ವಸಿಷ್ಠ ಸಿಂಹ ನಟನೆಯ ʻಲವ್‌ಲೀʼ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಕಾವ್ಯ ಶೆಟ್ಟಿ, ನಂದು

ಕಚ್ಚಾ ಭಾವನೆಗಳಿಂದ ತುಂಬಿದ ರೋಮ್ಯಾಂಟಿಕ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದ್ದು, ನೈಜ-ಜೀವನದ ಘಟನೆಗಳಿಂದ ಪ್ರೇರಿತವಾಗಿದೆ.;

Update: 2024-05-27 09:24 GMT
'ಲವ್‌ಲೀ' ಸಿನಿಮಾದ ಹಾಡು

ವಸಿಷ್ಠ ಸಿಂಹ ನಟನೆಯ 'ಲವ್‌ಲೀ' ಚಿತ್ರತಂಡ ನಟಿ ಕಾವ್ಯಾ ಶೆಟ್ಟಿ ಮತ್ತು ಬಿಗ್ ಬಾಸ್ ಮತ್ತು ರೋಡೀಸ್ ಖ್ಯಾತಿಯ ನಂದು ಅವರನ್ನೊಳಗೊಂಡ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಿದೆ. 'ಲವ್‌ಲೀ' ಚಿತ್ರದ ಮೊದಲ 'ಚಿಕ್ಕಿಮಿಕ್ಕಾ' ಶೀರ್ಷಿಕೆಯ ಹಾಡು ಇದೀಗ ಕೇಳುಗರ ಗಮನ ಸೆಳೆದಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ವಸಿಷ್ಠ ಸಿಂಹ ಅವರೇ ಧ್ವನಿ ನೀಡಿದ್ದ ಚಿತ್ರದ ಮೊದಲ ಹಾಡಿಗೂ ಮೆಚ್ಚುಗೆ ವ್ಯಕ್ತವಾಗಿತ್ತು.

ಕಾವ್ಯಾ ಮತ್ತು ನಂದು ಅವರನ್ನು ಒಳಗೊಂಡ ಹಾಡಿನ ಕೆಲವು ಸ್ಟಿಲ್‌ಗಳನ್ನು ಹಂಚಿಕೊಂಡ ನಿರ್ದೇಶಕ ಚೇತನ್ ಕೇಶವ್, 'ಈ ನಿರ್ದಿಷ್ಟ ಹಾಡನ್ನು ವಿಶೇಷ ಹಾಡು ಎಂದು ಪರಿಗಣಿಸಲಾಗಿದ್ದರೂ, ಕಥೆಯನ್ನು ಮುಂದಕ್ಕೆ ಸಾಗಿಸಲು ಸಹಾಯ ಮಾಡುವ ಸನ್ನಿವೇಶದ ಟ್ರ್ಯಾಕ್ ಆಗಿದೆ' ಎನ್ನುತ್ತಾರೆ. ನಿರ್ದೇಶಕರು, ಚಿತ್ರಕ್ಕಾಗಿ ಆಕ್ಷನ್ ಸೀಕ್ವೆನ್ಸ್‌ಗಳನ್ನು ಸಹ ನಿರ್ದೇಶಿಸಿದ್ದಾರೆ.

ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ಲವ್ ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಸಿಷ್ಠ ಸಿಂಹ ಜೊತೆಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸಿದ್ದಾರೆ. ಇದರೊಂದಿಗೆ ವಂಶಿಕಾ, ಸಾಧು ಕೋಕಿಲ, ದತ್ತಣ್ಣ, ಮಾಳವಿಕಾ, ಶೋಭರಾಜ್ ಮತ್ತು ಅಚ್ಯುತ್ ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಶ್ವಿನ್ ಕೆನಡಿ ಅವರ ಛಾಯಾಗ್ರಹಣ ಮತ್ತು ಹರೀಶ್ ಕೊಮ್ಮೆ ಅವರ ಸಂಕಲನವಿದೆ.

ಕಚ್ಚಾ ಭಾವನೆಗಳಿಂದ ತುಂಬಿದ ರೋಮ್ಯಾಂಟಿಕ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದ್ದು, ನೈಜ-ಜೀವನದ ಘಟನೆಗಳಿಂದ ಪ್ರೇರಿತವಾಗಿದೆ.

ನಟ ವಸಿಷ್ಠ ಅವರ ಪ್ರಕಾರ, ಸಿನಿಮಾ ನಗುವಿನಿಂದ ಕಣ್ಣೀರಿನವರೆಗೆ ವ್ಯಾಪಕವಾದ ಭಾವನೆಗಳನ್ನು ಉಂಟುಮಾಡುತ್ತದೆ. ಪ್ರೇಕ್ಷಕರಿಗೆ ಪೂರ್ಣವಾದ ಅನುಭವವನ್ನು ನೀಡುತ್ತದೆ. ಜೂನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದು, ಚಿತ್ರತಂಡ ಇನ್ನೂ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿಲ್ಲ.

Tags:    

Similar News