ಹೊಸ ಸಿನಿಮಾ ಘೋಷಿಸಿದ ಕರಣ್ ಜೋಹರ್...

ಕರಣ್‌ ಜೋಹರ್ ನಿರ್ಮಿಸಿದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ʻಅನಿಮಲ್‌ʼ ಸಿನಿಮಾ ಖ್ಯಾತಿಯ ತೃಪ್ತಿ ಡಿಮ್ರಿ ನಟಿಸಲಿದ್ದಾರೆ.;

Update: 2024-05-27 13:21 GMT
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
Click the Play button to listen to article

ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕರಣ್ ಜೋಹರ್ ತಮ್ಮ ಹೊಸ ಚಿತ್ರಕ್ಕೆ ‘ಧಡಕ್ 2’ ಎಂದು ಹೆಸರಿಟ್ಟಿದ್ದಾರೆ. ಕರಣ್‌ ಜೋಹರ್ ನಿರ್ಮಿಸಿದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ʻಅನಿಮಲ್‌ʼ ಸಿನಿಮಾ ಖ್ಯಾತಿಯ ತೃಪ್ತಿ ಡಿಮ್ರಿ ನಟಿಸಲಿದ್ದಾರೆ. ಶಾಜಿಯಾ ಇಕ್ಬಾಲ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ʻಗಲ್ಲಿ ಬಾಯ್’ ಖ್ಯಾತಿಯ ಸಿದ್ಧಾಂತ್​ ಚತುರ್ವೇದಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ‘ಧಡಕ್​ 2’ ಸಿನಿಮಾದಲ್ಲಿ ಜಾತಿಯ ಕುರಿತಾದ ಕಹಾನಿ ಇರಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.ಕರಣ್​ ಜೋಹರ್​ ಅವರ ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ ‘ಧಡಕ್​ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಕರಣ್ ಜೋಹರ್ “ಒಂದು ಕಾಲದಲ್ಲಿ ಒಬ್ಬನಿದ್ದ ರಾಜ, ಒಬ್ಬಳಿದ್ದಳು ರಾಣಿ. ಆದರೆ ಅವರಿಬ್ಬರದ್ದೂ ಬೇರೆ ಜಾತಿ. ಕಥೆ ಮುಗಿಯಿತುʼʼಎಂದು ವಿಡಿಯೊ ಜತೆ ಕ್ಯಾಪ್ಞನ್‌ ಶೇರ್‌ ಮಾಡಿಕೊಂಡಿದ್ದಾರೆ. ಧಡಕ್ 2 ಚಿತ್ರಮಂದಿರಗಳಲ್ಲಿ 2024ರ ನವೆಂಬರ್‌ 22ರಂದು ಬಿಡುಗಡೆಯಾಗುತ್ತಿದೆ.

Full View

ಜೀ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್ ಮತ್ತು ಕ್ಲೌಡ್ 9 ಪಿಕ್ಚರ್ಸ್ ನಿರ್ಮಿಸಿರುವ ‘ಧಡಕ್ 2’ ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2018ರಲ್ಲಿ ಕರಣ್​ ಜೋಹರ್​ ನಿರ್ಮಾಣ ಮಾಡಿದ್ದ ‘ಧಡಕ್​’ ಸಿನಿಮಾದಲ್ಲಿ ಕೂಡ ಜಾತಿಗೆ ಸಂಬಂಧಿಸಿದ ಕಥೆ ಇತ್ತು. ಆ ಸಿನಿಮಾ ಮೂಲಕ ನಟಿ ಜಾನ್ವಿ ಕಪೂರ್​ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದರು. ಅದು ಮರಾಠಿಯ ‘ಸೈರಾಟ್​’ ಸಿನಿಮಾದ ರಿಮೇಕ್​ ಆಗಿತ್ತು.

Tags:    

Similar News