ʼದಿ ಜಡ್ಜ್‌ಮೆಂಟ್ʼ ತಂಡದಿಂದ ವಿಶೇಷ ಪೋಸ್ಟರ್ ಬಿಡುಗಡೆ
ಗುರುರಾಜ ಕುಲಕರ್ಣಿ (ನಾಡಗೌಡ) ಅವರ ʼದಿ ಜಡ್ಜ್‌ಮೆಂಟ್ʼ ತಂಡವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಿತು.;
By : The Federal
Update: 2024-03-09 07:26 GMT
ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ದಿ ಜಡ್ಜ್‌ಮೆಂಟ್’ ಚಿತ್ರತಂಡ ಮಹಿಳಾ ನಟರು ಮತ್ತು ತಂತ್ರಜ್ಞರನ್ನು ಒಳಗೊಂಡ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಗುರುರಾಜ ಕುಲಕರ್ಣಿ (ನಾಡಗೌಡ) ಅವರ “ದಿ ಜಡ್ಜ್‌ಮೆಂಟ್” ತಂಡವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಿತು.
ಈ ಸಿನಿಮಾದ ಮಹಿಳಾ ನಟರು ತಮ್ಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು ಮತ್ತು ಪ್ರಪಂಚವು ಅದನ್ನು ಹೇಗೆ ತೊಡೆದು ಹಾಕಬೇಕೆಂದು ಅವರು ಬಯಸುತ್ತಾರೆ ಎಂಬುವುದನ್ನು ತಿಳಿಸಿದರು.
ಲಕ್ಷ್ಮೀ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್, ಧನ್ಯ ರಾಮ್‌ಕುಮಾರ್, ಸೀತಾ ಕೋಟೆ, ರೇಖಾ ಕೂಡ್ಲಿಗಿ ಮತ್ತು ರೂಪ ರಾಯಪ್ಪ ಅವರು ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು.