ತಮಿಳಿನ ‘ನಾನ್ ವೈಲೆನ್ಸ್’| ಶಿವಣ್ಣ ಫಸ್ಟ್ ಲುಕ್ ಔಟ್
90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಸುತ್ತುವ ಕಥೆಯನ್ನು ಈ ಸಿನಿಮಾ ಹೊಂದಿದೆ.;
ತಮಿಳಿನ ʻಮೆಟ್ರೋʼ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ʻನಾನ್ ವೈಲೆನ್ಸ್ʼ ಸಿನಿಮಾಗೆ ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶಿವಣ್ಣ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತಿದ್ದಾರೆ. ದಿತಿ ಬಾಲನ್, ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ.
90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಸುತ್ತುವ ಕಥೆಯನ್ನು ಈ ಸಿನಿಮಾ ಹೊಂದಿದೆ.
ʻನಾನ್ ವೈಲೆನ್ಸ್ʼ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೈಲರ್ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಎಕೆ ಪಿಕ್ಚರ್ಸ್ ನಡಿ ಲೇಖಾ ನಾನ್ ವೈಲೆನ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, 90ರ ದಶಕವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರೀ ಶ್ರಮವಹಿಸುತ್ತಿದೆ. ಯುವನ್ ಶಂಕರ್ ರಾಜ್ ಸಂಗೀತ, ಎನ್ ಎಸ್ ಉದಯ್ ಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಎನ್ ಬಿ ಸಂಕಲನ ಚಿತ್ರಕ್ಕಿದೆ.
ಇನ್ನು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ. ಆರ್ ಚಂದ್ರು ಅವರು ಇತ್ತೀಚೆಗೆ ‘ಆರ್ಸಿ ಸ್ಟುಡಿಯೊ’ ಆರಂಭಿಸಿ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಇದೀಗ ಆರನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಮುಂಚೆ ಈ ಜೋಡಿಯ ʻಮೈಲಾರಿʼ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು.