‘ಟೈಗರ್’ ಡಾಕ್ಯುಮೆಂಟರಿಗೆ ಧ್ವನಿ ಆದ ನಟಿ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಡಿಸ್ನಿ ಪ್ಲಸ್ ಹಾಟ್​​ ಸ್ಟಾರ್​ನಲ್ಲಿ ಪ್ರಸಾರ ಕಾಣಲಿರುವ ‘ಟೈಗರ್’ ಹೆಸರಿನ ಡಾಕ್ಯುಮೆಂಟರಿಗೆ ಅವರು ಧ್ವನಿ ಆಗಿದ್ದಾರೆ.

Update: 2024-04-02 06:58 GMT
‘ಟೈಗರ್’ ಹೆಸರಿನ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಧ್ವನಿ ಆಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಡಿಸ್ನಿ ಪ್ಲಸ್ ಹಾಟ್​​ ಸ್ಟಾರ್​ನಲ್ಲಿ ಪ್ರಸಾರ ಕಾಣಲಿರುವ ‘ಟೈಗರ್’ ಹೆಸರಿನ ಡಾಕ್ಯುಮೆಂಟರಿಗೆ ಧ್ವನಿ ನೀಡಿದ್ದಾರೆ.

ಟೈಗರ್’ ಡಾಕ್ಯುಮೆಂಟರಿ ಟ್ರೇಲರ್​ ಅನ್ನು ಪ್ರಿಯಾಂಕಾ ಚೋಪ್ರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ಬರುವ ವಿವರಣೆಗಳು ಪ್ರಿಯಾಂಕಾ ಚೋಪ್ರಾ ಧ್ವನಿಯಲ್ಲಿ ಇರಲಿದೆ. ʻʻಅತ್ಯದ್ಭುತ ಸ್ಟೋರಿ ಹಾಗೂ ಕಾಡಿನ ಅನ್ವೇಷಣೆ ಮಾಡುವ ಈ ಸಿನಿಮಾಗೆ ನಾನು ಧ್ವನಿ ನೀಡುತ್ತಿರುವುದು ಖುಷಿ ಇದೆ. ಇದಕ್ಕಾಗಿ ಕಾಯುತ್ತಿದ್ದೇನೆ. ನಮ್ಮ ಜೊತೆ ಕಾಡನ್ನು ಎಂಜಾಯ್ ಮಾಡಿʼʼ ಎಂದು ಪ್ರಿಯಾಂಕಾ ಕೋರಿಕೊಂಡಿದ್ದಾರೆ.

ಹುಲಿಗಳಿಗೂ ಮನುಷ್ಯರಂತೆ ಭಾವನೆಗಳಿದೆ, ಸಿಟ್ಟಿದೆ, ಪ್ರೀತಿ ಇದೆ, ಹಸಿವು ಇದೆ. ಹುಲಿಗಳ ಜೀವನವನ್ನು ಈ ಸಿನಿಮಾದಲ್ಲಿ ತೆರೆದಿಡಲಾಗುತ್ತಿದೆ. ತಾಯಿ ಹಾಗೂ ಮಗುವಿನ ಬಾಂಧವ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ಹೇಳಲಾಗುತ್ತಿದೆ. ಈ ಸಿನಿಮಾನ ಬರೋಬ್ಬರಿ 8 ವರ್ಷಗಳ ಕಾಲ ಶೂಟ್ ಮಾಡಲಾಗಿದೆ. ಏಪ್ರಿಲ್ 22ರಂದು ಈ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ.

Full View

‘ಟೈಗರ್’ ಡಾಕ್ಯುಮೆಂಟರಿಯ ಟೀಸರ್ ಅನಾವರಣಗೊಂಡಿದೆ. ಕಾಡಿನ ಕುರಿತು ಸಿನಿಮಾ ಮಾಡುವ ಬ್ರಿಟಿಷ್ ಬರಹಗಾರ, ನಿರ್ಮಾಪಕ ಹಾಗೂ ನಿರ್ದೇಶಕ ಮಾರ್ಕ್ ಲೈನ್​ಫೀಲ್ಡ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Tags:    

Similar News