ಮಲಯಾಳಂ ಚಲನಚಿತ್ರ ' ಆಟ್ಟಂ: ದಿ ಪ್ಲೇ ' ಅತ್ಯುತ್ತಮ ಚಲನಚಿತ್ರ

ನಿರ್ದೇಶಕ ಆನಂದ್ ಏಕರ್ಶಿ ಅವರ ಚೊಚ್ಚಿಲ ಚಿತ್ರ 'ಆಟ್ಟಂ', ಸಾಮಾಜಿಕ ಅನ್ಯಾಯ ಕುರಿತ ಚಿತ್ರಣಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಜೊತೆಗೆ, ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.;

Update: 2024-08-16 10:50 GMT

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದ್ದು, ʻಕಾಂತಾರʼ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಜೊತೆಗೆ, ʻಕಾಂತಾರʼಕ್ಕೆ ಸಂಪೂರ್ಣ ಮನರಂಜನೆ ಚಲನ ಚಿತ್ರ ಪುರಸ್ಕಾರವೂ ಸಿಕ್ಕಿದೆ. ಕೆಜಿಎಫ್: ಚಾಪ್ಟರ್‌ 2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿಗೆ ಪಾತ್ರವಾಗಿದೆ.

ಮಲಯಾಳಂ ಚಲನಚಿತ್ರ ' ಆಟ್ಟಂ: ದಿ ಪ್ಲೇ ' ಅತ್ಯುತ್ತಮ ಚಲನಚಿತ್ರ, ಹಿಂದಿ ಚಲನಚಿತ್ರ ʻಊಂಚೈʼ ನಿರ್ದೇಶಕ ಸೂರಜ್ ಆರ್. ಬರ್ಜಾತ್ಯಾ ಅವರಿಗೆ ಅತ್ಯುತ್ತಮ ನಿರ್ದೇಶಕ ಪುರಸ್ಕಾರ ಲಭ್ಯವಾಗಿದೆ. 

ನಿರ್ದೇಶಕ ಆನಂದ್ ಏಕರ್ಶಿ ಅವರ ಚೊಚ್ಚಿಲ ಚಿತ್ರ 'ಆಟ್ಟಂ', ಸಾಮಾಜಿಕ ಅನ್ಯಾಯ ಕುರಿತ ಚಿತ್ರಣಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಜೊತೆಗೆ, ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. 'ಸೌದಿ ವೆಲಕ್ಕಾ CC.225/2009' ಅತ್ಯುತ್ತಮ ಮಲಯಾಳಂ ಚಿತ್ರವೆಂದು ನಿರ್ಣಯಿಸಲ್ಪಟ್ಟಿದೆ. 

ಕೋವಿಡ್-19 ಸಾಂಕ್ರಾಮಿಕ ರೋಗದಿಂದ 2022ರ ಪ್ರಶಸ್ತಿಯನ್ನು ಘೋಷಿಸಿರಲಿಲ್ಲ. 2022 ರಲ್ಲಿ ತೆರೆಗೆ ಬರುವ ಚಲನಚಿತ್ರಗಳಿಗೆ 70 ನೇ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. 

ಅತ್ಯುತ್ತಮ ನಟಿ, ಅತ್ಯುತ್ತಮ ನಟ: ತಮಿಳು ಚಿತ್ರ 'ತಿರುಚಿತ್ರಂಬಲಂ'ದ ನಟನೆಗೆ ನಿತ್ಯಾ ಮೆನನ್ ಮತ್ತು ಗುಜರಾತಿ ಚಿತ್ರ ʻಕಛ್‌ ಎಕ್ಸ್‌ಪ್ರೆಸ್ʼ ಗಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ʻಕಾಂತಾರʼ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ, 'ಊಂಚೈ' ಚಿತ್ರಕ್ಕಾಗಿ ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿ ಮತ್ತು ಹರ್ಯಾಣವಿ ಚಿತ್ರ ʻಫೌಜಾʼ ದ ನಟನೆಗೆ ಪವನ್ ಮಲ್ಹೋತ್ರಾ ಅತ್ಯು ತ್ತಮ ಪೋಷಕ ನಟ ಪುರಸ್ಕಾರ ಪಡೆದುಕೊಂಡಿದ್ದಾರೆ. 

ಗುಲ್ಮೊಹರ್ ಅತ್ಯುತ್ತಮ ಹಿಂದಿ ಚಿತ್ರ : ಶರ್ಮಿಳಾ ಟ್ಯಾಗೋರ್ ಮತ್ತು ಮನೋಜ್ ಬಾಜಪೇಯಿ ಅಭಿನಯದ ʻಗುಲ್ಮೊಹರ್ʼ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಬಾಜಪೇಯಿ ಮತ್ತು 'ಕಲಿಖಾನ್' ಚಿತ್ರಕ್ಕಾಗಿ ಸಂಜೋಯ್ ಸಲೀಲ್ ಚೌಧರಿ ಅವರಿಗೆ ವಿಶೇಷ ಉಲ್ಲೇಖಕ್ಕೆ ಪಾತ್ರರಾಗಿದ್ದಾರೆ. 

