ರಷ್ಯಾದಲ್ಲಿ ಭಯೋತ್ಪಾದಕ ದಾಳಿ: 60 ಮಂದಿ ಸಾವು

Update: 2024-03-23 07:45 GMT
ಪ್ರಾತಿನಿಧಿಕ ಚಿತ್ರ

ಮಾಸ್ಕೋದ ಅತಿ ದೊಡ್ಡ ಸಭಾಂಗಣಕ್ಕೆ ನುಗ್ಗಿದ ದಾಳಿಕೋರರ ಗುಂಪು ಬೇಕಾಬಿಟ್ಟಿ ಗುಂಡು ಹಾರಿಸಿ,ಆನಂತರ ಸಭಾಂಗಣಕ್ಕೆ ಸ್ಥಳಕ್ಕೆ ಬೆಂಕಿ ಹಚ್ಚಿದೆ. ಇದರಿಂದ ಕನಿಷ್ಠ 60 ಮಂದಿ ಸಾವನ್ನಪ್ಪಿದರು ಹಾಗೂ 140 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕಾರದ ಮೇಲೆ ಹಿಡಿತ ಸಾಧಿಸಿದ ಕೆಲವೇ ದಿನಗಳಲ್ಲಿಈ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಗುಂಪು ಘಟನೆಯ ಜವಾಬ್ದಾರಿ ಹೊತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದೆ. ದಾಳಿ ನಂತರ ದಾಳಿಕೋರರಿಗೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. 

ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಘಟನೆಯನ್ನು ʻದೊಡ್ಡ ದುರಂತʼ ಎಂದಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದಾಳಿಯಿಂದ ಸಭಾಂಗಣದ ಚಾವಣಿ ಕುಸಿದಿದ್ದು, ಈ ದಾಳಿ ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಮಾರಕ ದಾಳಿಯಾಗಿದೆ. ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ ಕ್ರೋಕಸ್ ಸಿಟಿ ಹಾಲ್‌ ನಲ್ಲಿ 6,200 ಜನರಿಗೆ ಸ್ಥಳಾವಕಾಶ ಕಲ್ಪಿಸಬಹುದಾಗಿದ್ದು, ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಅಧ್ಯಕ್ಷ ಪುಟಿನ್ ಅವರಿಗೆ ಮಾಹಿತಿ ನೀಡಲಾಯಿತು. 

ರಷ್ಯಾದ ರಾಕ್ ಬ್ಯಾಂಡ್ ʻಪಿಕ್ನಿಕ್ʼ ನ ಕಚೇರಿಗೆ ಜನ ಸೇರಿದ್ದರು. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ 40 ಮಂದಿ ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಅಧಿಕಾರಿಗಳು ಗಾಯಗೊಂಡ 145 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಐದು ಮಕ್ಕಳು ಸೇರಿದಂತೆ 115 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಸಭಾಂಗಣದಲ್ಲಿದ್ದ ಗಾರ್ಡ್‌ಗಳು ಬಂದೂಕು ಹೊಂದಿರಲಿಲ್ಲ ಮತ್ತು ದಾಳಿಯಲ್ಲಿ ಕೆಲವರು ಕೊಲ್ಲಲ್ಪಟ್ಟರು ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶೇಷ ಪಡೆ ಮತ್ತು ಗಲಭೆ ನಿಗ್ರಹ ಪೊಲೀಸರು ಆಗಮಿಸುವ ಮೊದಲು ದಾಳಿಕೋರರು ಓಡಿಹೋದರು ಎಂದು ಕೆಲವು ಸುದ್ದಿವಾಹಿನಿಗಳು ಹೇಳಿವೆ. 

ದಾಳಿಗೆ ಕ್ರೆಮ್ಲಿನ್ ತಕ್ಷಣವೇ ಯಾರನ್ನೂ ದೂಷಿಸಿಲ್ಲ. ಆದರೆ, ಕೆಲವು ಜನಪ್ರತಿನಿಧಿಗಳು ಉಕ್ರೇನ್ ಇದರ ಹಿಂದೆ ಇದೆ ಎಂದು ಆರೋಪಿಸಿದ್ದಾರೆ.

Tags:    

Similar News