Actor Darshan: ನಿಮ್ಮನ್ನು ಪಡೆದಿರುವ ನಾನೇ ಧನ್ಯ... ಮತ್ತೊಂದು ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ ನಟ ದರ್ಶನ್​

Actor Darshan: ಫೆ.16ರಂದು ದರ್ಶನ್‌ ಜನುದಿನವಿತ್ತು . ಅದಕ್ಕೂ ಮೊದಲು ವಿಡಿಯೊ ಒಂದನ್ನು ಮಾಡಿಬಿಟ್ಟಿದ್ದ ದರ್ಶನ್‌, ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ಮಾಹಿತಿ ನೀಡಿದ್ದರು.;

Update: 2025-02-18 06:35 GMT
ನಟ ದರ್ಶನ್​.

ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಬರ್ತ್‌ ಡೇ(Darshna Birthday) ಸಂಭ್ರಮಾಚರಣೆ ಮಾಡದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌(Actor Darshan) ಇದೀಗ ಹೊಸ ಪೋಸ್ಟ್​ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಸ್​ ಎಂದು ಕರೆಯಲು ಆರಂಭಿಸಿದ್ದು ಈ ಬಾರಿಯೂ ಅದೇ ರೀತಿ ಉಲ್ಲೇಖಿಸಿದ್ದಾರೆ.


ಫೆ.16ರಂದು ದರ್ಶನ್‌ ಜನುದಿನವಿತ್ತು . ಅದಕ್ಕೂ ಮೊದಲು ವಿಡಿಯೊ ಒಂದನ್ನು ಮಾಡಿಬಿಟ್ಟಿದ್ದ ದರ್ಶನ್‌, ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ಮಾಹಿತಿ ನೀಡಿದ್ದರು. ಆದರೂ ದರ್ಶನ್ ಅಭಿಮಾನಿಗಳು ಫೊಟೊ ಬಳಸಿ ಸೋಶಿಯಲ್‌ ಮೀಡಿಯಾಗಳ ಮೂಲಕ ಸಂಭ್ರಮಿಸಿದ್ದರು. ಇದೀಗ ಬರ್ತ್​ಡೇ ಮುಗಿದ ಬಳಿಕ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ದರ್ಶನ್‌ ಏನು ಬರೆದಿದ್ದಾರೆ?

ಪ್ರೀತಿಯ ಸೆಲೆಬ್ರಿಟಿಸ್ ಗಳೇ ನಮಸ್ಕಾರ,

ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲ್ಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ .

ನಿಮ್ಮ ದಾಸ ದರ್ಶನ್

ಬರ್ತ್​​ಡೇ ಮಾಡದಿರುವುದರ ವಿಡಿಯೊದಲ್ಲಿ ಏನಿತ್ತು?

ಜನುಮ ದಿನ ಮಾಡುವುದಿಲ್ಲ ಎಂದು ಪ್ರಕಟಿಸಿದ ವಿಡಿಯೊ ಕೂಡ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿತ್ತು. ಅಲ್ಲಿ ಅವರು ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ತಿಳಿಸಿದ್ದರು. ''ಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರನ್ನೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಎನ್ನುವ ಆಸೆ ಇತ್ತು. ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳಲು ಆಗುತ್ತಿಲ್ಲ. ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲʼಎಂದು ಮಾಹಿತಿ ನೀಡಿದ್ದರು.

ʻದೀರ್ಘ ಕಾಲ ನಿಂತುಕೊಂಡು ಎಲ್ಲರಿಗೂ ವಿಶ್ ಮಾಡಲು ನನ್ನಿಂದ ಆಗುತ್ತಲ್ಲ. ಆಪರೇಷನ್ ಆಗಲೇಬೇಕು ಎಂಬುದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು. ಈಗಾಗಲೇ ಒಪ್ಪಿಕೊಂಡಿರುವ ಕೆಲಸ ಮುಗಿಸಬೇಕಿದೆ. ನನ್ನ ನಿರ್ಮಾಪಕರು ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ಧನ್ಯವಾದಗಳು. ಅವರಿಗೆ ನಾನು ಅನ್ಯಾಯ ಮಾಡಬಾರದು ಎನ್ನುವ ಕಾರಣಕ್ಕೆ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕುತ್ತಿರುವೆ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿʼ ಎಂದು ಮನವಿ ಮಾಡಿದ್ದರು.

Tags:    

Similar News