‘ಕಾಗದ’ದ ಪ್ರೇಮಕಥೆ; ಟೀಸರ್‌ ಬಿಡುಗಡೆ

ಸಿನಿಮಾ ಪ್ರೇಕ್ಷಕರು ಸದಾ ಲವ್​ ಸ್ಟೋರಿಗಳನ್ನು ನೋಡಲು ಇಷ್ಟಪಡುತ್ತಾರೆ. ಇದೀಗ ಕನ್ನಡದಲ್ಲಿ ‘ಕಾಗದ’ ಎಂಬ ಹೊಸ ಸಿನಿಮಾ ಸಿದ್ಧವಾಗಿದೆ.;

Update: 2024-06-01 09:37 GMT
ಕಾಗದ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.
Click the Play button to listen to article

ಸಿನಿಮಾ ಪ್ರೇಕ್ಷಕರು ಸದಾ ಲವ್​ ಸ್ಟೋರಿಗಳನ್ನು ನೋಡಲು ಇಷ್ಟಪಡುತ್ತಾರೆ. ಇದೀಗ ಕನ್ನಡದಲ್ಲಿ ‘ಕಾಗದ’ ಎಂಬ ಹೊಸ ಸಿನಿಮಾ ಸಿದ್ಧವಾಗಿದೆ. ಶೀರ್ಷಿಕೆಯೇ ಹೇಳುವಂತೆ ಕಾಗದಗಳು ವಿನಿಮಯ ಆಗುತ್ತಿದ್ದ ಕಾಲದ ಲವ್​ ಸ್ಟೋರಿ ಇದು. ಅಂದರೆ, ಮೊಬೈಲ್​ಗಳು ಬರುವುದಕ್ಕೂ ಮುನ್ನ ಇದ್ದ ಪ್ರೇಮಕಥೆ. ಅದನ್ನು ‘ಕಾಗದ’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

ಅರುಣ್ ಕುಮಾರ್ ಆಂಜನೇಯ ಅವರ ನಿರ್ಮಾಣದಲ್ಲಿ ರಂಜಿತ್ ಅವರು ನಿರ್ದೇಶಿಸಿರುವ "ಕಾಗದ" ಚಿತ್ರದ ಟೀಸರ್ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

Full View

"ಕಾಗದ" ಮೊಬೈಲ್ ಬರುವ ಮುಂಚೆ ನಡೆದ ಪ್ರೇಮಕಥೆ. ಹಳ್ಳಿಹಳ್ಳಿಗಳ ನಡುವಿನ ವೈಷಮ್ಯದ ನಡುವೆಯೂ ಅರಳಿದ ಪ್ರೇಮಕಥೆಯೂ ಹೌದು. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ. ಇತ್ತೀಚಿಗೆ ಬಿಡುಗಡೆಯಾಗಿರುವ ಟೀಸರ್ ಗೆ ಮೆಚ್ಚುಗೆ ದೊರಕುತ್ತಿದೆ. ಈ ಹಿಂದೆ "ಆಪಲ್ ಕೇಕ್" ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ ಎನ್ನುತ್ತಾರೆ ನಿರ್ದೇಶಕ ರಂಜಿತ್.

ಕಾಗದ’ ಸಿನಿಮಾದ ಮೂಲಕ ಯುವ ನಟ ಆದಿತ್ಯ ಅವರು ಹೀರೋ ಆಗಿ ಚಿತ್ರರಂಗ ಪ್ರವೇಶ ಪಡೆಯುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯತೆ ಪಡೆದ ಅಂಕಿತಾ ಜಯರಾಂ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ನೇಹಾ ಪಾಟೀಲ್ ಅವರಿಗೆ ಒಂದು ವಿಶೇಷ ಪಾತ್ರ ಈ ಸಿನಿಮಾದಲ್ಲಿದೆ. ಬಾಲರಾಜ್​ ವಾಡಿ, ಅಶ್ವತ್ಥ್​ ನೀನಾಸಂ, ಮಠ ಕೊಪ್ಪಳ, ಶಿವಮಂಜು ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಮಾಡಿದ್ದು,

ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಪವನ್ ಗೌಡ ಸಂಕಲನ ಮಾಡಿದ್ದಾರೆ.

Tags:    

Similar News