ವೇತನ ಸಿಗದೆ ಓಲಾ ಕಂಪನಿ ಸಿಬ್ಬಂದಿ ಆತ್ಮಹತ್ಯೆ: ಸಿಇಓ ವಿರುದ್ಧ ಎಫ್‌ಐಆರ್

ಕುಟುಂಬದವರು ಕಂಪನಿಯ ಹೆಚ್.ಆರ್. ವಿಭಾಗದವರನ್ನು ವಿಚಾರಿಸಿದರೂ ಅವರು ಅಸ್ಪಷ್ಟ ಮಾಹಿತಿಯನ್ನು ನೀಡಿರುವುದಾಗಿ ಆರೋಪಿಸಲಾಗಿದೆ. ಬಳಿಕ ಪೊಲೀಸರು ಅರವಿಂದ್ ರೂಮಿನಿಂದ ಸಿಕ್ಕ ಡೆತ್ ನೋಟ್ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Update: 2025-10-20 11:04 GMT
ಸಾಂದರ್ಭಿಕ ಚಿತ್ರ
Click the Play button to listen to article

ಸಂಬಳ ಮತ್ತು ಭತ್ಯೆ ನೀಡದೆ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಮೇರೆಗೆ ಓಲಾ ಕಂಪನಿಯ ಇಂಜಿನಿಯರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಂಪನಿಯ ಸಿಇಓ ಭವೇಶ್ ಅಗರ್ವಾಲ್ ಹಾಗೂ ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೃತನಾದ ಕೆ. ಅರವಿಂದ್ ಓಲಾ ಕಂಪನಿಯ ಹೋಮೋಲೋಗೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವೇತನ ಹಾಗೂ ಭತ್ಯೆ ನೀಡದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಆತ 28 ಪುಟಗಳ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ. ಕುಟುಂಬಕ್ಕೆ ಅರವಿಂದ್‌ನ ವೇತನ ಎರಡು ದಿನಗಳ ಬಳಿಕವೇ ಖಾತೆಗೆ ಜಮೆಯಾಗಿದ್ದು ಅನುಮಾನಕ್ಕೆ ಗ್ರಾಸವಾಗಿಸಿದೆ. ಅರವಿಂದ್ ನಿಧನವಾದ ನಂತರ ಖಾತೆಗೆ 17. 46 ಲಕ್ಷ ರೂಪಾಯಿ ಜಮೆಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕುಟುಂಬದವರು ಕಂಪನಿಯ ಹೆಚ್.ಆರ್. ವಿಭಾಗದವರನ್ನು ವಿಚಾರಿಸಿದರೂ ಅವರು ಅಸ್ಪಷ್ಟ ಮಾಹಿತಿಯನ್ನು ನೀಡಿರುವುದಾಗಿ ಆರೋಪಿಸಲಾಗಿದೆ. ಬಳಿಕ ಪೊಲೀಸರು ಅರವಿಂದ್ ರೂಮಿನಿಂದ ಸಿಕ್ಕ ಡೆತ್ ನೋಟ್ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡೆತ್ ನೋಟ್‌ನಲ್ಲಿ ಕಂಪನಿಯ ಒಳಗಿನ ವಂಚನೆ, ವೇತನದ ತಡೆ ಹಾಗೂ ಅಧಿಕಾರಿಗಳ ನಡವಳಿಕೆ ಕುರಿತು ಅರವಿಂದ್ ಬರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಥಮಿಕ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Similar News