ಸರ್ಕಾರದ ಮಾನದಂಡದ ಆಧಾರದ ಮೇಲೆ ಪಿಎಚ್‌ಸಿ, ಸಿಎಚ್‌ಸಿಗಳ ನವೀಕರಣ, ಅನುಮೋದನೆಗೆ ಕ್ರಮ

ಪಿಎಚ್‌ಸಿ, ಸಿಎಚ್‌ಸಿ ಮೇಲ್ದರ್ಜೆಗೇರಿಸುವುದು, ರಾಜ್ಯದಲ್ಲಿ ಹೊಸ ಪಿಎಚ್‌ಸಿ, ಸಿಎಚ್‌ಸಿಗಳ ಅನುಮೋದನೆಗೆ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯು ಆದೇಶಿಸಿದೆ.

Update: 2025-10-06 14:26 GMT

 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಎಚ್‌ಸಿ) ಮೇಲ್ದರ್ಜೆಗೇರಿಸುವುದು ಮತ್ತು ರಾಜ್ಯದಲ್ಲಿ ಹೊಸ ಪಿಎಚ್‌ಸಿ ಮತ್ತು ಸಿಎಚ್‌ಸಿಗಳ ಅನುಮೋದನೆ ಸಂಬಂಧ ಸರ್ಕಾರ ಸೂಚಿಸುವ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯು ಆದೇಶಿಸಿದೆ. 

ಪಿಎಚ್‌ಸಿಯಿಂದ ಸಿಎಚ್‌ಸಿಗೆ ಮೇಲ್ದರ್ಜೆಗೇರಿಸುವ ಸಂಬಂಧ ಹಲವಾರು ವಿನಂತಿಗಳನ್ನು ಸ್ವೀಕರಿಸಲಾಗಿದೆ. ಆದರೆ, ಯಾವುದೇ ಹೊಸ ಅನುಮೋದನೆಯನ್ನು ಪರಿಗಣಿಸುವ ಮೊದಲು ಹಣಕಾಸು ಇಲಾಖೆಯು ನಿಗದಿಪಡಿಸಿದ ಮಾನದಂಡಗಳನ್ನು ಪಾಲನೆ ಮಾಡಬೇಕಾಗುತ್ತದೆ. ಮಾರ್ಗಸೂಚಿಗಳು ಏಕರೂಪವಾಗಿ ಅನ್ವಯಿಸುವುದು ಕಡ್ಡಾಯವಾಗಿದೆ. ಅಲ್ಲದೇ, ಆರೋಗ್ಯ ಸಚಿವರು ಅಸ್ತಿತ್ವದಲ್ಲಿರುವ ಎಲ್ಲಾ ಪಿಎಚ್‌ಸಿಗಳು, ಸಿಎಚ್‌ಸಿಗಳು ಮತ್ತು ತಾಲ್ಲೂಕು ಆಸ್ಪತ್ರೆಗಳ (ಟಿಎಚ್‌ಎಸ್) ಕುರಿತು ಅವಲೋಕನ ನಡೆಸಬೇಕಾಗುತ್ತದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ, ಹೊಸ ಪಿಎಚ್‌ಸಿ, ಸಿಎಚ್‌ಸಿ ಅಥವಾ ಪಿಎಚ್‌ಸಿಗಳನ್ನು ಸಿಎಚ್‌ಸಿಗಳಿಗೆ ನವೀಕರಿಸಲು ಎಲ್ಲಾ ಪ್ರಸ್ತಾಪಗಳು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

 ಯಾವುದೇ ಪಿಎಚ್‌ಸಿ 10-15 ಕಿ.ಮೀ ಅಥವಾ ಪ್ರಸ್ತಾವಿತ ಪಿಎಚ್‌ಸಿಯ ಸ್ಥಳದಿಂದ 30 ನಿಮಿಷಗಳ ಪ್ರಯಾಣದ ಸಮಯದಲ್ಲಿ ಅಸ್ತಿತ್ವದಲ್ಲಿ ಇರಬಾರದು.  ಯಾವುದೇ ಸಿಎಚ್‌ಸಿ ಅಥವಾ ಉನ್ನತ ಮಟ್ಟದ ಆರೋಗ್ಯ ಸೌಲಭ್ಯ 30 ಕಿ.ಮೀ ಅಥವಾ ಪ್ರಸ್ತಾವಿತ ಸಿಎಚ್‌ಸಿಯ ಸ್ಥಳದಿಂದ ಒಂದು ಗಂಟೆ ಪ್ರಯಾಣದ ಸಮಯದೊಳಗೆ ಅಸ್ತಿತ್ವದಲ್ಲಿಲ್ಲ ಎಂಬುದು ಖಚಿತವಾಗಿರಬೇಕು. ಈ ಮಾರ್ಗಸೂಚಿ ಇಲ್ಲದ ಪ್ರಸ್ತಾಪಗಳನ್ನು ಹೊಸ ಅನುಮೋದನೆಗಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. 

ಮಾನದಂಡಗಳ ಅನುಸರಣೆಯನ್ನು ಪರಿಶೀಲಿಸಲು ಅಸ್ತಿತ್ವದಲ್ಲಿರುವ ಎಲ್ಲಾ ಪಿಎಚ್‌ಸಿಗಳು, ಸಿಎಚ್‌ಸಿಗಳು ಮತ್ತು ಟಿಎಚ್‌ಎಸ್‌ನ ಬಗ್ಗೆ ಅವಲೋಕನ ಮಾಡಬೇಕಾಗುತ್ತದೆ. ಆರೋಗ್ಯ ಸಚಿವರು ಈ ಬಗ್ಗೆ ಪರಿಶೀಲಿಸಲಿದ್ದಾರೆ.  ಪಿಎಚ್‌ಸಿ, ಸಿಎಚ್‌ಸಿಗಳ ನವೀಕರಣ/ಅನುಮೋದನೆಗಾಗಿ ಬಾಕಿ ಇರುವ ಎಲ್ಲಾ ಪ್ರಸ್ತಾಪಗಳನ್ನು ಮಾನದಂಡಗಳ  ಆಧಾರದ ಮೇಲೆ ಗಮನಿಸಲಾಗುತ್ತದೆ. ಮಾನದಂಡಗಳನ್ನುಅನುಸರಿಸುವ ಪ್ರಸ್ತಾಪಗಳನ್ನು ಮಾತ್ರ ಅನುಮೋದನೆಗಾಗಿ ಸರ್ಕಾರದ ಮುಂದೆ ಇಡಲಾಗುತ್ತದೆ ಎಂದು ತಿಳಿಸಿದೆ. 

Tags:    

Similar News