ದ ಗರ್ಲ್‌ಫ್ರೆಂಡ್‌| ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ 1.3 ರೂ.ಕೋಟಿ

ರಶ್ಮಿಕಾ ಅವರ ಹಿಂದಿನ ಚಿತ್ರ 'ಛಾವಾ' ಮೊದಲ ದಿನವೇ 24 ರೂ.ಕೋಟಿ ಗಳಿಸಿ ದಾಖಲೆ ಮುರಿದಿತ್ತು. ಇದರ ನಂತರ 'ದ ಗರ್ಲ್‌ಫ್ರೆಂಡ್' ಕಂಡಿರುವ ಕಡಿಮೆ ಆರಂಭಿಕ ಪ್ರದರ್ಶನವು ಸಾಮಾಜಿಕ ಮಾಧ್ಯಮದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Update: 2025-11-08 06:49 GMT

ರಶ್ಮಿಕಾ ಮಂದಣ್ಣ 

Click the Play button to listen to article

ಬಾಲಿವುಡ್‌ನಲ್ಲಿ ಈ ವರ್ಷ ರಶ್ಮಿಕಾ ಮಂದಣ್ಣ ಅವರಿಗೆ ಮಹತ್ವದ ವರ್ಷವಾಗಿದೆ. ಬ್ಲಾಕ್‌ಬಸ್ಟರ್ 'ಛಾವಾ' ಚಿತ್ರದಿಂದ ಹಿಡಿದು ಮ್ಯಾಡಾಕ್ ಅವರ ಹಾರರ್-ಕಾಮಿಡಿ 'ಥಾಮಾ'ವರೆಗೆ ಅವರು ದೊಡ್ಡ ಪರದೆಯ ಮೇಲೆ ತಮ್ಮ ಯಶಸ್ಸನ್ನು ಮುಂದುವರೆಸಿದ್ದಾರೆ. ಆದರೂ ನ.7 ರಂದು ಬಿಡುಗಡೆಯಾದ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಚಿತ್ರ 'ದ ಗರ್ಲ್‌ಫ್ರೆಂಡ್' ಮೊದಲ ದಿನವೇ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ.

ರಾಹುಲ್ ರವೀಂದ್ರನ್ ನಿರ್ದೇಶನದ ಈ ಪ್ರೇಮಕಥೆಯು ಮೊದಲ ದಿನ 1.3 ರೂ.ಕೋಟಿ ಗಳಿಸಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿಸಿದೆ. ಇದು ಕಥಾವಸ್ತುವಿನ ರೋಮಾಂಚಕತೆಯ ದೃಷ್ಟಿಯಿಂದ ತುಸು ಕಡಿಮೆ ಆರಂಭವಾಗಿದೆ. ರಶ್ಮಿಕಾ ಅವರ ಜೊತೆಗೆ ನಟಿಸಿರುವ ದೀಕ್ಷಿತ್ ಶೆಟ್ಟಿ ಅವರ ಪಾತ್ರಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಿತ್ರದಲ್ಲಿ ಅನು ಎಮ್ಯಾನುಯೆಲ್, ರಾವ್ ರಮೇಶ್ ಮತ್ತು ರೋಹಿಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ರಶ್ಮಿಕಾ ಅವರ ಹಿಂದಿನ ಚಿತ್ರ 'ಛಾವಾ' ಮೊದಲ ದಿನವೇ 24 ರೂ.ಕೋಟಿ ಗಳಿಸಿ ದಾಖಲೆ ಮುರಿದಿತ್ತು. ಇದರ ನಂತರ 'ದ ಗರ್ಲ್‌ಫ್ರೆಂಡ್' ಕಂಡಿರುವ ಕಡಿಮೆ ಆರಂಭಿಕ ಪ್ರದರ್ಶನವು ಸಾಮಾಜಿಕ ಮಾಧ್ಯಮದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೆಲವು ಅಭಿಮಾನಿಗಳು ಸಾಂಪ್ರದಾಯಿಕ ತೆಲುಗು ಚಿತ್ರಗಳಲ್ಲಿ ನಾಯಕಿಯನ್ನು ಪೂಜ್ಯನೀಯವಾಗಿ ತೋರಿಸಲಾಗುತ್ತದೆ, ಆದರೆ, ಈ ಚಿತ್ರದಲ್ಲಿ ರಶ್ಮಿಕಾ ಅವರನ್ನು 'ಕೆಟ್ಟ ರೀತಿಯಲ್ಲಿ' ತೋರಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರಕ್ಕೆ 'ಒಳ್ಳೆಯ ಚಿತ್ರ' ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ನೆಟಿಜನ್, "ಚಿತ್ರ ಚೆನ್ನಾಗಿದೆ. ಆದರೆ ಸ್ವಲ್ಪ ಎಳೆಯಲಾಗಿದೆ. 'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್' ಮತ್ತು 'ಅನಿಮಲ್' ನಂತರ ಇದು ರಶ್ಮಿಕಾ ಅವರ ಅತ್ಯುತ್ತಮ ಅಭಿನಯ" ಎಂದು ಶ್ಲಾಘಿಸಿದ್ದಾರೆ. ಮತ್ತೊಂದು ಅಭಿಪ್ರಾಯದ ಪ್ರಕಾರ, ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಅವರ ನಿಶ್ಚಿತಾರ್ಥ ಘೋಷಣೆಯ ಸುದ್ದಿ ಈ ಚಿತ್ರದ ಬಿಡುಗಡೆಯ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗಿದೆ.

Tags:    

Similar News