್ಲಿದ್ದೇವೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರರು ಹೇಳಿದ್ದಾರೆ.  

"ಕದನ ವಿರಾಮ ಮುಂದುವರೆದಿದೆ. ನಾವು ಮೊದಲಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಕದನ ವಿರಾಮ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಪಕ್ಷಗಳು ತಮ್ಮ ನಡುವಿನ ಬಾಕಿ ಇರುವ ಹಲವಾರು ಸಮಸ್ಯೆಗಳನ್ನು ನಿಭಾಯಿಸಲು ಇದನ್ನು ಬಳಸುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜಾರಿಕ್ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. 

2025-05-14 05:37 GMT

ಉತ್ತರಾಖಂಡದಲ್ಲಿ ತಿರಂಗ ಯಾತ್ರೆ

ಭಾರತೀಯ ಸಶಸ್ತ್ರ ಪಡೆಗಳ ಗೌರವಾರ್ಥವಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಡೆಹ್ರಾಡೂನ್‌ನಲ್ಲಿ 'ತಿರಂಗ ಶೌರ್ಯ ಸಮ್ಮಾನ್ ಯಾತ್ರೆ' ನಡೆಸಲಾಗುತ್ತಿದೆ.


Tags:    

Similar News