ʼಕೊರಗಜ್ಜʼ ನ ಪವಾಡದಿಂದ ನಿರ್ದೇಶಕ ಅಪಾಯದಿಂದ ಪಾರು: ಶೃತಿ

Update: 2024-04-17 14:12 GMT
Click the Play button to listen to article

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಮತ್ತು ಕರಾವಳಿಯ ಆರಾಧ್ಯ ದೈವ ಕೊರಗಜ್ಜನ ಕಥೆಯನ್ನು ಒಳಗೊಂಡ ʼಕೊರಗಜ್ಜʼ ಸಿನಿಮಾದ ಮರು ಚಿತ್ರೀಕರಣದ ವೇಳೆ  ಚಿತ್ರ ನಿರ್ದೇಶಕರು ಅಪಾಯದಿಂದ ಪಾರಾಗಿದ್ದು, ಅದಕ್ಕೆ  ಅಗೋಚರ ಶಕ್ತಿಯೊಂದು ಕಾರಣವಾಗಿದೆ ಎಂದು ಚಿತ್ರ ತಂಡ ಅಂದುಕೊಂಡಿದೆ.

ಚಿತ್ರೀಕರಣ ವೇಳೆ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು  ದೂರಕ್ಕೆ ಎಸೆಯಲ್ಪಟ್ಟದ್ದನ್ನು ಕಂಡಿರುವುದನ್ನು ಖಚಿತಪಡಿಸಿರುವ ಹಾಗೂ ಕೊರಗಜ್ಜ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ನಟಿ ಶ್ರತಿ, ʼನಿರ್ದೇಶಕರು ದೊಡ್ಡ ಮಟ್ಟದ ಗಾಯಗಳಿಂದ ಪಾರಾಗಿರುವುದನ್ನು ಕೊರಗಜ್ಹ ದೈವವೇ ನಿರ್ದೇಶಕರನ್ನು ಕಾಪಾಡಿದೆʼ ಎಂದು ಹೇಳಿದ್ದಾರೆ.

ದೈವ ನರ್ತನದ ಪ್ರಮುಖ ದ್ರಶ್ಯವೊಂದನ್ನು ನಿನ್ನೆ ರಾತ್ರಿ ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯ ಕಗ್ಗಲಿ ಹಳ್ಳಿಯಲ್ಲಿ ಹಾಕಿದ್ದ ಆದ್ದೂರಿ ಸೆಟ್ ನಲ್ಲಿ ಚಿತ್ರೀಕರಿಲಾಗುತ್ತಿತ್ತು. ಈ ವೇಳೆ ಚಿತ್ರದ ಸನ್ನಿವೇಶವನ್ನು ನಟನಿಗೆ ನಿರ್ದೇಶಕ ಸುಧೀರ್ ಅತ್ತಾವರ್ ವಿವರಿಸುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕರನ್ನು ಒಂದೇ ಸಮನೆ ಅಗೋಚರ ಶಕ್ತಿ ಬಲವಾಗಿ ದೂಡಿದಂತಾಗಿ, ತನ್ನನ್ನು ನಿಭಾಯಿಸಿಕೊಳ್ಳದೆ ಸುಮಾರು ದೂರಕ್ಕೆಸೆಯಲ್ಪಟ್ಟ ಘಟನೆ ಚಿತ್ರ ತಂಡವನ್ನು ಬೆಚ್ಚಿಬೀಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ದೈವ ನರ್ತನದ ಪ್ರಮುಖ ದ್ರಶ್ಯವೊಂದನ್ನು ನಿನ್ನೆ ಮಧ್ಯರಾತ್ರಿಯ ವೇಳೆ ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ರವರ ಮೈ ನವಿರೇಳಿಸುವ ಸಾಹಸ ಸನ್ನಿವೇಶವೊಂದನ್ನು ನಿರ್ದೇಶಕ ಸುಧೀರ್ ಅತ್ತಾವರ್ ಮೂರನೇ ಬಾರಿ ಮರು ಚಿತ್ರೀಕರಿಸುತ್ತಿದ್ದರು.

ಈ ವೇಳೆ ಖ್ಯಾತ ಕಲಾವಿದೆ ಶ್ರುತಿ ಯೊಂದಿಗೆ ನೂರಾರು ಸಹ ಕಲಾವಿದರು ಭಾಗವಹಿಸಿದ್ದ ಸನ್ನಿವೇಶವನ್ನು ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯ ಕಗ್ಗಲಿ ಹಳ್ಳಿಯಲ್ಲಿ ಹಾಕಿದ್ದ ಆದ್ದೂರಿ ಸೆಟ್ ನಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ಡಿ ಒ ಪಿ ಮನೋಜ್ ಪಿಳ್ಳೈ ಚಿತ್ರೀಕರಿಸುತ್ತಿದ್ದರು.

ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರು "ಕೊರಗಜ್ಜ" ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜತೆಗೆ ತೊಂದರೆ ಗಳನ್ನು ಎದುರಿಸುತ್ತಾ ಬಂದಿದೆ. ಈ ಸಿನಿಮಾದ ಕೊನೆಹಂತದ ಪೋಸ್ಟ್ ಪ್ರೊಡಕ್ಷನ್ ಕೊಚ್ಚಿ ಮತ್ತು ಮುಂಬೈ ನಲ್ಲಿ ನಡೆಯುತ್ತಿದೆ.

ಕೊರಗಜ್ಜನನನ್ನ ತನಿಯಾ ಅಂತಲೇ ಕರೆಯುತ್ತಾರೆ. ಈ ಕೊರಗಜ್ಜನ ತಾಯಿ ಹೆಸರು ಬೈರಾಕಿ ಅಂತಲೇ ಇದೆ. ಈ ಪಾತ್ರವನ್ನ ನಟಿ ಶೃತಿ ಅವರು ನಿರ್ವಹಿಸುತ್ತಿದ್ದಾರೆ. ಪಂಜುರ್ಲಿ ತಾಯಿ ಪಾತ್ರದಲ್ಲಿ ನಟಿ ಭವ್ಯ ಕೂಡ ಅಭಿನಯಿಸಿದ್ದಾರೆ. ಸುಮಾರು ಎಂಟು ನೂರು ವರ್ಷಗಳ ಹಿಂದಿನ ಕಥೆಯುಳ್ಳ ಈ ಸಿನಿಮಾದಲ್ಲಿ ಹಾಲಿವುಡ್- ಬಾಲಿವುಡ್ ಕಲಾವಿದರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ.

Tags:    

Similar News