‘Emergency’ trouble| ಕಂಗನಾ ರನೌತ್ ಗೆ ನೋಟಿಸ್

Update: 2024-09-18 09:34 GMT

ʻಎಮರ್ಜೆನ್ಸಿʼ ಚಿತ್ರದಲ್ಲಿ ಸಿಖ್ ಸಮುದಾಯದ ಘನತೆಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಚಂಡೀಗಢದ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ರವೀಂದರ್ ಸಿಂಗ್ ಬಸ್ಸಿ ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಕಂಗನಾ ರನೌತ್‌ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಬಿಡುಗಡೆಗೆ ಕಾಯುತ್ತಿರುವ ʼಎಮರ್ಜೆನ್ಸಿʼ, ನಟಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ʻಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರ ವಹಿಸಿರುವುದಲ್ಲದೆ, ಸಹ ನಿರ್ಮಾಣ ಮಾಡಿದ್ದಾರೆ. ʼಚಲನಚಿತ್ರವು ಸಿಖ್ಖರನ್ನು ತಪ್ಪಾಗಿ ಚಿತ್ರಿಸಿರುವುದಲ್ಲದೆ, ಸಮುದಾಯದ ವಿರುದ್ಧ ಹಲವಾರು ಸುಳ್ಳು ಆರೋಪ ಮಾಡಿದೆ,ʼ ಎಂದು ಆರೋಪಿಸಿದ್ದಾರೆ. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ.

ಶಿರೋಮಣಿ ಅಕಾಲಿದಳ ಸೇರಿದಂತೆ ಹಲವಾರು ಸಿಖ್ ಗುಂಪುಗಳು ಚಲನಚಿತ್ರವು ಸಮುದಾಯವನ್ನು ತಪ್ಪಾಗಿ ಬಿಂಬಿಸುತ್ತದೆ ಮತ್ತು ಐತಿಹಾಸಿಕ ಸಂಗತಿಗಳನ್ನು ತಿರುಚಿದೆ ಎಂದು ಆರೋಪಿಸಿವೆ.

ಮುಂಬೈ ಆಸ್ತಿ ಮಾರಾಟ: ಕಳೆದ ವರ್ಷ ತೆರೆಗೆ ಬರಬೇಕಿದ್ದ ಚಿತ್ರದ ಬಿಡುಗಡೆ ವಿಳಂಬವಾಗಿದೆ. ಚಿತ್ರಕ್ಕಾಗಿ ಮುಂಬೈನ ಪಾಲಿ ಹಿಲ್ಸ್‌ ನ ಬಂಗಲೆಯನ್ನು 32 ಕೋಟಿ ರೂ.ಗೆ ಮಾರಬೇಕಾಯಿತು ಎಂದು ಕಂಗನಾ ಹೇಳಿದ್ದಾರೆ. 

ಸೆನ್ಸಾರ್ ಅನುಮತಿ ಸಿಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರದ ಸಹ ನಿರ್ಮಾಪಕ ಝೀ ಎಂಟ‌ರ್ಟೇನ್ಮೆಂಟ್ ಎಂಟರ್‌ಪ್ರೈಸಸ್, ಈ ತಿಂಗಳು ಬಾಂಬೆ ಹೈಕೋರ್ಟ್‌ಗೆ ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿತ್ತು. ಆದರೆ, ನ್ಯಾಯಾಲಯವು ಯಾವುದೇ ತುರ್ತು ಪರಿಹಾರ ನೀಡಲು ನಿರಾಕರಿಸಿದೆ. 

ಎಮರ್ಜೆನ್ಸಿಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಡೆ, ಮಿಲಿಂದ್ ಸೋಮನ್ ಮತ್ತು ವಿಶಾಕ್ ನಾಯರ್ ಪಾತ್ರ ವಹಿಸಿದ್ದಾರೆ.

Tags:    

Similar News