ಒಂದನೇ ತರಗತಿ ಶಾಲಾ ಪ್ರವೇಶ ವಯೋಮಿತಿ: SEP ಆಯೋಗದಿಂದ ನಿರ್ಧಾರ
ಎಸ್‌ಇಪಿ ಆಯೋಗದಿಂದ ಇಲಾಖೆಯು ಮಾರ್ಗಸೂಚಿಗಳನ್ನು ಸ್ವೀಕರಿಸಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಈ ಸಮಸ್ಯೆ ಕುರಿತು ಚರ್ಚಿಸಿ ಅದನ್ನು ಕಾರ್ಯಗತಗೊಳಿಸುವುದಾಗಿ ಸಚಿವರು ಹೇಳಿದರು.;
ಮಧು ಬಂಗಾರಪ್ಪ
ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ಶಿಫಾರಸಿನ ಆಧಾರದ ಮೇಲೆ 1ನೇ ತರಗತಿಗೆ ಪ್ರವೇಶ ಪಡೆಯಲು ವಯೋಮಿತಿ ನಿಗದಿಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಶನಿವಾರ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ವಯೋಮಿತಿ ಸಡಿಲಿಕೆ ನೀಡುವಂತೆ ಹಲವು ಪೋಷಕರ ಮನವಿಯ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಹಿಂದಿನ ಸರ್ಕಾರ ಮಾಡಿದ ತಪ್ಪು. ಅವರು ರೂಪಿಸಿದ ಮಾರ್ಗಸೂಚಿಗಳು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರವಾಗಿರುವುದರಿಂದ ಮತ್ತು ನಾವು ಅದನ್ನು ವಿರೋಧಿಸುವುದರಿಂದ, ಸಮಸ್ಯೆಯನ್ನು ಪರಿಶೀಲಿಸಲು ನಾವು ಎಸ್‌ಇಪಿ ಆಯೋಗಕ್ಕೆ ವಿನಂತಿಯನ್ನು ಕಳುಹಿಸಿದ್ದೇವೆ ಎಂದು ಅವರು ತಿಳಿಸಿದರು.
ಎಸ್‌ಇಪಿ ಆಯೋಗದಿಂದ ಇಲಾಖೆಯು ಮಾರ್ಗಸೂಚಿಗಳನ್ನು ಸ್ವೀಕರಿಸಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಈ ಸಮಸ್ಯೆ ಕುರಿತು ಚರ್ಚಿಸಿ ಅದನ್ನು ಕಾರ್ಯಗತಗೊಳಿಸುವುದಾಗಿ ಸಚಿವರು ಹೇಳಿದರು.
2022ರ ನವೆಂಬರ್ 15ರಂದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ ಮಕ್ಕಳಿಗೆ ಜೂನ್ 1, 2025 ರೊಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷಕ್ಕೆ 1 ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಈ ಹಿಂದೆ 1ನೇ ತರಗತಿಗೆ ಕನಿಷ್ಠ ವಯಸ್ಸು 5.5 ವರ್ಷಗಳಾಗಿತ್ತು, ಆದರೆ ಈಗ 6 ವರ್ಷ ಪೂರೈಸಿದ ಮಕ್ಕಳಿಗೆ ಮಾತ್ರ ಪ್ರವೇಶದ ಅವಕಾಶ ನೀಡಲಾಗುತ್ತದೆ. ಪೋಷಕರ ಮನವಿಗೆ ಸ್ಪಂದಿಸಿ, ಈ ನಿಯಮವನ್ನು 2025-26ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.