ಟೊರೊಂಟೋದ MARZ ಸ್ಟುಡಿಯೋದಲ್ಲಿ ‘45’ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ
ಹಾಲಿವುಡ್‍ನ ಜನಪ್ರಿಯ VFX ಸಂಸ್ಥೆಯಾದ ಟೊರಾಂಟೋ ಮೂಲದ MARZ, ಕನ್ನಡದ ‘45’ ಚಿತ್ರದ ಗ್ರಾಫಿಕ್ಸ್ ಕೆಲಸದ ನೇತೃತ್ವ ವಹಿಸುತ್ತದೆ. ಇದು ಈ ಸಂಸ್ಥೆ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ ಮಾಡುತ್ತಿರುವ ಭಾರತದ ಮೊದಲ ಚಿತ್ರ. ಅದರಲ್ಲೂ ಕನ್ನಡದ ಚಿತ್ರವೊಂದರಿಂದ ಈ ಪಯಣ ಶುರುವಾಗಿದೆ ಎನ್ನುವುದು ವಿಶೇಷ.;
‘ಹೆಲ್‍ಬಾಯ್’, ‘ಟ್ರಾಯ್’, ‘ದಿ ಕಾಂಟ್ರಾಕ್ಟ್’, ‘RRR’ ಮುಂತಾದ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದ ಹಾಲಿವುಡ್‍ನ ಜನಪ್ರಿಯ ಸಾಹಸ ನಿರ್ದೇಶಕ ಟೊಡೋರ್ ಲಾಜರೋವ್, ರಿಷಭ್ ನಟನೆ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರಕ್ಕೆ ಸಾಹಸ ಸಂಯೋಜಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಇನ್ನು, ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಹಾಲಿವುಡ್‍ನ ಜನಪ್ರಿಯ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಇದೀಗ ಹಾಲಿವುಡ್‍ನ ಜನಪ್ರಿಯ VFX ಸಂಸ್ಥೆಯಾದ ಟೊರಾಂಟೋ ಮೂಲದ MARZ, ಕನ್ನಡದ ‘45’ ಚಿತ್ರದ ಗ್ರಾಫಿಕ್ಸ್ ಕೆಲಸದ ನೇತೃತ್ವ ವಹಿಸುತ್ತದೆ. ಇದು ಈ ಸಂಸ್ಥೆ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ ಮಾಡುತ್ತಿರುವ ಭಾರತದ ಮೊದಲ ಚಿತ್ರ. ಅದರಲ್ಲೂ ಕನ್ನಡದ ಚಿತ್ರವೊಂದರಿಂದ ಈ ಪಯಣ ಶುರುವಾಗಿದೆ ಎನ್ನುವುದು ವಿಶೇಷ.
MARZ ಎಂದರೆ Monsters, Alienns, Robots, Zombies ಎಂದರ್ಥ. ಈ ಸಂಸ್ಥೆಯು ಗ್ರಾಫಿಕ್ಸ್, ಅದರಲ್ಲೂ ಪ್ರಮುಖವಾಗಿ de-aging technology ಸಂಬಂಧಿತ ಕೆಲಸ ಮಾಡುವುದರಲ್ಲಿ ನೈಪುಣ್ಯತೆ ಹೊಂದಿದೆ. ಇದಕ್ಕೂ ಮೊದಲು, ‘ಇಂಡಿಯಾನ ಜೋನ್ಸ್ – ಆ್ಯಂಡ್ ದಿ ಡಯಲ್ ಆಫ್ ಡೆಸ್ಟಿನಿ’, ‘ಸ್ಟ್ರೇಂಜರ್ ಥಿಂಗ್ಸ್’, ‘ಅಂಬ್ರೆಲಾ ಅಕಾಡೆಮಿ’, ‘ದಿ ಕ್ರಿಯೇಟರ್’, ‘ಗೂಸ್‍ಬಂಪ್ಸ್’, ‘ವೆಡ್‍ನೆಸ್ಡೆ’, ‘ಪರ್ಸಿ ಜಾಕ್ಸನ್ ಆ್ಯಂಡ್ ದಿ ಒಲಿಂಪಿಯನ್ಸ್’ ಸೇರಿದಂತೆ ಇದುವರೆಗೂ ಹಾಲಿವುಡ್‍ನ 150 ಕ್ಕೂ ಅಧಿಕ ಚಿತ್ರಗಳಿಗೆ ಗ್ರಾಫಿಕ್ಸ್ ಕೆಲಸ ಮಾಡಿ , ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಟೊರೊಂಟೊದ MARZ’ ಸಂಸ್ಥೆಯು ‘45’ ಚಿತ್ರದ VFX ಕೆಲಸ ಮಾಡುತ್ತಿದೆ.
ಈ ಸಂಸ್ಥೆಯ ರಾಫೆಲ್ ಹಾಗೂ ಜಸ್ಟಿನ್ ಅವರ ನೇತೃತ್ವದಲ್ಲಿ ಗ್ರಾಫಿಕ್ಸ್ ಕಾರ್ಯ ನಡೆಯುತ್ತಿದೆ. ಇತ್ತೀಚಿಗೆ ಈ ಚಿತ್ರದ ಗ್ರಾಫಿಕ್ಸ್ ಕೆಲಸದ ನಿಮಿತ್ತವಾಗಿ ಟೊರಾಂಟೋದ MARZ ಸಂಸ್ಥೆಗೆ ಅರ್ಜುನ್ ಜನ್ಯ ಭೇಟಿ ನೀಡಿದ್ದಾರೆ. ಗ್ರಾಫಿಕ್ಸ್ ಕೆಲಸಗಳು ಮುಗಿದ ನಂತರ, ಮುಂದಿನ ವರ್ಷ ‘45’ ಚಿತ್ರ ಬಿಡುಡೆ ಆಗುತ್ತಿದೆ.
ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರದ ಪೋಸ್ಟ್ ಪ್ರೊಡಕ್ಷಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.
‘45’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.