ನವೆಂಬರ್ 1 ರಿಂದ ಮೆಟ್ರೋ ಹಳದಿ ಮಾರ್ಗದಲ್ಲಿ ಐದನೇ ರೈಲು ಸಂಚಾರ
ಹಳದಿ ಮಾರ್ಗಕ್ಕೆ ಆಗಸ್ಟ್ 10 ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆರಂಭದಲ್ಲಿ 25 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡುತ್ತಿತ್ತು. ಸೆಪ್ಟೆಂಬರ್ 10 ರಂದು ನಾಲ್ಕನೇ ರೈಲು ಸೇರ್ಪಡೆಯಾದ ನಂತರ ಸಂಚಾರ ಅವಧಿಯ ಅಂತರ 19 ನಿಮಿಷಕ್ಕೆ ಇಳಿದಿತ್ತು.
By : The Federal
Update: 2025-10-29 09:19 GMT
ಯೆಲ್ಲೋ ಲೈನ್
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗದಲ್ಲಿ ಐದನೇ ರೈಲು ಸಂಚಾರ ಆರಂಭಿಸಲಿದೆ. ಆ ಮೂಲಕ ಸಂಚಾರದ ಅವಧಿಯ ಅಂತರವು 15ನಿಮಿಷಕ್ಕೆ ಇಳಿಯಲಿದೆ.
ಪ್ರಸ್ತುತ ಹಳದಿ ಮಾರ್ಗದಲ್ಲಿ ನಾಲ್ಕು ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ರೈಲಿನ ಸಂಚಾರದ ನಡುವೆ 19 ನಿಮಿಷಗಳ ಅಂತರವಿದೆ. ನವೆಂಬರ್ 1 ರಂದು ಐದನೇ ರೈಲು ಸೇರ್ಪಡೆಯಾದರೆ, ಅಂತರವು ಮತ್ತಷ್ಟು ಕಡಿಮೆಯಾಗಲಿದೆ. ಐದನೇ ರೈಲಿನ ಸುರಕ್ಷತಾ ಪರೀಕ್ಷೆ ಮುಗಿದಿದ್ದು, ಕೊನೆಯ ಹಂತದ ತಾಂತ್ರಿಕ ಪರೀಕ್ಷೆ ನಡೆಯುತ್ತಿದೆ.
ಹಳದಿ ಮಾರ್ಗಕ್ಕೆ ಆಗಸ್ಟ್ 10 ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆರಂಭದಲ್ಲಿ 25 ನಿಮಿಷಕ್ಕೊಮ್ಮೆ ರೈಲು ಸಂಚರಿಸುತ್ತಿತ್ತು. ಸೆ.10 ರಂದು ನಾಲ್ಕನೇ ರೈಲು ಸೇರ್ಪಡೆಯಾದ ನಂತರ ಈ ಅವಧಿ 19 ನಿಮಿಷಕ್ಕೆ ಇಳಿದಿತ್ತು. ಈಗ ಐದನೇ ರೈಲಿನ ಬೋಗಿಗಳು ಹಳಿಗೆ ಇಳಿಯಲಿದ್ದು, ಸಂಚಾರದ ಅವಧಿಯ ಅಂತರ 15 ನಿಮಿಷಕ್ಕೆ ಇಳಿಯಲಿದೆ.