ಕಾಲ್ತುಳಿತಕ್ಕೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 50 ಲಕ್ಷ ನೀಡಿದ ಪುಷ್ಪಾ ಸಿನಿಮಾ ತಂಡ
ಮೈತ್ರಿ ಸಹ ಮಾಲೀಕ ನವೀನ್ ಯೆರ್ನೇನಿ ಮತ್ತು ರಾಜ್ಯ ಸಚಿವ ಕೋಮತಿ ರೆಡ್ಡಿ ಬಾಲಕನನ್ನು ಭೇಟಿ ಮಾಡಿ 50 ಲಕ್ಷ ರೂ.ಗಳ ಚೆಕ್ ಅನ್ನು ಅವನ ತಂದೆ ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು.
ಪುಷ್ಪಾ ದಿ ರೂಲ್ ಸಿನಿಮಾದ ಪ್ರೀಮಿಯರ್ ಶೋ ವೇಳೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಿನಿಮಾ ನಿರ್ಮಾಣ ಸಂಸ್ಥೆ 50 ಲಕ್ಷ ರೂಪಾಯಿ ಪರಿಹಾರ ವಿತರಿಸಿದ್ದಾರೆ. ಅಲ್ಲು ಅರ್ಜುನ್ ಅವರು ಹೈದರಾಬಾದ್‌ನ ಚಿತ್ರಮಂದಿರಕ್ಕೆ ಬಂದಾಗ ಘಟನೆ ನಡೆದಿತ್ತು.ಅಲ್ಲಿಂದ ಬಳಿಕ ಅಲ್ಲು ಅರ್ಜುನ್ ವಿವಾದಕ್ಕೆ ಒಳಗಾಗಿದ್ದರು. ಬಳಿಕ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಂತ್ರಸ್ತೆಯ ಕುಟುಂಬಕ್ಕೆ 50 ಲಕ್ಷ ರೂ.ಗಳನ್ನು ಹಸ್ತಾಂತರಿಸಿದೆ.
ಡಿಸೆಂಬರ್ 4ರಂದು ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡರೆ. ಅವರ ಎಂಟು ವರ್ಷದ ಮಗನನ್ನು ಹೈದರಾಬಾದ್‌ನ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈತ್ರಿ ಸಹ ಮಾಲೀಕ ನವೀನ್ ಯೆರ್ನೇನಿ ಮತ್ತು ರಾಜ್ಯ ಸಚಿವ ಕೋಮತಿ ರೆಡ್ಡಿ ಬಾಲಕನನ್ನು ಭೇಟಿ ಮಾಡಿ 50 ಲಕ್ಷ ರೂ.ಗಳ ಚೆಕ್ ಅನ್ನು ಅವನ ತಂದೆ ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು.
ಅಲ್ಲು ಅರ್ಜುನ್ ಕುಟುಂಬಕ್ಕೆ 25 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ನಿರ್ದೇಶಕ ಸುಕುಮಾರ್ ಮತ್ತು ಅವರ ಪತ್ನಿ ತಬಿತಾ 5 ಲಕ್ಷ ರೂ.
ಒತ್ತಡದಲ್ಲಿ ಅಲ್ಲು ಅರ್ಜುನ್
ಡಿಸೆಂಬರ್ 4 ರಂದು ಸಂಧ್ಯಾ ಚಿತ್ರಮಂದಿರದಲ್ಲಿ ಚಿತ್ರದ ಪ್ರದರ್ಶನಕ್ಕಾಗಿ ಬಂದಿಳಿದ ನಟನನ್ನು ನೋಡಲು ಜನರು ಜಮಾಯಿಸಿದ್ದರಿಂತ ಕಾಲ್ತುಳಿತ ಸಂಭವಿಸಿತು.
ಅಲ್ಲು ಅರ್ಜುನ್ ಸಿನಿಮಾ ಮಂದಿರಕ್ಕೆ ಭೇಟಿ ಮಾಡಲು ಅನುಮತಿ ಪಡೆದಿರಲಿಲ್ಲ ಹಾಗೂ ಜನರು ಹೆಚ್ಚಾದ ಬಳಿಕವೂ ಚಿತ್ರಮಂದಿರದಿಂದ ಹೊರಹೋಗಲಿಲ್ಲ ಎಂದು ಆರೋಪಿಸಲಾಗಿದೆ. ನಟ ಆರೋಪಗಳನ್ನು ನಿರಾಕರಿಸಿದ್ದಾರೆ. ಭಾನುವಾರ ಅವರ ಮನೆ ಮೇಲೆ ಕಲ್ಲೂ ತೂರಾಟ ನಡೆದಿದೆ.
ಅಲ್ಲು ಅರ್ಜುನ್ ಬಂಧನ
ಕಾಲ್ತುಳಿತದ ಕೆಲವು ದಿನಗಳ ನಂತರ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಆದರೆ ತೆಲಂಗಾಣ ಹೈಕೋರ್ಟ್ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತ್ತ. ಒಂದು ರಾತ್ರಿ ಜೈಲಿನಲ್ಲಿದ್ದ ನಂತರ ಜೈಲಿನಿಂದ ಹೊರಬಂದರು. ನಟ ಮತ್ತು ಅವರ ಭದ್ರತಾ ತಂಡ ಮತ್ತು ಥಿಯೇಟರ್ ಮ್ಯಾನೇಜ್ಮೆಂಟ್ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದೆ.