'ಇವತ್ತು ಬರಲ್ಲ, ಗಂಟಲು ನೋವು...' – ಮನೆಗೆಲಸದ ಮಹಿಳೆಯ ಇಂಗ್ಲಿಷ್ ರಜೆ ಪತ್ರ ವೈರಲ್!

ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮನೆಗೆಲಸದ ಮಹಿಳೆಯ ಇಂಗ್ಲಿಷ್ ಕೌಶಲ್ಯ ಮತ್ತು ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. ಹಲವರು ತಮ್ಮ ಮನೆಯಲ್ಲಿ ನಡೆದ ಇದೇ ರೀತಿಯ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ.;

Update: 2025-08-23 12:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಮನೆಗೆಲಸದವರ ಬಗ್ಗೆ ಲಿಂಕ್ಡ್ಇನ್​​ನಲ್ಲಿ ಬರೆದುಕೊಂಡ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಜೆ ಕೇಳಲು ಮನೆಗೆಲಸದವರು ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶಗಳನ್ನು ಆ ಮಹಿಳೆ ಹಂಚಿಕೊಂಡಿದ್ದು, ಆ ಸಂದೇಶಗಳು ಅತ್ಯಂತ ವೃತ್ತಿಪರವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಿಳೆ ಹಂಚಿಕೊಂಡ ಸ್ಕ್ರೀನ್​​ ಶಾಟ್​ಗಳು ಈ ರೀತಿ ಇವೆ.

ಸಂದೇಶ 1: "I am not well, I have cold and throat infection so I will not be coming to work today." (ನನಗೆ ಹುಷಾರಿಲ್ಲ, ಶೀತ ಮತ್ತು ಗಂಟಲು ನೋವಿದೆ, ಹಾಗಾಗಿ ಇಂದು ಕೆಲಸಕ್ಕೆ ಬರುವುದಿಲ್ಲ.)

ಸಂದೇಶ 2: "I won’t be able to come today cuz I’m not well so." (ಇವತ್ತು ಬರಲು ಸಾಧ್ಯವಿಲ್ಲ, ಯಾಕೆಂದರೆ ನನಗೆ ಹುಷಾರಿಲ್ಲ.)

ಸಂದೇಶ 3: "I won’t be able to come today because I have got hurt in leg and it’s swollen and I’m not able to walk." (ಕಾಲಿಗೆ ಪೆಟ್ಟಾಗಿ ಊದಿಕೊಂಡಿದೆ ಮತ್ತು ನಡೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಇಂದು ಬರಲು ಸಾಧ್ಯವಿಲ್ಲ.)

ಈ ಸಂದೇಶಗಳನ್ನು ತಮ್ಮ ಮನೆಗೆಲಸದವರ 10 ವರ್ಷದ ಮಗಳು ಟೈಪ್ ಮಾಡಿದ್ದಾಳೆ ಎಂದು ಉಲ್ಲೇಖಿಸಿರುವ ಮಹಿಳೆ, ಅವರ ವೃತ್ತಿಪರತೆಗೆ "100/100" ಅಂಕಗಳನ್ನು ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮನೆಗೆಲಸದ ಮಹಿಳೆಯ ಇಂಗ್ಲಿಷ್ ಕೌಶಲ್ಯ ಮತ್ತು ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. ಹಲವರು ತಮ್ಮ ಮನೆಯಲ್ಲಿ ನಡೆದ ಇದೇ ರೀತಿಯ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬರು, ಆಫೀಸ್​ಗೆ ರಜೆ ತೆಗೆದುಕೊಳ್ಳುವಾಗ ಕಾರಣವನ್ನೇ ಕೊಡುವುದಿಲ್ಲ. ಇದು ಅದಕ್ಕಿಂತ ಎಷ್ಟೋ ವೃತ್ತಿಪರವಾಗಿದೆ," ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರ, "ಮುಂದಿನ ಪೀಳಿಗೆಯ ಕಾಪಿರೈಟರ್ ತಯಾರಾಗುತ್ತಿದ್ದಾರೆ," ಎಂದು ಶ್ಲಾಘಿಸಿದ್ದಾರೆ.

Tags:    

Similar News