ಅನಮತಿ ಇಲ್ಲದೇ ರಸ್ತೆ ಮೇಲೆ ಪಾಕ್​ ಧ್ವಜ ಅಂಟಿಸಿ ಪ್ರತಿಭಟನೆ, 6 ಜನ ವಶಕ್ಕೆ

ಬಜರಂಗದಳದ ಕೆಲ ಕಾರ್ಯಕರ್ತರು ಸ್ಥಳಕ್ಕೆ ಬಂದು ಪಾಕಿಸ್ತಾನದ ಮೇಲಿನ ದ್ವೇಷಕ್ಕಾಗಿ ರಸ್ತೆಗಳ ಮೇಲೆ ಸ್ಟೀಕರ್ ಅಂಟಿಸಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ.;

Update: 2025-04-26 14:21 GMT

ಪಹಲ್ಗಾಮ್‌ ಹತ್ಯಾಕಾಂಡ – ಕಲ್ಬುರ್ಗಿಯ ರಸ್ತೆಯಲ್ಲಿ ಪಾಕ್‌ ಧ್ವಜ ಅಂಟಿಸಿ ಆಕ್ರೋಶ 

ಕಲಬುರಗಿಯ ಜಗತ್ ವೃತ ಹಾಗೂ ನ್ಯಾಷನಲ್ ಚೌಕ್​ನ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟಿಕ್ಕರ್‌ಗಳನ್ನು ಅಂಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪರಿಣಾಮ ಕರ್ನಾಟಕದ ಮೂವರು ಸೇರಿದಂತೆ ಒಟ್ಟು 28 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿಯ ಜಗತ್ ವೃತ ಹಾಗೂ ನ್ಯಾಷನಲ್ ಚೌಕ್​ನ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟಿಕ್ಕರ್‌​ಗಳನ್ನು ಸಾಲಾಗಿ ಅಂಟಿಸಲಾಗಿತ್ತು. ಆದರೆ ಪ್ರತಿಭಟನೆಗೆ ಯಾವುದೇ ಅನುಮತಿ ಪಡೆದಿರಲಿಲ್ಲ.  ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪಾಕಿಸ್ತಾನ ಧ್ವಜದ ಸ್ಟಿಕ್ಕರ್‌ ಅಂಟಿಸಿದಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಅನುಮತಿ ಪಡೆಯದೆ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದಕ್ಕಾಗಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಇನ್ನು ಮುಂದೆ ಯಾವುದೇ ರೀತಿಯ ಪ್ರತಿಭಟನೆ ಮಾಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಪ್ರತಿಭಟನೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮನವಿ ಮಾಡಿದ್ದಾರೆ. 

Tags:    

Similar News