Ustad Zakir Hussain | ಜಾಕಿರ್​ ಹುಸೇನ್​​ ಹುಟ್ಟುತ್ತಲೇ ಮೊದಲು ಕೇಳಿದ್ದು ಆಜಾನ್ ಅಲ್ಲ, ತಬಲಾದ ನಾದ!

ಜಾಕಿರ್​ ಅವರ ತಂದೆ ಅಲ್ಲಾ ರಖಾ ಕೂಡ ತಬಲಾ ವಾದಕ. ಹೀಗಾಗಿ ಮಗ ಹುಟ್ಟುತ್ತಲೇ ಇಸ್ಲಾಂ ಧರ್ಮದ ಪ್ರಕಾರ ಮಗುವಿನ ಕಿವಿಯಲ್ಲಿ ಆಜಾನ್ ಕೇಳಿಸುವ ಬದಲು ತಬಲಾ ನಾದವನ್ನು ನುಡಿಸಿದ್ದರು.

Update: 2024-12-16 07:13 GMT
ಜಾಕಿರ್ ಹುಸೇನ್​.

ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರು ಡಿಸೆಂಬರ್ 15 ರಂದು ತಮ್ಮ 73 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ಅವರು ಇಡಿಯೋಪತಿಕ್ ಪಲ್ಮನರಿ ಫೈಬ್ರೋಸಿಸ್ ಸಮಸ್ಯೆಯಿಂದಾಗಿ ಬಳಲಿದ್ದರು. ಅಂತರರಾಷ್ಟ್ರೀಯ ಸಹಯೋಗ ಮತ್ತು ಮಾರ್ಗದರ್ಶನಕ್ಕೆ ಹೆಸರುವಾಸಿಯಾದ ಹುಸೇನ್ ಅವರು ಗ್ರ್ಯಾಮಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದವರು. ಅವರು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದವರು. ಹೀಗೆ ಇಹಲೋಕ ತ್ಯಜಿಸಿದ ಸಂಗೀತಗಾರನ ಕುರಿತ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ. 


ಜಗತ್ತು ಕಂಡ ಪ್ರಖ್ಯಾತ ತಬಲಾ ವಾದಕರಲ್ಲಿ ಒಬ್ಬರಾದ ಜಾಕೀರ್ ಹುಸೇನ್ 1951ರ ಮಾರ್ಚ್ 9ರಂದು ಜನಿಸಿದ್ದರು. ಅಂದ ಹಾಗೆ ಇಸ್ಲಾಂ ಧರ್ಮದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲು ಕೇಳಿಸಿಕೊಂಡಿದ್ದದು ಆಜಾನ್​ ಅಲ್ಲ; ಬದಲಿಗೆ ತಬಲಾದ ನಾದ. ಅವರ ತಂದೆ ಅಲ್ಲಾ ರಖಾ ಕೂಡ ತಬಲಾ ವಾದಕ. ಹೀಗಾಗಿ ಮಗ ಹುಟ್ಟುತ್ತಲೇ ಇಸ್ಲಾಂ ಧರ್ಮದ ಪ್ರಕಾರ, ಕಿವಿಯಲ್ಲಿ ಆಜಾನ್ ಕೇಳಿಸುವ ಬದಲು ತಬಲಾ ನಾದವನ್ನು ನುಡಿಸಿದ್ದರು. ಈ ಮಾತನ್ನು ಎಂಟು ವರ್ಷಗಳ ಹಿಂದೆ ಸಂಗೀತಗಾರ ಶಂಕರ್ ಮಹದೇವನ್ ಅವರ ಜತೆಗಿನ ಸಂದರ್ಶನವೊಂದರಲ್ಲಿ ಜಾಕಿರ್ ಹೇಳಿಕೊಂಡಿದ್ದರು. ನನ್ನ ತಂದೆಯನ್ನು ಆ ವೇಳೆ ಎಲ್ಲರೂ ಪ್ರಶ್ನಿಸಿದ್ದರು. ಆಗ ಅವರು. ಇದುವೇ ನನ್ನ ಆಜಾನ್ ಎಂದು ಹೇಳಿದ್ದರು ಎಂಬುದನ್ನು ಜಾಕಿರ್​ ಸ್ಮರಿಸಿಕೊಂಡಿದ್ದರು.

ಜಾಕಿರ್ ಅವರು ಬಾಲ್ಯದಿಂದಲೂ ಸಂಗೀತದತ್ತ ಆಕರ್ಷಿತರಾಗಿದ್ದರು. ತಮಗೆ 7 ವರ್ಷವಾದಾಗ ಮೊದಲ ಸಂಗೀತ ಕಛೇರಿ ನೀಡಿದ್ದರು. ಅವರು 11 ವರ್ಷದವರಿದ್ದಾಗ ಸಂಗೀತಕ್ಕಾಗಿ ಅಲೆದಾಟ ಶುರುಮಾಡಿದ್ದರು.


ಜಾಕಿರ್ ಅವರು ಶಾಸ್ತ್ರೀಯ ಸಂಗೀತ ಮತ್ತು ಜಾಗತಿಕ ಸಂಗೀತ ಎರಡಕ್ಕೂ ಕೊಡುಗೆ ನೀಡಿದ್ದಾರೆ. ಒಂದೇ ರಾತ್ರಿಯಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಹೊಂದಿದ್ದಾರೆ. ಸಿನಿಮಾ ಕ್ಷೇತ್ರದಲ್ಲೂ ಅವರು ನಟನೆ ಮತ್ತು ಸಂಗೀತ ನಿರ್ದೇಶನ ಮಾಡಿದ್ದರು. ಒಟ್ಟು ಅವರು 12 ಚಿತ್ರಗಳಲ್ಲಿ ಕೆಲಸ ಮಾಡಿದರು.

