Sanju Weds Geetha 2| ಕೊನೆ ಕ್ಷಣದಲ್ಲಿ 'ಸಂಜು ವೆಡ್ಸ್ ಗೀತಾ 2' ಸಿನಿಮಾ ರಿಲೀಸ್‌ ಮುಂದೂಡಿಕೆ

Sanju Weds Geetha 2| ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಬಿಡುಗಡೆಗೆ ಹೈದಾರಾಬಾದ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ.;

Update: 2025-01-10 06:29 GMT
'ಸಂಜು ವೆಡ್ಸ್ ಗೀತಾ 2' ಸಿನಿಮಾ ಮುಂದೂಡಿಕೆ

ಶ್ರೀನಗರ ಕಿಟ್ಟಿ, ರಚಿತಾ ರಾಮ್ ಮುಖ್ಯ ಭೂಮಿಕೆಯ ಸಿನಿಮಾ  ‘ಸಂಜು ವೆಡ್ಸ್​ ಗೀತಾ 2’ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿದೆ. ಈ ಸಿನಿಮಾಗೆ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದು, ಚಿತ್ರತಂಡದಲ್ಲಿನ ಜಟಾಪಟಿಯಿಂದಾಗಿ ಸಿನಿಮಾದ ರಿಲೀಸ್​ ಮುಂದಕ್ಕೆ ಹೋಗುವಂತಾಗಿದೆ.

ಟೈಟಲ್​ ಕಾರಣದಿಂದಲೇ ‘ಸಂಜು ವೆಡ್ಸ್​ ಗೀತಾ 2’ ಚಿತ್ರ ನಿರೀಕ್ಷೆ ಮೂಡಿಸಿತ್ತು.  ಜನವರಿ 10  ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. ‘ಕ್ಷಮಿಸಿ, ಸಿನಿಮಾದ ರಿಲೀಸ್​ ದಿನಾಂಕ ಮುಂದೂಡಲಾಗಿದೆ’ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.

ನಿರ್ದೇಶಕ ನಾಗಶೇಖರ್​ ಮತ್ತು ಟಾಲಿವುಡ್ ನಿರ್ಮಾಪಕ ರಾಮರಾವ್ ನಡುವಿನ ಜಟಾಪಟಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಬಿಡುಗಡೆಗೆ ಹೈದಾರಾಬಾದ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. 

ಈಗಾಗಲೇ ಈ ಸಿನಿಮಾ ನಾಗಶೇಖರ್ ನಿರ್ದೇಶನದ ಸಿನಿಮಾ ಗೆಲ್ಲುವ ಎಲ್ಲಾ ಲಕ್ಷಣಗಳಿವೆ. ಚಿತ್ರದ ಮೊದಲ ಭಾಗ 2011ರ ಏಪ್ರಿಲ್ 1ರಂದು ತೆರೆಕಂಡು ಸೂಪರ್ ಹಿಟ್ ಆಗಿತ್ತು. ನಾಗಶೇಖರ್ ನಿರ್ದೇಶನದ ಮೊದಲ ಭಾಗದಲ್ಲೂ ಶ್ರೀನಗರ ಕಿಟ್ಟಿ ಅಭಿನಯಿಸಿದ್ದರು. ಇವರಿಗೆ ಜೋಡಿಯಾಗಿ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ 'ಸಂಜು ವೆಡ್ಸ್ ಗೀತಾ' ಸಿನಿಮಾದಲ್ಲಿ ರಮ್ಯಾ ಅವರು ನಾಯಕಿ ಆಗಿದ್ದರು. ಆದರೆ 'ಸಂಜು ವೆಡ್ಸ್ ಗೀತಾ 2' ಸಿನಿಮಾಗೆ ರಚಿತಾ ರಾಮ್ ನಾಯಕಿ. ಆದರೆ ಈ ಸಿನಿಮಾದ ಕಥೆಯೇ ಬೇರೆ ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ. ಈ ಸಿನಿಮಾ 'ಸಂಜು ವೆಡ್ಸ್ ಗೀತಾ' ಸಿನಿಮಾದ ಮುಂದುವರಿದಿರುವ ಭಾಗ ಅಲ್ಲ ಎಂದು ಇತ್ತೀಚಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಟಿ ರಚಿತಾ ರಾಮ್ ಸ್ಪಷ್ಟನೆ ಕೂಡ ನೀಡಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದೂಡಲಾಗಿದೆ. 

ಈ ವಾರ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘ಛೂ ಮಂತರ್​’, ‘ಗೇಮ್​ ಚೇಂಜರ್​’ ಮುಂತಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ತೆರೆಕಾಣುತ್ತಿವೆ. ಈ ರೇಸ್​ನಿಂದ ‘ಸಂಜು ವೆಡ್ಸ್​ ಗೀತಾ 2’ ಸಿನಿಮಾ ಹಿಂದಕ್ಕೆ ಸರಿದಿದೆ.

Tags:    

Similar News