ಕರಿಮಣಿ ಮಾಲೀಕ ನಾನಲ್ಲ... ಮನಬಿಚ್ಚಿ ಮಾತನಾಡಿದ ರಿಯಲ್ ಸ್ಟಾರ್
25 ವರ್ಷದ ಹಿಂದೆ ನಾನೇ ಬರೆದ ಹಾಡು ವೈರಲ್ ಆಗಿದೆ. ಕನ್ನಡದ ಹಾಡು ಮತ್ತು ಕನ್ನಡ ಸಾಹಿತ್ಯ ಸಮೃದ್ಧವಾಗಿಯೇ ಇದೆ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.;
By : The Federal
Update: 2024-03-04 13:58 GMT
ಬಾಲಿವುಡ್‌ನ ಯೂಟ್ಯೂಬ್ ಸ್ಟುಡಿಯೋದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು, ʼವೈರಲ್ ಆಗಿರುವ ಕರಿಮಣಿ ಮಾಲೀಕ ನೀನಲ್ಲ..ʼ ಹಾಡಿನ ಟ್ರೆಂಡ್ ಬಗ್ಗೆ ಮಾತನಾಡಿದ್ದಾರೆ.
25 ವರ್ಷದ ಹಿಂದೆ ನಾನೇ ಬರೆದ ಹಾಡು ವೈರಲ್ ಆಗಿದೆ. ಕನ್ನಡದ ಹಾಡು ಮತ್ತು ಕನ್ನಡ ಸಾಹಿತ್ಯ ಸಮೃದ್ಧವಾಗಿಯೇ ಇದೆ ಅನ್ನೋ ವಿಚಾರವನ್ನು ಉಪ್ಪಿ ಇಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಉದಾಹರಣೆಯಾಗಿಯೇ ತಮ್ಮ ಚಿತ್ರದ ತಮ್ಮ ಹಾಡಿನ ಕುರಿತು ಉಪ್ಪಿ ಇಲ್ಲಿ ಹೇಳಿಕೊಂಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ 25 ವರ್ಷದ ಹಿಂದೆ ಉಪೇಂದ್ರ ಚಿತ್ರಕ್ಕೆ ಈ ಕರಿಮಣಿ ಮಾಲೀಕ..ಹಾಡು ಬರೆದಿದ್ದರು. ಆಗ ಈ ಹಾಡು ಒಳ್ಳೆ ಹಾಡು ಅನ್ನೋ ಪ್ರಶಂಸೆ ಪಡೆದುಕೊಂಡಿತು. ಆದರೆ ಅಷ್ಟು ಆಗ ಆ ಹಾಡು ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.