"ನಿಮ್ಮ ಡೆಲಿವರಿ ಟೈಮ್‌ಗೆ ಆಸ್ಪತ್ರೆ ಕೊಡ್ತೀವಿ": ಪತ್ರಕರ್ತೆಯ ಪ್ರಶ್ನೆಗೆ ದೇಶಪಾಂಡೆ ಅಸೂಕ್ಷ್ಮ ಉತ್ತರ, ವಿವಾದ

ಈ ಘಟನೆಯ ನಂತರ, ರಾಧಾ ಹಿರೇಗೌಡರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, "ಹಿರಿಯ ರಾಜಕಾರಣಿಯಿಂದ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.;

Update: 2025-09-03 06:07 GMT
Click the Play button to listen to article

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿಗೆ ಸುಸಜ್ಜಿತ ಆಸ್ಪತ್ರೆ ಯಾವಾಗ ಸಿಗುತ್ತದೆ ಎಂದು ಪ್ರಶ್ನಿಸಿದ ಮಹಿಳಾ ಪತ್ರಕರ್ತೆಯೊಬ್ಬರಿಗೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಳಿಯಾಳ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ನೀಡಿದ ಅಸೂಕ್ಷ್ಮ ಮತ್ತು ಅವಹೇಳನಕಾರಿ ಉತ್ತರ ತೀವ್ರ ವಿವಾದಕ್ಕೆ ಕಾರಣವಾಗಿದೆ.

"ನಿಮ್ಮ ಡೆಲಿವರಿ ಆಗಲಿ, ಆಗ ಆಸ್ಪತ್ರೆ ಕೊಡುತ್ತೇವೆ," ಎಂದು ದೇಶಪಾಂಡೆ ಅವರು ಪತ್ರಕರ್ತೆ ರಾಧಾ ಹಿರೇಗೌಡರ್ ಅವರಿಗೆ ಹೇಳಿದ್ದು, ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿವಾದದ ಹಿನ್ನೆಲೆ

`ಗ್ಯಾರಂಟಿ ನ್ಯೂಸ್ ಕನ್ನಡ' ಸುದ್ದಿವಾಹಿನಿಯ ಪ್ರಧಾನ ಸಂಪಾದಕಿಯಾಗಿರುವ ರಾಧಾ ಹಿರೇಗೌಡರ್ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ, ಜೋಯಿಡಾ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದರಿಂದ, ವಿಶೇಷವಾಗಿ ಗರ್ಭಿಣಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದ್ದರು.

ಅದಕ್ಕೆ ಉತ್ತರಿಸಿದ ದೇಶಪಾಂಡೆ, ನಗುತ್ತಾ, "ನಿಮ್ಮ ಡೆಲಿವರಿ ಆಗಲಿ ಬಿಡಿ, ಆಗ ಆಸ್ಪತ್ರೆ ಕೊಡುತ್ತೇವೆ," ಎಂದು ಹೇಳಿ, ಬಳಿಕ ಕಣ್ಣು ಹೊಡೆದಿದ್ದಾರೆ. ಇದು ಸ್ಥಳದಲ್ಲಿ ಇದ್ದವರನ್ನು ದಿಗ್ಭ್ರಮೆಗೊಳಿಸಿದೆ. ಪತ್ರಕರ್ತೆ ಸ್ಪಷ್ಟನೆ ಕೇಳಿದಾಗಲೂ, "ನಿಮ್ಮ ಡೆಲಿವರಿ ನಾವು ಮಾಡಿಸುತ್ತೇವೆ, ಚಿಂತೆ ಬೇಡ," ಎಂದು ಪುನರುಚ್ಚರಿಸಿದ್ದಾರೆ.

ಆಕ್ರೋಶ ತೀವ್ರ

ಈ ಘಟನೆಯ ನಂತರ, ರಾಧಾ ಹಿರೇಗೌಡರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, "ಹಿರಿಯ ರಾಜಕಾರಣಿಯಿಂದ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ವಾಹಿನಿ ಮತ್ತು ನಾನು ಅವರಿಂದ ಕ್ಷಮೆಯಾಚನೆಗೆ ಆಗ್ರಹಿಸಿದ್ದೇವೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ," ಎಂದು ಹೇಳಿದ್ದಾರೆ.

Tags:    

Similar News