ಮತ ಎಣಿಕೆಯಂದು ಹಿಂಸಾಚಾರದ ಆತಂಕ: ಡಿ.ಕೆ. ಸುರೇಶ್ ವಿರುದ್ದ ಸಿಎನ್ ಮಂಜುನಾಥ್ ಪತ್ರ
ಜೂನ್ 4ರಂದು ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ ಎಣಿಕೆ (ಜೂನ್ 4) ದಿನದಂದು ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ ಎಣಿಕೆ ಕೇಂದ್ರದಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ, ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಅಳಿಯ ಡಾ.ಸಿಎನ್ ಮಂಜುನಾಥ್ ನಡುವೆ ಬಹಳ ಪೈಪೋಟಿ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮಂಜುನಾಥ್ ಅವರು, ʻʻಕ್ಷೇತ್ರದಲ್ಲಿ ಚುನಾವಣೆಗೆ ಮುಂಚೆ ಮತ್ತು ನಂತರವೂ ಮತದಾರರನ್ನು ಬೆದರಿಸುವ ಘಟನೆಗಳು ಗಮನಕ್ಕೆ ಬಂದಿವೆ. ನನಗೆ ಬಂದಿರುವ ವಿಶ್ವಸನೀಯ ಮಾಹಿತಿ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸೋಲುವ ಸಾಧ್ಯತೆ ಕಂಡುಬಂದರೆ ಹಿಂಸಾಚಾರದ ಜೊತೆಗೆ, ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯಲಿವೆʼʼ ಎಂದು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ʻʻಸುರೇಶ್ ಅವರ ಸಹೋದರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಪ್ರಭಾವ ಬೀರುವ ಜೊತೆಗೆ, ಸರ್ಕಾರಿ ವ್ಯವಸ್ಥೆಯೇ ಅಂತಹ ಕೃತ್ಯಕ್ಕೆ ಬಳಕೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಎಣಿಕೆ ಕಾರ್ಯವು ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ' ಎಂದು ಹೇಳಿದ್ದಾರೆ.
ಹಿಂಸಾಚಾರಕ್ಕೆ ಅವಕಾಶವಿಲ್ಲದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಎಣಿಕೆ ಕೇಂದ್ರದ ಬಳಿ ಪೊಲೀಸರು ಮತ್ತು ಹೆಚ್ಚುವರಿ ಅರೆ ಸೇನಾಪಡೆಗಳನ್ನು ನಿಯೋಜಿಸಬೇಕು. ಕೇಂದ್ರಕ್ಕೆ ಅನಧಿಕೃತವಾಗಿ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಕೇಂದ್ರದ ಆವರಣಕ್ಕೆ ಬರುವ ಪಕ್ಷಗಳ ಏಜೆಂಟರು, ಅಧಿಕಾರಿಗಳು ಹಾಗೂ ಮಾಧ್ಯಮದವರ ಪೂರ್ವಾಪರವನ್ನು ಪರಿಶೀಲಿಸಬೇಕು' ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದವರಿಗೆ ಮಾತ್ರ ಎಣಿಕೆ ಕೇಂದ್ರಕ್ಕೆ ಪವೇಶ ನೀಡಬೇಕು. ಪ್ರವೇಶದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಐ.ಡಿ ಕಾರ್ಡ್ ಪರಿಶೀಲನೆ ಜೊತೆಗೆ ನಿಷೇಧಿತ ವಸ್ತುಗಳನ್ನು ಒಳಕ್ಕೆ ತಂದರೆ ಪ್ರವೇಶ ದ್ವಾರದಲ್ಲೇ ಪತ್ತೆಹಚ್ಚಲು ಮೆಟಲ್ ಡಿಟೆಕ್ಟರ್ ಅಳವಡಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಮತ ಎಣಿಕೆ ಯಾರೇ ಪ್ರವೇಶ ಮಾಡಿದರೂ ಅವರ ತಪಾಸಣೆ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಅನುಮತಿ ಪಡೆದ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿರಲಿ. ಇನ್ನಿತರ ಅಧಿಕಾರಿಗಳು, ಮಾಧ್ಯಮ ಸಿಬ್ಬಂದಿ, ಏಜೆಂಟ್‌ಗಳನ್ನು ಮತ ಎಣಿಕೆ ಪ್ರದೇಶವನ್ನು ಪ್ರವೇಶಿಸದಂತೆ ಮಾಡಬೇಕು ಎಂದು ಪತ್ರದಲ್ಲಿ ಅವರು ಬರೆದಿದ್ದಾರೆ. ಇಂತೆಲ್ಲಾ ವಿಚಾರಗಳೊಂದಿಗೆ ಚುನಾವಣಾ ಆಯೋಗಕ್ಕೆ ಮಂಜುನಾಥ್ ಮಹತ್ವದ ಪತ್ರವನ್ನು ಬರೆದಿದ್ದಾರೆ.
ಹೀಗಿದ್ದರೂ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸೂಕ್ತ ಭದ್ರತೆಯೊಂದಿಗೆ ಮತ ಎಣಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಹಾಗಾದರೆ ಮಂಜುನಾಥ್ ಅವರು ಬರೆದ ಪತ್ರದಲ್ಲಿ ಏನಿದೆ? ಮತ ಎಣಿಕೆ ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯೋಮದಿಗೆ ಮತ ಎಣಿಕೆ ನಡೆಸಬೇಕು. ಮತ ಎಣಿಕೆ ಕೇಂದ್ರದ ಸುತ್ತಲು ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಬೇಕು. ಮತ ಎಣಿಕೆ ಕೇಂದ್ರದಲ್ಲಿ ಅಪರಿಚತ ವ್ಯಕ್ತಿಗಳು ಸುಳಿಯದಂತೆ ತಡೆಗಟ್ಟಲು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.