ಎ.ಆರ್. ರೆಹಮಾನ್ ಅವರಿಗೆ ಮಣಿರತ್ನಂ ಅವರ ʻಪೊನ್ನಿಯಿನ್ ಸೆಲ್ವನ್-ಭಾಗ 1ʼ ರ ಹಿನ್ನೆಲೆ ಸಂಗೀತಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭ್ಯವಾಗಿದೆ. ಇದು ಅತ್ಯುತ್ತಮ ತಮಿಳು ಚಲನಚಿತ್ರ ಎಂದು ಹೆಸರಿಸಲ್ಪಟ್ಟಿದೆ. ಪ್ರೀತಮ್ ಅವರು ʻಬ್ರಹ್ಮಾಸ್ತ್ರ, ಭಾಗ 1ʼ ಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ (ಹಾಡು) ಪ್ರಶಸ್ತಿ ಪಡೆದರು. 

ಚಲನಚಿತ್ರ ತೀರ್ಪುಗಾರರ ಸಮಿತಿ ಮುಖ್ಯಸ್ಥ ರಾಹುಲ್ ರವೈಲ್ ಅವರು ಪ್ರಶಸ್ತಿ ಪ್ರಕಟಿಸಿದರು. ತೀರ್ಪುಗಾರರ ಸಮಿತಿಯ ಇತರ ಸದಸ್ಯರು ನೀಲಾ ಮಾಧಬ್ ಪಾಂಡಾ ಮತ್ತು ಗಂಗಾಧರ ಮೊದಲಿಯಾರ್.‌

ಪ್ರಶಸ್ತಿ ಪಟ್ಟಿ:

ಅತ್ಯುತ್ತಮ ಚಲನಚಿತ್ರ - ಆಟ್ಟಂ

ಅತ್ಯುತ್ತಮ ನಟ - ರಿಷಬ್ ಶೆಟ್ಟಿ, ಕಾಂತಾರ

ಅತ್ಯುತ್ತಮ ನಟಿ - ತಿರುಚಿತ್ರಬಲಂನಲ್ಲಿ ನಿತ್ಯಾ ಮೆನನ್ ಮತ್ತು ಕಛ್‌ ಎಕ್ಸ್‌ಪ್ರೆಸ್‌ನಲ್ಲಿ ಮಾನಸಿ ಪರೇಖ್

