ಸರಳ ದಾರಿಯಲ್ಲಿ ಓಡುವ ಸೈಕಲ್
ಆದರೆ, ಬಾಗಲಕೋಟೆಯ ಯುವ ನಟ ಸಚಿನ್ ಪುರೋಹಿತ್ ತಮ್ಮದೇ ಆದ ರೀತಿಯಲ್ಲಿ ಸೈಕಲ್ ನಂಬಿ ಅದರ ಸುತ್ತವೇ ಕಥೆ ಹೆಣೆದು. ನಾಯಕ ನಟರಾಗಿ, ಕ್ಯಾಮರಾವನ್ನೂ ತಾವೇ ಹೆಗಲ ಮೇಲೆ ಹೊತ್ತು ಆಕ್ಷನ್ ಕಟ್ ಹೇಳಿದ್ದಾರೆ.;
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಚಿತ್ರಗಳಿಗೆ ಬರ ಇದ್ದರೆ, ಹೊಸಬರ ಪ್ರಯತ್ನಗಳು ಹಾಗೂ ಪ್ರಯೋಗಗಳಿಗೆ ಬರವಿಲ್ಲ. ಗಾಂಧಿನಗರದ ಕಥೆ ಏನಿದೆಯೋ ಗೊತ್ತಿಲ್ಲ. ಆದರೆ, ಬಾಗಲಕೋಟೆಯ ಯುವ ನಟ ಸಚಿನ್ ಪುರೋಹಿತ್ ತಮ್ಮದೇ ಆದ ರೀತಿಯಲ್ಲಿ ಸೈಕಲ್ ನಂಬಿ ಅದರ ಸುತ್ತವೇ ಕಥೆ ಹೆಣೆದು. ನಾಯಕ ನಟರಾಗಿ, ಕ್ಯಾಮರಾವನ್ನೂ ತಾವೇ ಹೆಗಲ ಮೇಲೆ ಹೊತ್ತು ಆಕ್ಷನ್ ಕಟ್ ಹೇಳಿದ್ದು, ಲಾಭ ನಷ್ಟದ ಲೆಕ್ಕ ಬೇರೆಯವರ ತಲೆಯ ಮೇಲೇಕೆ ಎಂದು ತಾವೇ ಬಂಡವಾಳವನ್ನೂ ಹೂಡುವ ಮೂಲಕ ಸೈಕಲ್ ಸವಾರಿ ಮಾಡಿದ್ದಾರೆ.
ಬಡ ಹಳ್ಳಿ ಕಾಲೇಜು ಹುಡುಗನೊಬ್ಬನ ಸೈಕಲ್ ಪೀತಿ. ಅದಕ್ಕಾಗಿ ಆತ ನಡೆಸುವ ಹೋರಾಟ, ಅದನ್ನೇ ತನ್ನ ಸ್ವಂತ ಹೆಂಡತಿ ಎಂದು ಭಾವಿಸಿ ಅದಕ್ಕೊಂದು ಹುಡುಗಿಯ ಹೆಸರಿಟ್ಟು, ಸೈಕಲ್ಲೇ ತನ್ನ ಸರ್ವಸ್ವ ಎಂದು ತಿರುಗಾಡುವ ಯುವಕನ ಬಾಳಲ್ಲಿ ತಾನು ಸೈಕಲ್‌ಗೆ ಇಟ್ಟಿರುವ ಹೆಸರಿನ ಹುಡುಗಿಯೇ ಆತನ ಗೆಳತಿಯಾಗಿ ನಂತರ ಪ್ರೇಯಸಿಯಾಗಿ, ಎಂಗೇಜ್ ಮೆಂಟ್ ಆಗಿ ಸರಾಗವಾಗಿ ಪ್ರೇಕ್ಷಕರ ಊಹೆಗೆ ತಕ್ಕಂತೆ ನಡೆಯುವ ಕಥೆ.
ನಟ ಕಂ ನಿರ್ದೇಶಕ ಸಚಿನ್ ಪುರೋಹಿತ್ ಒಂದು ಸೈಕಲ್ ಇಟ್ಟುಕೊಂಡು ಕಥೆ ಹೆಣೆದಿರುವುದು ಕುತೂಹಲಕಾರಿಯಾಗಿದೆ. ಆದರೆ, ಕಥೆಯ ತಿರುಳು ಸೈಕಲ್ ಹಳ್ಳಿಯ ಕಾಲು ದಾರಿಯಲ್ಲಿ ಓಡುತ್ತಿದ್ದರೂ, ತಿರುವು ಮುರುವುಗಳಿಲ್ಲದೇ ನ್ಯಾಷನಲ್ ಹೈವೇಯಲ್ಲಿ ಯಾವುದೂ ಹಂಪ್ ಇಲ್ಲದೇ ಸರಾಗವಾಗಿ ನೀರಿನಲ್ಲಿ ದೋಣಿ ಹೋದಂತೆ ಹೋಗುತ್ತದೆ. ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯುವ ಸೀನ್ ಗಳು ತೊಂಭತ್ತರ ದಶಕದ ಚಿತ್ರಗಳನ್ನು ನೆನಪಿಸುವಂತಿದೆ.
