'ಉಡಾನ್' ಖ್ಯಾತಿಯ ಕವಿತಾ ಚೌಧರಿ ನಿಧನ

ಟಿವಿಯಲ್ಲಿ ಪ್ರಸಾರವಾದ ಮಹಿಳಾ ಸಬಲೀಕರಣದ ಪ್ರಗತಿಪರ ಕಾರ್ಯಕ್ರಮ 'ಉಡಾನ್' ನಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದ ಮೂಲಕ ಚೌಧರಿ ಹೆಸರುವಾಸಿಯಾಗಿದ್ದರು.;

Update: 2024-02-16 11:40 GMT
ಉಡಾನ್' ನಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರಕ್ಕಾಗಿ ಚೌಧರಿ ಹೆಚ್ಚು ಹೆಸರುವಾಸಿಯಾಗಿದ್ದರು.
Click the Play button to listen to article

ಅಮೃತಸರ: ಜನಪ್ರಿಯ ʻಉಡಾನ್ʼ ಧಾರಾವಾಹಿ ಖ್ಯಾತಿಯ ನಟಿ ಕವಿತಾ ಚೌಧರಿ (67) ಹೃದಯಘಾತದಿಂದ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. 1980 ರ ದಶಕದ ಉತ್ತರಾರ್ಧದಲ್ಲಿ ಸರ್ಫ್ ಡಿಟರ್ಜೆಂಟ್ ಜಾಹೀರಾತುಗಳಲ್ಲಿ ಗೃಹಿಣಿ ಲಲಿತಾಜಿ ಎಂದು ಜನಪ್ರಿಯವಾಗಿದ್ದ ಅವರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಚೌಧರಿ ಅವರ ಸೋದರಳಿಯ ಅಜಯ್ ಸಯಾಲ್ ತಿಳಿಸಿದ್ದಾರೆ.

1989 ಮತ್ತು 1991ರ ನಡುವೆ ದೂರದರ್ಶನದಲ್ಲಿ ಪ್ರಸಾರವಾದ ಮಹಿಳಾ ಸಬಲೀಕರಣದ ಪ್ರಗತಿಪರ ಕಾರ್ಯಕ್ರಮ  ʼಉಡಾನ್ʼ ನಲ್ಲಿ ಐಪಿಎಸ್‌ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರ ನಿರ್ವಹಿಸಿದ್ದರು.

Tags:    

Similar News