IIFA Awards 2024: ಚಂದನವನಕ್ಕೆ ಬಂದ ಪ್ರಶಸ್ತಿಗಳೆಷ್ಟು?
ದುಬೈನಲ್ಲಿ ಐಫಾ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. 3 ದಿನಗಳ ಕಾಲ ಅಬುದಾಬಿಯಲ್ಲಿ IIFA ಅವಾರ್ಡ್ಸ್ ಸಮಾರಂಭ ನಡೆಯುತ್ತಿದ್ದು, ಮೊದಲ ದಿನವೇ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.;
ದುಬೈನಲ್ಲಿ ಐಫಾ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. 3 ದಿನಗಳ ಕಾಲ ಅಬುದಾಬಿಯಲ್ಲಿ IIFA ಅವಾರ್ಡ್ಸ್ ಸಮಾರಂಭ ನಡೆಯುತ್ತಿದ್ದು, ಮೊದಲ ದಿನವೇ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
'ಕಾಟೇರ' ಚಿತ್ರದ ನಿರ್ದೇಶನಕ್ಕಾಗಿ ತರುಣ್ ಸುಧೀರ್ ಐಫಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಪತ್ನಿ ಸೋನಲ್ ಜೊತೆ ತರುಣ್ ಹೆಜ್ಜೆ ಹಾಕಿದ್ದಾರೆ. ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು. ದರ್ಶನ್ ಜೊತೆ ಆರಾಧನಾ ನಾಯಕಿಯಾಗಿ ನಟಿಸಿದ್ದರು. ಬೆಸ್ಟ್ ಡೆಬ್ಯೂ ಪ್ರಶಸ್ತಿ ಆರಾಧನಾಗೆ ಸಿಕ್ಕಿದೆ. 'ಕಾಟೇರ' ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ವಿಲನ್ ಆಗಿ ಅಬ್ಬರಿಸಿದ್ದರು. ಅತ್ಯುತ್ತಮ ಖಳನಟ ಐಫಾ ಪ್ರಶಸ್ತಿ ಅವರಿಗೆ ಧಕ್ಕಿದೆ. ಸುಮಲತಾ ಅಂಬರೀಶ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ವಿ. ಹರಿಕೃಷ್ಣ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಇದೇ ಚಿತ್ರಕ್ಕಾಗಿ ಶ್ರುತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.
ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ವಿಭಾಗಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ- A' ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪ್ರಶಸ್ತಿ ಪಡೆದಿದ್ದಾರೆ. ಹೇಮಂತ್ ರಾವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಎರಡು ಭಾಗಗಳಾಗಿ ಈ ಸಿನಿಮಾ ತೆರೆಗೆ ಬಂದಿತ್ತು.
'ಸಪ್ತಸಾಗರದಾಚೆ ಎಲ್ಲೋ- A' ಚಿತ್ರದ ನಟನೆಗಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಗೀತ ಸಾಹಿತ್ಯಕ್ಕಾಗಿ ಧನಂಜಯ ರಾಜನ್ ಪ್ರಶಸ್ತಿ ಪಡೆದುಕೊಂಡಿದ್ದರೆ, ಇದೇ ಚಿತ್ರದ 'ಕಡಲನು' ಹಾಡು ಹಾಡಿದ ಶ್ರೀಲಕ್ಷ್ಮಿ ಬೆಲ್ಮಣು ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ.
ರಿಷಬ್ ಶೆಟ್ಟಿ ಅವರಿಗೆ ಐಫಾ (ಐಐಎಫ್ಎ) ಕಾರ್ಯಕ್ರಮದಲ್ಲಿ ‘ಔಟ್ಸ್ಟ್ಯಾಂಡಿಂಗ್ ಎಕ್ಸಲೆನ್ಸ್ ಇನ್ ಕನ್ನಡ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ರಿಷಬ್ ಶೆಟ್ಟಿಗೆ ಈ ಅವಾರ್ಡ್ ನೀಡಿದ್ದಾರೆ. ಅವಾರ್ಡ್ ಪಡೆದ ಬಳಿಕ ಪತ್ನಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಶೆಟ್ಟಿ ಅವರು ಪೋಸ್ ಕೊಟ್ಟಿದ್ದಾರೆ.
ಹಲವು ವರ್ಷಗಳಿಂದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್(IIFA ) ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ. ಬಾಲಿವುಡ್ ಸೇರಿ ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾಗಳಿಗೆ ಆಯಾ ವರ್ಷ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. 2023ರ ವರ್ಷದಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳನ್ನು IIFA Awards 2024ಗೆ ಆಯ್ಕೆ ಮಾಡಿಕೊಳ್ಳಲಾಗಿದೆ.