ಅವರ ಮೊದಲ ಸಂಗೀತ ಕಛೇರಿಗೆ ಅವರು ಕೇವಲ 5 ರೂ. ಸಂಭಾವನೆ ಪಡೆದಿದ್ದರು. ಕೊನೇ ಹಂತದಲ್ಲಿ ಅವರ ಕಛೇರಿಗಳಿಗೆ  5 ಲಕ್ಷ ರೂಪಾಯಿಂದ 10 ಲಕ್ಷ ರೂ.ಗಳವರೆಗೆ ಶುಲ್ಕ ವಿಧಿಸುತ್ತಿದ್ದರು. ಅವರ ಸಾವಿನ ಸಮಯದಲ್ಲಿ ಅವರ ನಿವ್ವಳ ಸಂಪತ್ತು 85 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಹುಸೇನ್ ಅವರು ಮಿಕ್ಕಿ 'ಪ್ಲಾನೆಟ್ ಡ್ರಮ್' ಎಂಬ ರಿದಮ್ ಬ್ಯಾಂಡ್​ನ ತಂಡದಲ್ಲಿದ್ದರು. ಅವರ ಮೊದಲ ಆಲ್ಬಂ 1992ರ ಗ್ರ್ಯಾಮಿ ಪ್ರಶಸ್ತಿ ಪಡೆದಿತ್ತು. ಇದು ಈ ವಿಭಾಗದಲ್ಲಿ ಮೊದಲ ಗ್ರ್ಯಾಮಿ ಪ್ರಶಸ್ತಿ.

15 ವರ್ಷಗಳ ನಂತರ ಮತ್ತೆ ಈ ಬ್ಯಾಂಡ್ ತಂಡವರು ಜತೆಯಾಗಿದ್ದರು. ಗ್ಲೋಬಲ್ ಡ್ರಮ್ ಪ್ರಾಜೆಕ್ಟ್ ಎಂಬ ಮತ್ತೊಂದು ಆಲ್ಬಂ ಅನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ 2, 2007ರಂದು ಬಿಡುಗಡೆಯಾದ ಈ ಆಲ್ಬಂ 2009ರಲ್ಲಿ ಅತ್ಯುತ್ತಮ ಗ್ರ್ಯಾಮಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಹುಸೇನ್ ಅವರ ಸಿನಿಮಾ ನಂಟು 1983ರಲ್ಲಿ ಬಿಡುಗಡೆಯಾದ 'ಹೀಟ್ ಅಂಡ್ ಡಸ್ಟ್' ಮೂಲಕ ಆರಂಭಗೊಂಡಿತ್ತು. ಅದಕ್ಕೆ ಅವರು ಸಂಗೀತ ಸಂಯೋಜಿಸಿದ್ದರು ಹಾಗೂ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಇಸ್ಮಾಯಿಲ್ ಮರ್ಚೆಂಟ್ ನಿರ್ಮಿಸಿದ್ದಾರೆ. ಹುಸೇನ್ ಅವರು ಮರ್ಚೆಂಟ್ ಅವರೊಂದಿಗೆ ಇನ್ನೂ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದರು. ಇನ್ ಕಸ್ಟಡಿ (1993) ಮತ್ತು ದಿ ಮಿಸ್ಟಿಕ್ ಮಾಸ್ಟರ್ (2001). ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಫ್ರಾನ್ಸಿಸ್ ಕೊಪ್ಪೊಲಾ ಅವರೊಂದಿಗೆ ಅಪೊಕಾಲಿಪ್ಸೆ ನೌ (1979) ಚಿತ್ರದಲ್ಲಿ ಕೆಲಸ ಮಾಡಿದ್ದರು.

ಸಿತಾರ್ ವಾದಕ್​ ಪಂಡಿತ್ ರವಿಶಂಕರ್ ಅವರು ಜಾಕಿರ್​ ಹುಸೇನ್ ಅವರನ್ನು ಅಮೆರಿಕದ ಸಿಯಾಟಲ್​ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರ ಹುದ್ದೆಗೆ ಶಿಫಾರಸು ಮಾಡಿದ್ದರು.

ಹುಸೇನ್ ಅವರು ಹಿಂದೂಸ್ತಾನಿ ಘರಾಣಾಕ್ಕೆ ಜಾಝ್ ಫ್ಯೂಷನ್ ಮತ್ತು ವಿಶ್ವ ಸಂಗೀತದ ಶೈಲಿಗಳನ್ನು ಪರಿಚಯಿಸಿದ್ದರು.

ಹುಸೇನ್ 1988ರಲ್ಲಿ ಪದ್ಮಶ್ರೀ ಮತ್ತು 2002 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ಅವರು 1990ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೆದ್ದಿದ್ದರು.

199ರಲ್ಲಿ ಅಮೆರಿಕವು ಹುಸೇನ್ ಅವರಿಗೆ 'ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್' ನೀಡಿತ್ತು ಇದು ಅಮೆರಿಕದ ಸಾಂಪ್ರದಾಯಿಕ ಕಲಾವಿದರು ಮತ್ತು ಸಂಗೀತಗಾರರಿಗೆ ನೀಡುವ ಅತ್ಯುನ್ನತ ಗೌರವ. 

Tags:    

Similar News