ಯುಗಾದಿ ಹಬ್ಬಕ್ಕೆ ‘ಕರಾವಳಿ’ ಹೊಸ ಪೋಸ್ಟರ್​: ಯಕ್ಷ ಲುಕ್‌ನಲ್ಲಿ ಪ್ರಜ್ವಲ್ ದೇವರಾಜ್

ಯುಗಾದಿ ಹಬ್ಬದ ಪ್ರಯುಕ್ತ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರ ಕರಾವಳಿ’ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆಗೊಂಡಿದೆ.;

Update: 2024-04-10 11:30 GMT
ಯಕ್ಷಗಾನ ಲುಕ್‌ನಲ್ಲಿ ಪ್ರಜ್ವಲ್‌ ದೇವರಾಜ್‌

ಯುಗಾದಿ ಹಬ್ಬದ ಪ್ರಯುಕ್ತ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರ ಕರಾವಳಿ’ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆಗೊಂಡಿದ್ದು, ನೂತನ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ.

ಕರಾವಳಿ’ ಸಿನಿಮಾ ಚಿತ್ರೀಕರಣ ಪ್ರಗತಿಯಲ್ಲಿದ್ದು, ಇದೇ ಮೊದಲ ಬಾರಿ ಪ್ರಜ್ವಲ್ ದೇವರಾಜ್ ಅವರು ಯಕ್ಷಗಾನದ ವೇಷ ಧರಿಸಿದ್ದಾರೆ. ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಿರುಸಿನ ಚಿತ್ರೀಕರಣದ ನಡುವೆ ಪ್ರಜ್ವಲ್ ದೇವರಾಜ್ ಅವರ ಹೊಸ ಲುಕ್ ಅನಾವರಣ ಮಾಡುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಲಾಗಿದೆ. ಮಂಗಳೂರಿನ ಸುತ್ತಮುತ್ತ ಈ ಚಿತ್ರದ ಶೂಟಿಂಗ್​ ನಡೆಯುತ್ತಿದೆ.

‘ಕರಾವಳಿ’ ಚಿತ್ರತಂಡದಿಂದ ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್​ಗಳು ಕೂಡ ಇದೇ ರೀತಿ ಕೌತುಕ ಮೂಡಿಸಿದ್ದವು. ಟೀಸರ್ ಸಹ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್​ ಅವರು ಡಿಫರೆಂಟ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಬಳದ ಜೊತೆಯಲ್ಲಿ ಯಕ್ಷಗಾನ ಸಹ ‘ಕರಾವಳಿ’ ಸಿನಿಮಾದ ಹೈಲೈಟ್​ಗಳಲ್ಲಿ ಒಂದಾಗಿರಲಿದೆ ಎಂಬುದು ಈ ಪೋಸ್ಟರ್​ ನೋಡಿದರೆ ತಿಳಿಯುತ್ತದೆ.

Full View

ಗ್ರಾಮೀಣ ಹಿನ್ನೆಲೆಯಲ್ಲಿ ‘ಕರಾವಳಿ’ ಸಿನಿಮಾದ ಕಥೆ ಸಾಗಲಿದೆ. ಅಭಿಮನ್ಯು ಸದಾನಂದ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ಮಿತ್ರ, ಜಿ.ಜಿ. ನಿರಂಜನ್, ಟಿವಿ ಶ್ರೀಧರ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Tags:    

Similar News