ವಿಚ್ಛೇದನ ಬಳಿಕ ನಿವೇದಿತಾ ಗೌಡ ಮೊದಲ ರೀಲ್ಸ್: ಶೆಡ್ ನೆನಪಿಸಿಕೊಳ್ಳಿ ಎಂದ ನೆಟ್ಟಿಗರು

ಈ ಕಮೆಂಟ್‌ಗಳು ಹೇಗಿವೆ ಅಂದರೆ "ಒಬ್ಬರಿಗೆ ಕಾಮೆಂಟ್ ಹಾಕೋಕೂ ಮುಂಚೆ ಪಟ್ಟಣಗೆರೆ ಶೆಡ್ ನೆನಪು ಮಾಡಿಕೊಂಡು ಹಾಕ್ರಿ" ಅಂತ ಇಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.;

Update: 2024-06-21 08:13 GMT
ನಟಿ ನಿವೇದಿತ ಗೌಡ
Click the Play button to listen to article

ಸ್ಯಾಂಡಲ್‌ವುಡ್‌ನ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುವುದನ್ನು ನಿಲ್ಲಿಸಿಲ್ಲ! ಡೈವೋರ್ಸ್ ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಿಂದ ಕೆಲವು ದಿನ ಅಂತರವನ್ನು ಕಾಯ್ದುಕೊಂಡಿದ್ದರು.

ಇದೀಗ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮೊದಲ ರೀಲ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ರೀಲ್ಸ್ ಕೂಡ ವೈರಲ್ ಆಗುತ್ತಿದ್ದು, ನೆಟ್ಟಿಗರು ಒಂದರ ಹಿಂದೊಂದು ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

ಈ ಕಮೆಂಟ್‌ಗಳು ಹೇಗಿವೆ ಅಂದರೆ "ಒಬ್ಬರಿಗೆ ಕಾಮೆಂಟ್ ಹಾಕೋಕೂ ಮುಂಚೆ ಪಟ್ಟಣಗೆರೆ ಶೆಡ್ ನೆನಪು ಮಾಡಿಕೊಂಡು ಹಾಕ್ರಿ" ಅಂತ ಇಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹಾಗೇ ಇನ್ನೊಬ್ಬರು "ಏನೋ ಬಂದಿತ್ತು ಬಾಯಿಗೆ, ಆದ್ರೆ ಶೆಡ್ ನೆನಪು ಆಗಿ ಸುಮ್ಮನೆ ಅದೆ" ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನಾನ್ ಕಾಮೆಂಟ್ ನೋಡ್ಕೊಂಡ್ ಹೋಗ್ತೀನಪ್ಪಾ.. ಯಾಕ್ ಬೇಕು ಶೆಡ್ ಸಹವಾಸ" ಅಂತ ಕಾಮೆಂಟ್ ಮಾಡುವುದಕ್ಕೆ ಮುಂದಾಗಿದ್ದಾರೆ.

Full View

ಆ ವಿಡಿಯೋಗೆ ಸುಮಾರು 48 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಹಾಗೇ ಕಾಮೆಂಟ್‌ಗಳೂ ಬಂದಿವೆ.

ಚಂದನ್ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಂದನ್ ಶೆಟ್ಟಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಿಡುಗಡೆಗೂ ಸಜ್ಜಾಗಿದೆ. ಇದರ ಜೊತೆಗೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಜೊತೆಯಾಗಿ 'ಕ್ಯಾಂಡಿಕ್ರಶ್' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾವಿನ್ನೂ ಚಿತ್ರೀಕರಣದ ಹಂತದಲ್ಲಿದೆ.

Tags:    

Similar News