ʼರಾಹಾ ಕಪೂರ್ʼ ಬಾಲಿವುಡ್ ರಿಚೆಸ್ಟ್ ಸ್ಟಾರ್ ಕಿಡ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಪುತ್ರಿ ರಾಹಾ ಕಪೂರ್ ಬಾಲಿವುಡ್‌ನ ಅತ್ಯಂತ ಕಿರಿಯ ಮತ್ತು ಶ್ರೀಮಂತ ಮಗು ಎನಿಸಿಕೊಂಡಿದ್ದಾರೆ.;
ತೈಮೂರ್ ಅಲಿ ಖಾನ್ ಪಕ್ಕಕ್ಕೆ ಸರಿಸಿ, ಮತ್ತೊಬ್ಬ ಸ್ಟಾರ್ ಕಿಡ್ ತನ್ನ ಸೆಲೆಬ್ರಿಟಿ ಸ್ಥಾನಮಾನವನ್ನು ಪಡೆದುಕೊಳ್ಳುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಪುತ್ರಿ ರಾಹಾ ಕಪೂರ್ ಬಾಲಿವುಡ್‌ನ ಅತ್ಯಂತ ಕಿರಿಯ ಮತ್ತು ಶ್ರೀಮಂತ ಮಗು ಎನಿಸಿಕೊಂಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಹೊಸ ಕನಸಿನ ಮನೆ, ಬಾಂದ್ರಾದ ಹೃದಯಭಾಗದಲ್ಲಿರುವ ಬಂಗಲೆಯನ್ನು ತಮ್ಮ ಪುಟ್ಟ ಮಗಳು ರಾಹಾ ಕಪೂರ್‌ಗೆ ಉಡುಗೊರೆಯಾಗಿ ನೀಡಲಿದ್ದಾರೆ.
ರಣಬೀರ್ ಅವರ ತಾಯಿ ನೀತು ಕಪೂರ್ ಮತ್ತು ಆಲಿಯಾ ಭಟ್ ಕಳೆದ ಒಂದು ವರ್ಷದಿಂದ ಬಾಂದ್ರಾದ ಕೃಷ್ಣ ರಾಜ್ ಬಂಗಲೆಯ ನವೀಕರಣ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಈ ಬಂಗಲೆಗೆ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ರಾಜ್ ಕಪೂರ್ ಮತ್ತು ಅವರ ಪತ್ನಿ ಕೃಷ್ಣ ಅವರ ಹೆಸರನ್ನು ಇಡಲಾಗಿತ್ತು. ಈ ಬಂಗಲೆಯನ್ನು ಮೊಮ್ಮಗ ರಣಬೀರ್ ಕಪೂರ್ ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಈ ಬಂಬಲೆ ರಾಹಾ ಪಾಲಾಗಲಿದೆ.
ಬಾಲಿವುಡ್‌ನ ಅತ್ಯಂತ ಕಿರಿಯ ಶ್ರೀಮಂತ ಮಗು
ಸುಮಾರು ₹ 250 ಕೋಟಿ ವೆಚ್ಚದ ಈ ಬಂಗಲೆಗೆ ಈಗ ರಣಬೀರ್ ಮತ್ತು ಆಲಿಯಾ ಅವರ ಮಗಳು ಒಂದು ವರ್ಷದ ರಾಹಾ ಹೆಸರನ್ನು ಇಡಲಾಗಿದೆ. ಹೀಗೆ ರಾಹಾ ಬಾಲಿವುಡ್‌ನ ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ಕಿಡ್ ಆಗಿ ಹೊರಹೊಮ್ಮಿದ್ದಾರೆ.
ಈ ಬೃಹತ್ ಬಂಗಲೆಯ ಹೊರತಾಗಿ, ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾದಲ್ಲಿ 4 ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದು ₹ 60 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ.