Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ

Update: 2024-04-26 02:17 GMT
Live Updates - Page 2
2024-04-26 06:17 GMT

ಮತದಾನ ಮಾಡುವುದು ಎಲ್ಲರ ಆದ್ಯ ಕರ್ತವ್ಯ, ಎಲ್ಲರೂ ತಪ್ಪದೇ ಮತದಾನ ಮಾಡಬೇಕು: ಸುತ್ತೂರು ಶ್ರೀಗಳು

ಸುತ್ತೂರು ದೇಶೀಕೇಂದ್ರ ಶ್ರೀಗಳು ಸುತ್ತೂರಿನಲ್ಲಿ ಮತದಾನ ಮಾಡಿದರು. ಆ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ʻʻವರುಣ ವಿಧಾನಸಭಾ ವ್ಯಾಪ್ತಿಗೆ ಬರುವ ಸುತ್ತೂರು ಲೋಕಸಭಗೆ ಚುನಾವಣೆ ನಡೆಯುತ್ತಿದೆ. ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವುದು ಅವರ ಆದ್ಯ ಕರ್ತವ್ಯಬಾಗಿದೆ ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕುʼʼ ಎಂದು ಹೇಳಿದರು.

2024-04-26 05:51 GMT

ಸ್ವಾಭಿಮಾನಿ ಕನ್ನಡಿಗರೇ, ಕರ್ನಾಟಕದ ಅಸ್ಮಿತೆಯನ್ನು ಉಳಿಸಿ: ಕುಸುಮಾ ಹನುಮಂತರಾಯಪ್ಪ

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆಗೆ ಮತದಾನ ಮಾಡಿದರು.

ಮತದಾನದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻಭಾರತೀಯಳಾಗಿ ನನ್ನ ಹಕ್ಕನ್ನು ಚಲಾಯಿಸಿ, ಕನ್ನಡತಿಯಾಗಿ ನನ್ನ ಆತ್ಮಸಾಕ್ಷಿಯಂತೆ ಕರ್ತವ್ಯ ನಿರ್ವಹಿಸಿದ್ದೇನೆ. ಸ್ವಾಭಿಮಾನಿ ಕನ್ನಡಿಗರೇ, ಕರ್ನಾಟಕದ ಅಸ್ಮಿತೆಯನ್ನು ಉಳಿಸಿ, ಕಾಪಾಡುವ ವ್ಯಕ್ತಿಯನ್ನು ಬೆಂಬಲಿಸಿʼʼ ಎಂದು ಬರೆದುಕೊಂಡಿದ್ದಾರೆ.

Full View

2024-04-26 05:44 GMT

ಬಿಜೆಪಿಯ ಅಸಮಾಧಾನಿತ ನಾಯಕ ಮಾಧುಸ್ವಾಮಿ ಮತದಾನ

ಬಿಜೆಪಿಯ ಅಸಮಾಧಾನಿತ ನಾಯಕ, ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಕುಟುಂಬದ ಜೊತೆಗೆ ಚಿಕ್ಕನಾಯಕನಹಳ್ಳಿಯ ಜೆಸಿ ಪುರ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ

2024-04-26 05:31 GMT

ತುಮಕೂರಿನಲ್ಲಿ ಗೃಹ ಸಚಿವರಿಂದ ಮತದಾನ

ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪತ್ನಿಯೊಂದಿಗೆ ತುಮಕೂರಿನ ಸಿದ್ಧಾರ್ಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದರು.

2024-04-26 05:28 GMT

ತಂದೆ-ತಾಯಿಯೊಂದಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಮತದಾನದಲ್ಲಿ ಭಾಗಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ತಂದೆ-ತಾಯಿಯ ಜೊತೆ ಮತದಾನ ಮಾಡಿದರು. 

2024-04-26 05:25 GMT

ಸೌಮ್ಯಾ ರೆಡ್ಡಿ, ರಾಮಲಿಂಗಾ ರೆಡ್ಡಿ ಮತದಾನ

ಜಯನಗರ ಕ್ಷೇತ್ರದ ಮಾಜಿ ಶಾಸಕಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹಾಗೂ ಸಾರಿಗೆ, ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗೆ ಮತದಾನ ಮಾಡಿದರು.

2024-04-26 05:17 GMT

ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ ಸಿಎಂ ಸಿದ್ದರಾಮಯ್ಯ

ಚಾಮರಾಜನಗರದ ಸಿದ್ದರಾಮನಹುಂಡಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಿಎಂ ಸಿದ್ದರಾಮಯ್ಯ ಅವರು ಫೋಟೋಗಳಿಗೆ ಫೋಸ್ ನೀಡಿದ್ದಾರೆ.ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದಾರೆ.

2024-04-26 04:47 GMT

ಕುಟುಂಬಸ್ಥರೊಂದಿಗೆ ಬಂದು ಯದುವೀರ್ ಮತದಾನ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಂಕರಮಠ ರಸ್ತೆಯ ಶ್ರೀಕಾಂತ ಮಹಿಳಾ ವಿದ್ಯಾಲಯದಲ್ಲಿ ಶುಕ್ರವಾರ ಮತ ದಾನ ಮಾಡಿದರು. ತಾಯಿ ಪ್ರಮೋದಾದೇವಿ ಒಡೆಯರ್, ಪತ್ನಿ ತ್ರಿಷಿಕಾದೇವಿ ಜೊತೆ ಬಂದು ಮತ ಚಲಾಯಿಸಿದರು. ಇದಕ್ಕೂ ಮುನ್ನ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

2024-04-26 04:20 GMT

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ರಾಹುಲ್‌ ದ್ರಾವಿಡ್‌

ಟೀಂ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಬೆಂಗಳೂರಿನಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ರಾಹುಲ್‌ ದ್ರಾವಿಡ್‌, ಎಲ್ಲರು ಬಂದು ಮತದಾನ ಮಾಡಿ. ಪ್ರಜಾಪ್ರಭುತ್ವವನ್ನು ಮುಂದೆ ತರುವ ಒಳ್ಳೆಯ ಅವಕಾಶ ಇದು. ಚುನಾವಣಾ ಆಯೋಗ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿದೆ. ಹೆಚ್ಚಿನ ಯುವಕರು, ಯುವತಿಯರು ಮತದಾನ ಮಾಡಲು ಮುಂದೆ ಬನ್ನಿ ಎಂದು ಅವರು ತಿಳಿಸಿದರು.

2024-04-26 04:13 GMT

ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಮತದಾನ

ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, ಜಾಲಹಳ್ಳಿಯ ಮತಗಟ್ಟೆಯಲ್ಲಿ ತಮ್ಮ ಕುಟುಂಬ ಸಮೇತವಾಗಿ ಬಂದು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬೇಡಿ. ಮತ ಚಲಾಯಿಸುವ ಮುಖಾಂತರ ಈ ದೇಶದ ಭವಿಷ್ಯವನ್ನು ಮತ್ತು ಅಭಿವೃದ್ಧಿಯನ್ನು ತೀರ್ಮಾನ ಮಾಡುವ ಚುನಾವಣೆ ಇದು. ಇಂತಹ ಅಪರೂಪದ ಚುನಾವಣೆಯಲ್ಲಿ ತಾವೆಲ್ಲರು ಭಾಗಿಯಾಗಬೇಕು. ಮತದಾನ ಕೇಂದ್ರಕ್ಕೆ ಬರಬೇಕು. ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಆದಷ್ಟು ಬೇಗ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿ ಎಂದು ಹೇಳಿದರು.

Tags:    

Similar News