ಅಮೆರಿಕದಲ್ಲಿ ಪತ್ನಿ, ಪುತ್ರನ ಕೊಲೆ ನಂತರ ಆತ್ಮಹತ್ಯೆ ಮಾಡಿಕೊಂಡ ಮೈಸೂರು ಉದ್ಯಮಿ
ಹರ್ಷವರ್ಧನ ಕಿಕ್ಕೇರಿ ಮೈಸೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು ಮತ್ತು ತಮ್ಮ ಕುಟುಂಬದೊಂದಿಗೆ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಆರ್ಥಿಕ ಒತ್ತಡ, ಕುಟುಂಬದ ಒಡಕುಗಳು ಅಥವಾ ಮಾನಸಿಕ ಆರೋಗ್ಯ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಹೇಳಲಾಗಿದೆ.;
ಮೈಸೂರು ಮೂಲದ ಉದ್ಯಮಿಯೊಬ್ಬರು ಅಮೆರಿಕದ ವಾಷಿಂಗ್ಟನ್‌ನ ನ್ಯೂಕ್ಯಾಸಲ್‌ನಲ್ಲಿ ತಮ್ಮ ಪತ್ನಿ ಮತ್ತು ಪುತ್ರನನ್ನು ಗುಂಡಿಕ್ಕಿ ಕೊಂದು, ನಂತರ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 42 ವರ್ಷದ ಹರ್ಷವರ್ಧನ ಕಿಕ್ಕೇರಿ ಆತ್ಮಹತ್ಯೆ ಮಾಡಿಕೊಂಡವರು. ಅದಕ್ಕಿಂತ ಮೊದಲು ಅವರು 38 ವರ್ಷದ ಪತ್ನಿ ಸುಜಾತಾ ಮತ್ತು 14 ವರ್ಷದ ಪುತ್ರ ಅರ್ಜುನ್‌ರನ್ನು ಕೊಂದಿದ್ದರು.
ಹರ್ಷವರ್ಧನ ಕಿಕ್ಕೇರಿ ಮೈಸೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು ಮತ್ತು ತಮ್ಮ ಕುಟುಂಬದೊಂದಿಗೆ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಆರ್ಥಿಕ ಒತ್ತಡ, ಕುಟುಂಬದ ಒಡಕುಗಳು ಅಥವಾ ಮಾನಸಿಕ ಆರೋಗ್ಯ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಹೇಳಲಾಗಿದೆ.
ನ್ಯೂಕ್ಯಾಸಲ್ ಪೊಲೀಸ್ ಇಲಾಖೆಯು ಘಟನೆಯ ಸ್ಥಳದಿಂದ ಗನ್ ಹಾಗೂ ಬಳಸಿದ ಗುಂಡುಗಳು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಘಟನೆ ಸಮಯದಲ್ಲಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರೊಬಾಟಿಕ್ ಕಂಪನಿ
2017ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ಹರ್ಷ ಮತ್ತು ಅವರ ಪತ್ನಿ ಶ್ವೇತಾ ಮೈಸೂರಿನಲ್ಲಿ ‘ಹೋಲೋವರ್ಲ್ಡ್’ ಎಂಬ ರೊಬೊಟಿಕ್ಸ್ ಸ್ಟಾರ್ಟ್-ಅಪ್ ಅನ್ನು ಸ್ಥಾಪಿಸಿದರು. 2018 ರಲ್ಲಿ, ಕಂಪನಿಯು ‘ಹೋಲೋಸೂಟ್’ ಅನ್ನು ಅಭಿವೃದ್ಧಿಪಡಿಸಿತು, ಇದು ವಿಶ್ವದ ಮೊದಲ ಕೈಗೆಟುಕುವ, ಹಗುರವಾದ, ದ್ವಿಮುಖ, ವೈರ್‌ಲೆಸ್ ಪೂರ್ಣ-ದೇಹದ ಮೋಷನ್ ಕ್ಯಾಪ್ಚರ್ ಸೂಟ್ ಆಗಿದ್ದು, ಕ್ರೀಡೆ, ಆರೋಗ್ಯ ರಕ್ಷಣೆ, ಶಿಕ್ಷಣ, ಮನರಂಜನೆ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಕೈಗಾರಿಕೆಗಳಿಗೆ ಸೇವೆ ಸಲ್ಲಿಸುತ್ತದೆ. ಶ್ವೇತಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರೆ, ಹರ್ಷ ಸಿಇಒ ಆಗಿದ್ದರು. ಕಂಪನಿಯ ಉತ್ಪನ್ನಗಳು ಅಂತರರಾಷ್ಟ್ರೀಯ ಬೇಡಿಕೆಯನ್ನು ಗಳಿಸಿದವು, ಯುಎಸ್, ಯುಕೆ ಮತ್ತು ಇಸ್ರೇಲ್‌ಗೆ ರಫ್ತು ಮಾಡಲಾಯಿತು. ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೋಲೋವರ್ಲ್ಡ್‌ನ ಬ್ರಾಂಡ್ ರಾಯಭಾರಿಯಾಗಿದ್ದರು.