ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಕನ್ನಡದ ʼಬೇರ ಹುಡುಕಿದ ಮರ' ' ಆಯ್ಕೆ
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 19 ನೇ ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (JAFF) ಲೈಟ್ ಆಫ್ ಏಷ್ಯಾ ಸ್ಪರ್ಧಾ ವಿಭಾಗಕ್ಕೆ ಕನ್ನಡದ ಕಿರುಚಿತ್ರ 'ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಫಿಲ್ಮ್ ಫೆಸ್ಟಿವಲ್' ಕಿರುಚಿತ್ರ ಆಯ್ಕೆಯಾಗಿದೆ.;
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 19 ನೇ ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (JAFF) ಲೈಟ್ ಆಫ್ ಏಷ್ಯಾ ಸ್ಪರ್ಧಾ ವಿಭಾಗಕ್ಕೆ ಕನ್ನಡದ ಕಿರುಚಿತ್ರ 'ಬೇರ ಹುಡುಕಿದ ಮರ' 'ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಫಿಲ್ಮ್ ಫೆಸ್ಟಿವಲ್' ಕಿರುಚಿತ್ರ ಆಯ್ಕೆಯಾಗಿದೆ.
ಈ ಕಿರುಚಿತ್ರವನ್ನು ಮೈಸೂರು ಮೂಲದ ನಿರ್ದೇಶಕ ನಾಗಭೂಷಣೆ ದೇಶಪಾಂಡೆಯವರು ನಿರ್ದೇಶನ ಮಾಡಿದ್ದಾರೆ. ಇದು ನಾಗಭೂಷಣೆ ದೇಶಪಾಂಡೆಯವರ ಚೊಚ್ಚಲ ಕಿರುಚಿತ್ರವಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಕಿರುಚಿತ್ರವೊಂದು ಈ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿದೆ.
ಈ ಚಲನಚಿತ್ರೋತ್ಸವ ನವೆಂಬರ್ 30 ರಿಂದ ಡಿಸೆಂಬರ್ 7 ರವರೆಗೆ ಈ ಚಲನಚಿತ್ರೋತ್ಸವ ನಡೆಯಲಿದೆ.
ಸಾಮಾಜಿಕ ಸಮಸ್ಯೆಯನ್ನು ಎತ್ತಿ ತೋರಿಸುವ ಈ ಪ್ರಾದೇಶಿಕ ಕಥೆಯನ್ನು ಹೊಂದಿರುವ ಈ ಸಿನಿಮಾ 13 ವರ್ಷದ ರೋಹಿತ್, ತನ್ನ ಮುರಿದ ಕುಟುಂಬದ ಸವಾಲುಗಳನ್ನು ಪರಿಶೋಧಿಸುತ್ತಾನೆ. ವಿಷಕಾರಿ ಪುರುಷತ್ವ, ಮಹಿಳೆಯರಿಗೆ ಕಡಿಮೆ ಸ್ಥಾನಮಾನ ಕುರಿತು ವಿವರಿಸುತ್ತದೆ. ಮತ್ತು ಆ ಸಂಬಂಧ ಬಗ್ಗೆ ಮಗುವಿನ ತಿಳುವಳಿಕೆಯನ್ನು ಜಾಗೃತಗೊಳಿಸುತ್ತದೆ.
'ಬೇರ ಹುಡುಕಿದ ಮರ' ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ 2024 ರಲ್ಲಿ ಪ್ರದರ್ಶನಗೊಂಡು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದಿದೆ. ನಂತರ ದೆಹಲಿಯ ಯೆಲ್ಲೊಸ್ಟೋನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಮೊದಲ ಬಾರಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಕಿರುಚಿತ್ರ ಪ್ರದರ್ಶನಗೊಳ್ಳತ್ತಿದೆ.