ವಿಧಾನಸೌಧ ಬಳಿ ಕಂಗೊಳಿಸಲಿದ್ದಾಳೆ ನಾಡದೇವತೆ ಭುವನೇಶ್ವರಿ
ಕೊನೆಗೂ ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಉದ್ಘಾಟನೆಗೆ ಸಮಯ ಬಂದಿದೆ. ಜನವರಿ 27 ರಂದು (ಸೋಮವಾರ) ನಾಡದೇವತೆಯ ಪ್ರತಿಮೆ ಅನಾವರಣಗೊಳ್ಳಲಿದೆ.;
By : The Federal
Update: 2025-01-24 08:39 GMT
ಕೊನೆಗೂ ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಉದ್ಘಾಟನೆಗೆ ಸಮಯ ಬಂದಿದೆ. ಜನವರಿ 27 ರಂದು (ಸೋಮವಾರ) ನಾಡದೇವತೆಯ ಪ್ರತಿಮೆ ಅನಾವರಣಗೊಳ್ಳಲಿದೆ.
ಈ ವಿಷಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. " ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣಗೊಳಿಸಲಿದ್ದಾರೆ, ʼ ಎಂದು ಪ್ರಕಟಿಸಿದ್ದಾರೆ.
ಇದು 25 ಅಡಿ ಎತ್ತರದ ಕಂಚಿನ ಪ್ರತಿಮೆಯಾಗಿದ್ದು, ನೆಲದಿಂದ 43 ಅಡಿ ಎತ್ತರದಲ್ಲಿದೆ. ಇದರ ತೂಕ 31.50 ಟನ್‌ಗಳಾಗಿದ್ದು, ಈ ಕಾರ್ಯಕ್ರಮವನ್ನು ಕನ್ನಡಿಗರ ಹಬ್ಬದ ರೀತಿಯಲ್ಲಿ ಆಯೋಜಿಸಲಾಗುವುದು ಎಂದವರು ಹೇಳಿದರು. ಕನ್ನಡ ಪರ ಸಂಘಟನೆ ಗಳು, ಆಟೋ ಚಾಲಕರು, ಬಸ್ ಚಾಲಕರಿಗೆ, ಕನ್ನಡಿಗರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದೂ ಅವರು ಹೇಳಿದರು. "ಉದ್ಘಾಟನೆ ಬಳಿಕ ಸಾರ್ವಜನಿಕರಿಗೆ ಪ್ರತಿಮೆ ವೀಕ್ಚಿಸಲು ಅವಕಾಶವಿದೆ," ಎಂದವರು ಹೇಳಿದ್ದಾರೆ.