ಅದ್ದೂರಿಯಾಗಿ ನಡೆದ ದೀಪಿಕಾ ದಾಸ್ ಆರತಕ್ಷತೆ
ನಟಿ ದೀಪಿಕಾ ದಾಸ್ ಅವರ ಆರತಕ್ಷತೆ ಹಾಗೂ ಬೀಗರೂಟ ಅದ್ದೂರಿಯಾಗಿ ಬೆಂಗಳೂರು ನಗರದ ಖಾಸಗಿ ರೆಸಾರ್ಟ್ ನಲ್ಲಿ ನಡೆಯಿತು.;
By : The Federal
Update: 2024-03-13 13:03 GMT
ನಟಿ ದೀಪಿಕಾ ದಾಸ್ ಹಾಗೂ ದೀಪಕ್ ಅವರ ವಿವಾಹ ಕಳೆದ ವಾರ ಗೋವಾದಲ್ಲಿ ಸದ್ದಿಲ್ಲದೆ ನಡೆದಿತ್ತು. ಇದೀಗ ಬೆಂಗಳೂರು ನಗರದ ಖಾಸಗಿ ರೆಸಾರ್ಟ್ ನಲ್ಲಿ ದೀಪಿಕಾ ದಾಸ್ ಹಾಗೂ ದೀಪಕ್ ದಂಪತಿಯ ಆರತಕ್ಷತೆ ಹಾಗೂ ಬೀಗರೂಟ ಅದ್ದೂರಿಯಾಗಿ ನಡೆಯಿತು.
ಈ ವೇಳೆ ಅವರ ಆಪ್ತರು ಆಗಮಿಸಿ ದೀಪಿಕಾಗೆ ಶುಭ ಕೋರಿದ್ದಾರೆ. ನವ ದಂಪತಿಯ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅನುಪಮ ಗೌಡ, ವಾಸುಕಿ ವೈಭವ್, ದಿವ್ಯ ಉರುಡಗ, ಕಿಶನ್, ನೀತು, ಪ್ರಿಯಾಂಕ ಮುಂತಾದ ಮಿತ್ರರು, ಆತ್ಮೀಯರು ಹಾಗೂ ಬಂಧು ಬಳಗದವರು ಆರತಕ್ಷತೆಗೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.