ಅತ್ಯುತ್ತಮ ನಿರ್ದೇಶಕ - ಸೂರಜ್ ಬರ್ಜಾತ್ಯಾ, ಊಂಚೈ

ಅತ್ಯುತ್ತಮ ಪೋಷಕ ನಟಿ - ನೀನಾ ಗುಪ್ತಾ, ಊಂಚೈ

ಅತ್ಯುತ್ತಮ ಪೋಷಕ ನಟ - ಪವನ್ ಮಲ್ಹೋತ್ರಾ, ಫೌಜಿ

ಸಂಪೂರ್ಣ ಮನರಂಜನೆ ಚಲನಚಿತ್ರ - ಕಾಂತಾರ

ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್

ಅತ್ಯುತ್ತಮ ತೆಲುಗು ಚಿತ್ರ - ಕಾರ್ತಿಕೇಯ 2

ಅತ್ಯುತ್ತಮ ತಮಿಳು ಚಿತ್ರ - ಪೊನ್ನಿಯಿನ್ ಸೆಲ್ವನ್ - ಭಾಗ 1

ಅತ್ಯುತ್ತಮ ಪಂಜಾಬಿ ಚಿತ್ರ - ಬಾಘಿ ದಿ ಧೀ

ಅತ್ಯುತ್ತಮ ಒಡಿಯಾ ಚಿತ್ರ - ದಮನ್

ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೆಲಕ್ಕಾ CC.225/2009

ಅತ್ಯುತ್ತಮ ಮರಾಠಿ ಚಿತ್ರ - ವಾಲ್ವಿ

ಅತ್ಯುತ್ತಮ ಕನ್ನಡ ಚಿತ್ರ - ಕೆಜಿಎಫ್: ಚಾಪ್ಟರ್‌ 2

ಅತ್ಯುತ್ತಮ ಹಿಂದಿ ಚಿತ್ರ - ಗುಲ್ಮೊಹರ್

ಅತ್ಯುತ್ತಮ ತಿವಾ ಚಿತ್ರ - ಸಿಕೈಸಲ್

ಅತ್ಯುತ್ತಮ ಬೆಂಗಾಲಿ ಚಿತ್ರ - ಕಬೇರಿ ಅಂತರ್ಧನ್

ಅತ್ಯುತ್ತಮ ಅಸ್ಸಾಮಿ ಚಿತ್ರ - ಎಮುತಿ ಪುತಿ

ಅತ್ಯುತ್ತಮ ಸಾಹಸ ನಿರ್ದೇಶನ - ಕೆಜಿಎಫ್: ಚಾಪ್ಟರ್‌ 2

ಅತ್ಯುತ್ತಮ ನೃತ್ಯ ಸಂಯೋಜನೆ - ತಿರುಚಿತ್ರಬಲಂ

ಅತ್ಯುತ್ತಮ ಸಾಹಿತ್ಯ - ಫೌಜಾ

ಅತ್ಯುತ್ತಮ ಸಂಗೀತ ನಿರ್ದೇಶಕ - ಪ್ರೀತಮ್ (ಹಾಡುಗಳು), ಎ.ಆರ್. ರೆಹಮಾನ್ (ಹಿನ್ನೆಲೆ ಸಂಗೀತ)

ಅತ್ಯುತ್ತಮ ಮೇಕಪ್ - ಅಪರಾಜಿತೋ

ಅತ್ಯುತ್ತಮ ವೇಷಭೂಷಣ - ಕಛ್ ಎಕ್ಸ್‌ಪ್ರೆಸ್

ಅತ್ಯುತ್ತಮ ನಿರ್ಮಾಣ ವಿನ್ಯಾಸ - ಅಪರಾಜಿತೋ

ಅತ್ಯುತ್ತಮ ಸಂಕಲನ - ಆ‌ಟ್ಟಂ

ಅತ್ಯುತ್ತಮ ಧ್ವನಿ ವಿನ್ಯಾಸ - ಪೊನ್ನಿಯಿನ್ ಸೆಲ್ವನ್ - ಭಾಗ 1

ಅತ್ಯುತ್ತಮ ಚಿತ್ರಕಥೆ - ಆಟ್ಟಂ

ಅತ್ಯುತ್ತಮ ಸಂಭಾಷಣೆ - ಗುಲ್ಮೊಹರ್

ಅತ್ಯುತ್ತಮ ಛಾಯಾಗ್ರಹಣ - ಪೊನ್ನಿಯಿನ್ ಸೆಲ್ವನ್ - ಭಾಗ 1

ಅತ್ಯುತ್ತಮ ಮಹಿಳಾ ಹಿನ್ನೆಲೆ – ಸೌದಿ ವೆಲಕ್ಕಾ CC.225/2009, ಬಾಂಬೆ ಜಯಶ್ರೀ

ಅತ್ಯುತ್ತಮ ಮಹಿಳಾ ಹಿನ್ನೆಲೆ - ಬ್ರಹ್ಮಾಸ್ತ್ರ, ಅರಿಜಿತ್ ಸಿಂಗ್

ಅತ್ಯುತ್ತಮ ಬಾಲ ಕಲಾವಿದ - ಮಲ್ಲಿಕಪ್ಪುರಂನಲ್ಲಿ ಶ್ರೀಪತ್

ಎವಿಜಿಸಿಯಲ್ಲಿ ಅತ್ಯುತ್ತಮ ಚಿತ್ರ - ಬ್ರಹ್ಮಾಸ್ತ್ರ

ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ - ಕಛ್‌ ಎಕ್ಸ್‌ಪ್ರೆಸ್

ಅತ್ಯುತ್ತಮ ವಿಮರ್ಶಕ - ದೀಪಕ್ ದುವಾ

ಅತ್ಯುತ್ತಮ ಸಿನಿಮಾ ಪುಸ್ತಕ - ಕಿಶೋರ್ ಕುಮಾರ್: ದಿ ಅಲ್ಟಿಮೇಟ್ ಬಯೋಗ್ರಫಿ

ಹಿನ್ನೆಲೆ: 1954 ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಚಲನಚಿತ್ರೋತ್ಸವಗಳ ನಿರ್ದೇಶನಾಲಯ ಮೇಲ್ವಿಚಾರಣೆ ಮಾಡುತ್ತದೆ. ಪ್ರಶಸ್ತಿಗಳ ಇತಿಹಾಸದಲ್ಲಿ 2002 ರಲ್ಲಿ ಎಂಟು ಪುರಸ್ಕಾರ ಪಡೆದ ಅಶುತೋಷ್ ಗೋವಾರಿಕರ್ ಅವರ 'ಲಗಾನ್' ಹೆಚ್ಚು ಪ್ರಶಸ್ತಿ ಪಡೆದ ಚಲನಚಿತ್ರವಾಗಿದೆ. ಜೀವಮಾನದ ಸಾಧನೆಗಾಗಿ ಉದ್ಯಮದ ದಂತಕಥೆಗಳಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡುತ್ತದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ನಟಿ ವಹೀದಾ ರೆಹಮಾನ್ ಅವರಿಗೆ ನೀಡಲಾಗಿತ್ತು.

Tags:    

Similar News