ನಾಯಕ ಸಚಿನ್ ನಂಬಿರುವ ಸೈಕಲ್‌ನಿಂದ ಏನೆಲ್ಲ ಅವಾಂತರಗಳಾಗುತ್ತವೆ. ಅವುಗಳನ್ನು ಮೆಟ್ಟಿನಿಂತು ಹೇಗೆ ಯಶಸ್ವಿಯಾಗುತ್ತಾನೆ ಎನ್ನುವುದೇ ಚಿತ್ರದ ಒನ್‌ಲೈನ್. ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರೇ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಧನ್ನು ಪಾತ್ರದಲ್ಲಿ ನಟಿ ಸತ್ಯಶ್ರೀ ಪಾತಕ್ಕೆ ನ್ಯಾಯ ಒದಗಿಸಿದ್ದಾರೆ. ಬಸನಗೌಡ ಪಾಟೀಲ್ ಗಮನ ಸೆಳೆಯುತ್ತಾರೆ. ಎಂಎಲ್‌ಎ ಕಾಳೇಗೌಡ ಮೆಚ್ಚುಗೆ ಗಳಿಸುತ್ತಾರೆ.
ಸೈಕಲ್ ಅಂಗಡಿಯ ಚಾಚಾ ಸೈಕಲ್ ಹಾಗೂ ನಾಯಕ ಸಚಿನ್ ಆಪ್ತತೆ ನೋಡುಗರಿಗೆ ಆಪ್ತರಾಗುತ್ತಾರೆ. ಸೈಕಲ್ ಬಗ್ಗೆಯೇ ಇರುವ ಹಾಡು ಚೆನ್ನಾಗಿದೆ. ಉತ್ತರ ಕರ್ನಾಟಕ ಶೈಲಿಯ ಹಾಡು ಖುಷಿ ಕೊಡುವಂತಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಟ್ರೆಂಡ್ ಶೆಟ್ಟರ್ ಆಗುವ ಸಾಧ್ಯತೆ ಇದೆ.
ಸಚಿನ್ ಪುರೋಹಿತ್ ಉತ್ತರ ಕರ್ನಾಟಕದ ಹುಡುಗ ಚಿತ್ರರಂಗದ ಬಗ್ಗೆ ತನ್ನದೇ ಆದ ಕನಸು ಕಟ್ಟಿಕೊಂಡು ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಮಾಯಾ ಲೋಕಕ್ಕೆ ಪ್ರವೇಶ ಪಡೆದಿದ್ದು. ತಮ್ಮ ಎರಡನೇ ಚಿತ್ರದ ಮೂಲಕ ಒಬ್ಬ ನಟನಾಗಿ ಭರವಸೆ ಮೂಡಿಸುತ್ತಾರೆ.
ಸಚಿನ್ಬಾಗಲಕೋಟೆಯ ಯುವ ನಟ ಸಚಿನ್ ಪುರೋಹಿತ್ ತಮ್ಮದೇ ಆದ ರೀತಿಯಲ್ಲಿ ಸೈಕಲ್ ನಂಬಿ ಅದರ ಸುತ್ತವೇ ಕಥೆ ಹೆಣೆದು. ನಾಯಕ ನಟರಾಗಿ, ಕ್ಯಾಮರಾವನ್ನೂ ತಾವೇ ಹೆಗಲ ಮೇಲೆ ಹೊತ್ತು ಆಕ್ಷನ್ ಕಟ್ ಹೇಳಿದ್ದು, ಲಾಭ ನಷ್ಟದ ಲೆಕ್ಕ ಬೇರೆಯವರ ತಲೆಯ ಮೇಲೇಕೆ ಎಂದು ತಾವೇ ಬಂಡವಾಳವನ್ನೂ ಹೂಡುವ ಮೂಲಕ ಸೈಕಲ್ ಸವಾರಿ ಮಾಡಿದ್ದಾರೆ. ನಟನಾಗಿ ಲೀಲಾಜಾಲವಾಗಿ ನಟಿಸಿದ್ದು, ಒಳ್ಳೆಯ ಅವಕಾಶಗಳು ದೊರೆತರೆ ಚಾಕಲೇಟ್ ಹಿರೋ ಆಗುವ ಲಕ್ಷಣಗಳಿವೆ. ಆದರೆ, ನಿರ್ದೇಶನದಲ್ಲಿ ಇನ್ನಷ್ಟು ಸೈಕಲ್ ಹೊಡೆಯಬೇಕು. ಆದರೆ, ಉತ್ತರ ಕರ್ನಾಟಕದ ಹೊಸ ಪ್ರತಿಭೆ ಈಗಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಇಲ್ಲಿ ನೆಲೆಯೂರುವ ಭರವಸೆ ಮೂಡಿಸಿರುವುದು ಶ್ಲಾಘನೀಯ.