ಅಡ್ವೋಕೇಟ್ ಅಹನಳಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಹರಿಪ್ರಿಯಾ!
ನಟಿ ಹರಿಪ್ರಿಯಾ ನ್ಯಾಯದ ಪರ ಹೋರಾಡುವ ಅಡ್ವೊಕೇಟ್ ಅಹನಾ ಅಗ್ನಿಹೋತ್ರಿ ಪಾತ್ರದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.;
ನಟಿ ಹರಿಪ್ರಿಯ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿಯರಲ್ಲೊಬ್ಬರು. 'ಬೆಲ್ ಬಾಟಮ್', 'ರನ್ನ', 'ಭರ್ಜರಿ' ಮುಂತಾದ ಸಕ್ಸಸ್ ಸಿನಿಮಾಗಳನ್ನು ನೀಡಿರುವ ಹರಿಪ್ರಿಯಾ, ಇದೀಗ ಧಾರಾವಾಹಿ ಕಡೆಗೆ ಮುಖ ಮಾಡುತ್ತಿದ್ದಾರೆ.
ನಟಿ ಹರಿಪ್ರಿಯಾ ನ್ಯಾಯದ ಪರ ಹೋರಾಡುವ ಅಡ್ವೊಕೇಟ್ ಅಹನಾ ಅಗ್ನಿಹೋತ್ರಿ ಪಾತ್ರದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಧಾರಾವಾಹಿಯ ಪ್ರೋಮೊ ಬಿಡುಗಡೆಯಾಗಿದ್ದು ಹರಿಪ್ರಿಯಾ ಕಾಣಿಸಿಕೊಳ್ಳಲಿರುವ ಸೀರಿಯಲ್ ಯಾವುದು? ಈ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಹರಿಪ್ರಿಯಾ ಅವರಿಗೆ ಬಹಳ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಹೀಗಾಗಿ ಜನರು ಹಾಗೂ ಪ್ರೇಕ್ಷಕರು ಹರಿಪ್ರಿಯಾ ಕಾಣಿಸಿಕೊಳ್ಳಲಿರುವ ಸಂಚಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಹರಿಪ್ರಿಯಾ ಕಳೆದ ವರ್ಷ ನಟ ವಸಿಷ್ಠ ಸಿಂಹ ಜೊತೆಗೆ ವಿವಾಹವಾದರು. ತದನಂತರ ಈ ನಟಿ ಅಷ್ಟಾಗಿ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸದ್ಯ ಕಿರುತೆರೆಯ ಸೀರಿಯಲ್ ಪ್ರೋಮೋದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದಾರೆ.